Cat Bite Death: ಬೆಕ್ಕು ಕಚ್ಚಿ ತಂದೆ-ಮಗ ಸಾವು!!!

Kanpur Cat Bite Death: ತಂದೆ ಮಗ ಇಬ್ಬರಿಗೆ ಮನೆಯಲ್ಲಿ ಸಾಕಿದ್ದ ಬೆಕ್ಕೊಂದು ಕಚ್ಚಿದ್ದು, ಇದರಿಂದಾಗಿ ಮನೆಯ ಯಜಮಾನ ತಂದೆ ಮತ್ತು ಮಗ ದಾರುಣವಾಗಿ ಮರಣ ಹೊಂದಿದ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.

ಅವರ ಮನೆಯಲ್ಲಿ ಸಾಕಿದ್ದ ಬೆಕ್ಕಿಗೆ ನಾಯಿಯೊಂದು ಕಚ್ಚಿತ್ತು ಎಂದು ಮನೆಮಂದಿ ತಿಳಿಸಿದ್ದಾರೆ. ಅನಂತರ ಬೆಕ್ಕು ತಂದೆ-ಮಗ ಇಬ್ಬರಿಗೂ ಕಚ್ಚಿದ್ದು, ಒಂದು ವಾರದ ಅಂತರದಲ್ಲಿ ಮರಣ ಹೊಂದಿದ್ದಾರೆ.

ಘಟನೆ ವಿವರ: ಕಾನ್ಪುರ ನಗರದ ಅಕ್ಬರ್‌ ಪುರದಲ್ಲಿ ಇವರ ಮನೆಯಿದ್ದು ಮನೆಯಲ್ಲಿ ಮುದ್ದಿನಿಂದ ಒಂದು ಬೆಕ್ಕನ್ನು ಸಾಕಿದ್ದರು. ಕುಟುಂಬದ ಸದಸ್ಯರೆಲ್ಲರೂ ಪ್ರೀತಿಯಿಂದಲೇ ಬೆಕ್ಕನ್ನು ಸಾಕಿದ್ದರು. ಒಂದು ದಿನ ಆ ಬೆಕ್ಕಿಗೆ ಬೀದಿನಾಯಿಯೊಂದು ಕಚ್ಚಿದೆ. ಕಚ್ಚಿದ ಕೆಲವೇ ದಿನಗಳಲ್ಲಿ ಆ ಬೆಕ್ಕಿನ ದೇಹದಲ್ಲಿ ರೇಬಿಸ್‌ ಲಕ್ಷಣಗಳು ಕಾಣಿಸಿಕೊಂಡಿದೆ.

ಬೆಕ್ಕು ತನ್ನ ಮನೆಯ ಸದಸ್ಯರ ಜೊತೆ ಆಡುತ್ತಿರುವಾಗ ಮಾಲೀಕನ ಮಗನಿಗೆ ಗಾಯ ಮಾಡಿದೆ. ಕೆಲದಿನಗಳಲ್ಲೇ ಆತನ ಆರೋಗ್ಯ ಹದಗೆಟ್ಟಿದೆ. ಕೊನೆಗೆ ಆತ ಬೆಕ್ಕಿನ ರೀತಿ ವರ್ತಿಸಲು ಶುರು ಮಾಡಿದ್ದ. ಕೊನೆಗೆ ಮೃತಪಟ್ಟಿದ್ದ. ಮಗ ಮರಣದ ನಂತರ ಕೆಲ ದಿನಗಳಲ್ಲಿ ತಂದೆಗೆ ಕೂಡಾ ಅದೇ ರೀತಿಯ ಲಕ್ಷಣಗಳು ಕಂಡು ಬಂತು. ಅವರು ಕೂಡಾ ಕೆಲದಿನಗಳಲ್ಲಿ ಮರಣ ಹೊಂದಿದರು.

ಇದು ವಿಷಯ ಎಲ್ಲಾ ಕಡೆ ತಿಳಿದ ನಂತರ ಅವರ ಮನೆಗೆ ಯಾರೂ ಭೇಟಿ ನೀಡುತ್ತಿಲ್ಲ ಎಂದು ವರದಿಯಾಗಿದೆ. ಆ ಮನೆಯ ಸುತ್ತಮುತ್ತ ಜ ಓಡಾಡೋದಿಕ್ಕೂ ಭಯ ಪಡುತ್ತಿದ್ದಾರೆನ್ನಲಾಗಿದೆ. ಆ ಮನೆಯಲ್ಲಿ ಉಳಿದಿರುವ ಸದಸ್ಯರನ್ನು ಬೇರೆ ಕಡೆಗೆ ಸಾಗಿಸಲಾಗಿದ್ದು, ಅವರು ಸುರಕ್ಷಿತರಾಗಿದ್ದಾರೆ.

ಯಾರೇ ಆಗಲಿ ಸಾಕು ಪ್ರಾಣಿಗಳಿಗೆ ರೇಬಿಸ್‌ ಇಂಜೆಕ್ಷನ್‌ ಗಳನ್ನು ಹಾಕಿಸಲೇಬೇಕು. ಯಾವುದೇ ಸಾಕು ಪ್ರಾಣಿ ಮನೆಯ ಸದಸ್ಯರಿಗೆ ಕಚ್ಚಿದರೆ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಲೇಬೇಕು ಎಂದು ವೈದ್ಯರು ಹೇಳುತ್ತಾರೆ.

Leave A Reply

Your email address will not be published.