Baba Vanga Predictions: 2024 ರಲ್ಲಿ ಸಂಭವಿಸಲಿದೆ ದೊಡ್ಡ ಅವಘಡ; ಭವಿಷ್ಯ ಕೇಳಿ ಬೆಚ್ಚಿತು ಜಗತ್ತು!

Baba Vanga Predictions: ಬಲ್ಗೇರಿಯಾ (ಬಾಲ್ಕನ್‌) ಬಾಬಾ ವಂಗಾ ಹೇಳಿರುವು ಭವಿಷ್ಯಗಳು ನಿಜವಾಗಿದ್ದು, ಇದರಲ್ಲಿ ಅವರು ಹೇಳಿರುವ ವರ್ಲ್ಡ್‌ ಟ್ರೇಡ್‌ ಸೆಂಟರ್‌ ಮೇಲೆ ನಡೆದ ದಾಳಿ ಕೂಡಾ ಒಂದು. 2023 ರಲ್ಲಿ ಬಾಬಾ ವಂಗಾ ಅವರು ಹೇಳಿದ ಕೆಲವು ವಿಚಾರಗಳು ನಿಜವಾಗಿದೆ.

1996 ರಲ್ಲಿ ನಿಧನರಾಗಿರುವ ಬಾಬಾ ವಂಗಾ ಅವರು 5079 ರ ವರೆಗೂ ವಿಶ್ವದ ಭವಿಷ್ಯವನ್ನು ಹೇಳಿದ್ದಾರೆ. ಇದುವರೆಗೆ ಅವರು ಹೇಳಿದಂತಹ ಹಲವು ಭವಿಷ್ಯವಾಣಿಗಳು ನಿಜವಾಗಿದೆ. ಮುಂದಿನ ವರ್ಷ ಅಂದರೆ 2024 ವರ್ಷದಲ್ಲಿ ಏನೆಲ್ಲಾ ನಡೆಯಲಿದೆ ಎನ್ನುವುದರ ಕುರಿತು ಐದು ಅಂಶಗಳ ಭವಿಷ್ಯ ನುಡಿದಿದ್ದಾರೆ ಬಾಬಾ ವಂಗಾ.

2023 ರಲ್ಲಿ ಸೌರ ಚಂಡಮಾರುತ ಬರಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದರು. ನಾಸಾ ಸೂರ್ಯನಿಂದ ಇದೇ ರೀತಿಯ ಜ್ವಾಲೆಗಳು ಬಂದಿದೆ ಎಂದು ಬಹಿರಂಗಪಡಿಸಿದೆ. ಇದರಿಂದ ಬಾಬಾ ವಂಗ ಭವಿಷ್ಯ ನಿಜವಾಗಿದೆ ಎಂದು ಹಲವರು ಹೇಳಿದ್ದರು.

2024 ರಲ್ಲಿ ಕೂಡಾ ಬಾಬಾ ವಂಗ ಭೀಕರ ಭವಿಷ್ಯ ನುಡಿದಿದ್ದರು. ಇದರಲ್ಲಿ ವಿಶ್ವದ ಗಣ್ಯ ನಾಯಕರೊಬ್ಬರ ಮರಣ ಕೂಡ ಉಲ್ಲೇಖ ಮಾಡಲಾಗಿದೆ. 2024 ರಲ್ಲಿ ವಿಶ್ವದ ನಾಯಕರೊಬ್ಬರ ಹತ್ಯೆ ನಡೆಯಲಿದೆ ಎಂದು ಬಾಬಾ ಭವಿಷ್ಯ ನುಡಿದಿದ್ದಾರೆ.

2024 ರಲ್ಲಿ ವಿಶ್ವ ಸೈಬರ್‌ ಅಟ್ಯಾಕ್‌ ಆಗಲಿದೆ, ಯುರೋಪ್‌ನಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಲಿದೆ ಎಂಬ ಭವಿಷ್ಯ ನುಡಿದಿದ್ದಾರೆ. ಜಗತ್ತು ಹವಾಮಾನ ಬದಲಾವಣೆಯ ಅಪಾಯಗಳನ್ನು ಎದುರಿಸಲಿದ್ದು, ಕ್ಯಾನ್ಸರ್‌ಗೆ ಔಷಧಿ ಕಂಡು ಹಿಡಿಯುತ್ತಾರೆ ಎಂದು ಹೇಳಿದ್ದಾರೆ.

Leave A Reply

Your email address will not be published.