Cyclone Michaung Effect: ಡಿ.7, 8 ರಂದು ಕರಾವಳಿಗೆ ಬರಲಿದೆ ಬಿರುಸಾದ ಮಳೆ; ಚುಮು ಚುಮು ಚಳಿಗೆ ವರುಣನ ಸಾಥ್‌!!

Karnataka Weather Update: ರಾಜ್ಯದಲ್ಲಿ ಭಾನುವಾರದಿಂದಲೇ ಚಂಡಮಾರುತದ ಪ್ರಭಾವ ಕಂಡು ಬರುವ ಎಲ್ಲಾ ಲಕ್ಷಣ ಕಂಡು ಬಂದಿದೆ. ಡಿ.7,8 ರಂದು ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.

ರಾಜ್ಯದಲ್ಲಿ ಈಗಾಗಲೇ ಹವಾಮಾನ ಇಲಾಖೆ ಮುಂದಿನ ಎರಡು ದಿನಗಳಲ್ಲಿ ಹಗುರ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. ಭಾನುವಾರ ರಾತ್ರಿಯಿಂದಲೇ ದಕ್ಷಿಣ ಒಳನಾಡಿನ ಪ್ರದೇಶದಲ್ಲಿ ತುಂತುರು ಮಳೆ ಈಗಾಗಲೇ ಪ್ರಾರಂಭವಾಗಿದೆ.

ಈಗಾಗಲೇ ಮೂರು ರಾಜ್ಯಗಳಲ್ಲಿ ಕಟ್ಟೆಚ್ಚರವನ್ನು ನೀಡಲಾಗಿದೆ. ಆಂಧ್ರಪ್ರದೇಶ, ಒಡಿಶಾ, ತಮಿಳುನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಗಂಟೆಗೆ 100-130 ಕಿ.ಮೀ. ವೇಗದಲ್ಲಿ ಮೈಚಾಂಗ್‌ ಚಂಡಮಾರುತ ಬರಲಿದೆ. ಆಂದ್ರದ ನೆಲ್ಲೂರು, ಮಚಲಿಪಟ್ಟಣದ ಕರಾವಳಿಗೆ ಚಂಡಮಾರುತ ಅಪ್ಪಳಿಸುವುದರಿಂದ ಮೀನುಗಾರರನ್ನು ಸಮುದ್ರಕ್ಕೆ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆ ಹೇಳಿದೆ.

Leave A Reply

Your email address will not be published.