Pro Kabaddi PKL 10: ಸೋಲಿನ ಬಂಡಿಯೇರಿ ಬೆಂಗಳೂರು ಬುಲ್ಸ್ ಪ್ರಯಾಣ ಶುರು, ತಮಿಳ್ ತಲೈವಾಸ್ ವಿಜೃಂಭಣೆ !

 

Pro Kabaddi League 2023: 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ನ (Pro Kabaddi league 2023) ನಿನ್ನೆ, ಡಿಸೆಂಬರ್ 3ರಂದು ನಡೆದ ಪ್ರೊ ಕಬಡ್ಡಿ ಲೀಗ್ ನ ಮೂರನೆಯ ಪಂದ್ಯದಲ್ಲಿ ತಮಿಳ್ ತಲೈವಾಸ್ ದಬಾಂಗ್ ಡೆಲ್ಲಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ದಿನದ ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಕಠಿಣ ಪ್ರತಿರೋಧ ಒಡ್ಡಿದ ನಂತರವೂ ಗುಜರಾತ್ ಜೈಂಟ್ಸ್ ಮುಂದೆ ಸೋಲನ್ನೊಪ್ಪಿಕೊಳ್ಳಬೇಕಾಯಿತು.

ತಮಿಳ್ ತಲೈವಾಸ್ ತಂಡದ ಸ್ಟಾರ್ ರೈಡರ್, ಮಹಾರಾಷ್ಟ್ರದ ಅಜಿಂಕ್ಯ ಪವಾರ್ ದಬಾಂಗ್ ಡೆಲ್ಲಿ ವಿರುದ್ಧ ಬರೋಬ್ಬರಿ 21 ಅಂಕ ಸಂಪಾದಿಸುವ ದಿಲ್ಲಿಯ ಭದ್ರಕೋಟೆಯನ್ನು ಪುಡಿಪುಡಿ ಮಾಡಿದರು. ತನ್ನ ಅದ್ಭುತ ಪ್ರದರ್ಶನದ ನೆರವಿನಿಂದ ತಲೈವಾಸ್ 42-31 ಅಂಕಗಳ ಅಂತರದಿಂದ ಅದ್ಭುತ ಗೆಲುವು ಸಾಧಿಸಿತು. ಜೊತೆಗೆ ಈ ಗೆಲುವಿನಲ್ಲಿ ತಮಿಳು ತಲೈವಾಸ್ ನಾ ಸಂಘಟಿಕ ಪ್ರಯತ್ನ ಎದ್ದು ಕಾಣುತ್ತಿದೆ ಈ ಮೂಲಕ ಪ್ರೊ ಕಬಡ್ಡಿ ಹತ್ತರಲ್ಲಿ ತಮಿಳು ತಲೈವಾಸ್ ಫೇವರಿಟ್ ತಂಡವಾಗುವ ಆರಂಭಿಕ ಲಕ್ಷಣವನ್ನು ತೋರಿಸಿದೆ.

ಆರಂಭದಲ್ಲಿ ಎರಡೂ ತಂಡಗಳು ಸಹ ಬಹಳ ಎಚ್ಚರಿಕೆಯಿಂದ ಆಟವಾಡಿದ್ದು, ಪ್ರಾರಂಭದಲ್ಲೇ ಹಗ್ಗ ಜಗ್ಗಾಟ ಜೋರಾಗಿ ಪ್ರಾರಂಭವಾಯಿತು. ಸಮಯ ಕಳೆದಂತೆ ತಮಿಳ್ ತಲೈವಾಸ್ ತನ್ನ ಪ್ರಾಬಲ್ಯವನ್ನು ಮೆರೆಯುತ್ತಾ ಹೋಯಿತು. ತಲೈವಾಸ್ ಪರ ಅಜಿಂಕ್ಯ ಪವಾರ್ ಅಲ್ಲದೆ, ಸಾಹಿಲ್ ಗುಲಿಯಾ ಮಿಂಚಿನ ಆಟವಾಡಿದರೆ, ದಬಾಂಗ್ ಡೆಲ್ಲಿ ಪರ ಸ್ಟಾರ್ ರೈಡರ್ ನವೀನ್ ಮತ್ತು ಅಶು ಮಲಿಕ್ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದರು. ಪ್ರಥಮಾರ್ಧದಲ್ಲಿ 4 ಅಂಕಗಳ ಮುನ್ನಡೆಯಲ್ಲಿದ್ದ ತಮಿಳು ತಲೈವಾಸ್ ಮತ್ತಷ್ಟು ಆಕ್ರಮಣಕಾರಿ ಆಟಕ್ಕೆ ಮುಂದಾಗಿ ಅದರಲ್ಲಿ ಯಶಸ್ವಿಯಾಯಿತು. ರೈಡರ್ ಅಜಿಂಕ್ಯ ಸೂಪರ್ 10 ಅನ್ನು ದಾಖಲಿಸಿದರು. ಅಲ್ಲಿಂದ ಪಂದ್ಯದ ಅದಕ್ಕೆ ಬದಲಾಗಿ ಹೋಯಿತು. ಕೊನೆಯ 8 ನಿಮಿಷದಲ್ಲಿ ಮಿಂಚಿದ ತಮಿಳರ ತಲೈವಾಸ್, ತಮ್ಮ ಗೆಲುವನ್ನು ಕನ್ಫರ್ಮ್ ಮಾಡಿಕೊಂಡಿತು. 2ನೇ ಅವಧಿಯಲ್ಲೂ ಡೆಲ್ಲಿ ಕಳಪೆ ಆಟ ಪ್ರದರ್ಶಿಸಿ ಸೋಲೊಪ್ಪಿಕೊಂಡಿತು.

ನಡೆಯದ ಕಂಬಳದ ಕೋಣಗಳ ಆಟ:
ನಿನ್ನೆ, ಡಿಸೆಂಬರ್ 3ರಂದು ಜರುಗಿದ 2ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ನ ಪ್ರಾರಂಭದಲ್ಲಿ ಅಕ್ರಮಣವಾಗಿ ಆಡಿ ಲೀಡ್ ಪಡೆದುಕೊಂಡಿತ್ತು. ನಿನ್ನೆ ಬೆಂಗಳೂರು ಬುಲ್ಸ್ ಗೆ ಇದು ಪ್ರಥಮ ಪಂದ್ಯ. ತನ್ನ ಮೊದಲ ಪಂದ್ಯದಲ್ಲಿ ಗೆಲ್ಲುವ ಎಲ್ಲಾ ಅವಕಾಶಗಳು ಬೆಂಗಳೂರು ಪಾಲಿಗೆ ಇದ್ದರೂ, ಗೆಲ್ಲಬೇಕಿದ್ದ ಅವಕಾಶವನ್ನು ಬುಲ್ಸ್ ಕೈಚೆಲ್ಲಿತ್ತು. ಕೊನೆಯ ಕೆಲ ನಿಮಿಷಗಳಲ್ಲಿ ಗುಜರಾತ್ ಜೈಂಟ್ಸ್ ಡಿಫೆನ್ಸ್ ಭರ್ಜರಿ ಪ್ರದರ್ಶನ ತೋರಿಸಿತು. ಬೆಂಗಳೂರು ಬುಲ್ಸ್ ಆಟಗಾರರನ್ನು ಲಾಬಿಯಲ್ಲೇ ಹಿಡಿದು ಮಡಚಿ ಹಾಕಲು ಶುರುಮಾಡಿತು. ಏಕಾಏಕಿ ಜೈಂಟ್ಸ್ ನ ಉದ್ವಿಗ್ನತೆ ಮುಂದೆ ಬೆಂಗಳೂರು ಬುಲ್ಸ್ ತತ್ತರಿಸಿತು. ಈ ಮೂಲಕ ಬೆಂಗಳೂರು ಬುಲ್ಸ್ ತಂಡವು ಸೋಲನ್ನು ಒಪ್ಪಿಕೊಂಡರೆ ಗುಜರಾತ ಸೂಪರ್ ಜಾನ್ಸ್ ಎರಡನೆಯ ಮಹಾ ಗೆಲುವಿನ ಮೂಲಕ 34-31 ರಿಂದ ಗೆಲುವಿನ ನಗೆ ಬೀರಿತು. ಮೊದಲಾರ್ಧದ ಅಂತ್ಯಕ್ಕೆ ಬೆಂಗಳೂರು 20-14 ಅಂಕಗಳ ಮುನ್ನಡೆ ಪಡೆದಿದ್ದು ವ್ಯರ್ಥವಾಯಿತು.
31ನೇ ನಿಮಿಷದಲ್ಲಿ ಖಂಡೋಲಾ ಅದ್ಭುತ ರೈಡ್ ಮಾಡಿದರೂ ಜೈಂಟ್ಸ್, 26-24ರಲ್ಲಿ ಮುನ್ನಡೆ ಸಾಧಿಸಿತು. 39ನೇ ನಿಮಿಷದಲ್ಲಿ ಭರತ್ ಗಳಿಸಿದ ಅಂಕಗಳಿಂದ ಗುಜರಾತ್ 34-31 ರ ಮುನ್ನಡೆಯಲ್ಲಿ ಕಟ್ಟಿ ಹಾಕಲು ಸಾಧ್ಯ ಆಯಿತು.

Leave A Reply

Your email address will not be published.