ಉಜಿರೆ ಸೌಜನ್ಯಾ ಸಮಾವೇಶ ಹೈಲೈಟ್: ಸುಂದರ ಪತ್ನಿಯ ಜತೆ ಅಲ್ಲಿಗೆ ಹೋದ್ರೆ ಕತೆ ಏನ್ಮಾಡ್ತಾರೆ, ಗಿರೀಶ್ ಮಟ್ಟಣ್ಣನವರ್‌ ಬಿಚ್ಚಿಟ್ಟ ರಹಸ್ಯ!

ಉಜಿರೆ ಸೌಜನ್ಯಾ ಸಮಾವೇಶ ಹೈಲೈಟ್: ಸುಂದರ ಪತ್ನಿಯ ಜತೆ ಅಲ್ಲಿಗೆ ಹೋದ್ರೆ ಕತೆ ಏನ್ಮಾಡ್ತಾರೆ, ಗಿರೀಶ್ ಮಟ್ಟನ್ನನವರ್ ಬಿಚ್ಚಿಟ್ಟ ರಹಸ್ಯ!

ಉಜಿರೆ SDM ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಸೌಜನ್ಯ ಗೌಡರನ್ನು ಅತ್ಯಾಚಾರ ಮತ್ತು ಕೊಲೆ ಮಾಡಿದ ಪ್ರಕರಣದ ಹೋರಾಟ ದಿನೇ ದಿನೇ ಏರುತ್ತಿದ್ದು ನಿನ್ನೆ ಕೂಡ ಉಜಿರೆಯಲ್ಲಿ ಬೃಹತ್ ಪ್ರಮಾಣದ ಸಮಾವೇಶ ನಡೆದಿದೆ. ಕರಾವಳಿಯ ಸುತ್ತಮುತ್ತ ಹಲವು ಕಡೆಗಳಲ್ಲಿ ಸಮಾವೇಶಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಕೂಡ ನಿನ್ನೆ ಉಜಿರೆಗೆ ಹರಿದು ಬಂದ ಜನಸಾಗರ ಕಂಡು ಹೋರಾಟಗಾರರು ಇನ್ನಿಲ್ಲದ ಉತ್ಸಾಹಗೊಂಡಿದ್ದರು.

ಸಮಾವೇಶದಲ್ಲಿ ಎಂದಿನಂತೆ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್, ದೈವ ಚಿಂತಕ ಮತ್ತು ವಾಗ್ಮಿ ತಮ್ಮಣ್ಣ ಶೆಟ್ಟಿ, ಪ್ರಸನ್ನ ರವಿ, ಸಂತ್ರಸ್ತ ತಾಯಿ ಕುಸುಮಾವತಿ ಮತ್ತಿತರರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಗಿರೀಶ್ ಮಟ್ಟಣ್ಣನವರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ ತಮ್ಮ ಎಂದಿನ ಶೈಲಿಯಲ್ಲಿ, ಅಕ್ರಮಣಶಾಲಿಯಾಗಿ ಮಾತನಾಡಿದ ಮಾಜಿ ಪೊಲೀಸ್ ಗಿರೀಶ್ ಮಟ್ಟಣ್ಣನವರ್, ಪ್ರತಿ ಬಾರಿಯಂತೆ ಈ ಬಾರಿ ಕೂಡ ಪ್ರೊಜೆಕ್ಟರ್ ಉಪಯೋಗಿಸಿ ಜನರನ್ನು ಜಾಗೃತಿ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಈ ಸಂದರ್ಭ ಗಿರೀಶ್ ಮಟ್ಟಣ್ಣನವರ್ ನೀಡಿದ ಹೇಳಿಕೆ ಭಾರಿ ಮಹತ್ವ ಪಡೆದುಕೊಂಡಿದೆ.

ಹೌದು, ಉಜಿರೆಯ ಸೌಜನ್ಯ ಸಮಾವೇಶದಲ್ಲಿ ಗಿರೀಶ್ ಮಟ್ಟಣ್ಣನವರ್ ಸೂಚ್ಯವಾಗಿ ಆಗಿರುವ ಬೆಳವಣಿಗೆಯೊಂದರ ಬಗ್ಗೆ ಗಮನ ಸೆಳೆದಿದ್ದಾರೆ. ಇನ್ನೊಂದು ಅಥವಾ ಎರಡು ತಿಂಗಳಿನಲ್ಲಿ ರಿಸಲ್ಟ್ ಕೊಡುವುದಾಗಿ ಗಿರೀಶ್ ಮಟ್ಟನ್ನನವರ್ ಹೇಳಿದ್ದು ಆ ಮಾತು ನಿನ್ನೆ ಅಲ್ಲಿ ಸೇರಿದ ಜನರ ಅಪಾರ ಸಂತೋಷಕ್ಕೆ ಕಾರಣವಾಯಿತು. ಅದರ ಜತೆಗೆ ತಮ್ಮ ಬಳಿ ಎಲ್ಲಾ ಸಾಕ್ಷಿಗಳು ಇದೆ ಎಂದಿದ್ದು, ತನಿಖೆ ಶುರುವಾದ ಕೂಡಲೇ ಸೌಜನ್ಯ ಅತ್ಯಾಚಾರ ಕೊಲೆ ಮಾತ್ರವಲ್ಲ ಇನ್ನೂ ಹಲವಾರು ಅತ್ಯಾಚಾರ ಕೊಲೆಗಳ ಸಾಕ್ಷಿಗಳನ್ನು ಮುಂದಿಡುವುದಾಗಿ ಹೇಳಿದ್ದಾರೆ. ಅಲ್ಲದೆ ಧರ್ಮಸ್ಥಳ ಗ್ರಾಮದಲ್ಲಿ ಜೋಡಿಗಳನ್ನು ದುರ್ಬಳಕೆ ಮಾಡಿಕೊಳ್ಳುವ ಬಗೆಗೆ ಇರುವ ಸುದ್ದಿಗಳ ಬಗ್ಗೆ ಮಟ್ಟನ್ನವರ್ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಬರುವ ಸುಂದರ ಹೆಂಡಿರ ಗಂಡನನ್ನು ಕೂಡಿಹಾಕಿ, ಹುಡುಗಿಯನ್ನು ಬಳಸಿಕೊಳ್ಳುವ ಬಗ್ಗೆ ಸ್ಪೋಟಕ ಮಾಹಿತಿ ಹೊರಹಾಕಿದ್ದು, ತಮ್ಮ ಬಳಿ ಈ ಸಂಬಂಧಿ ಸಾಕ್ಷಿ ಇದೆ ಎಂದಿದ್ದಾರೆ ಗಿರೀಶ್ ಮಟ್ಟನ್ನನವರ್. ಗಂಡನನ್ನು ರೂಮಿನಲ್ಲಿ ಕೂಡಿ ಹಾಕಲಾಗುತ್ತದೆ, ನಂತರ ಹೆಂಡತಿಯನ್ನು ರೇಪ್ ಮಾಡುವ ಬಗ್ಗೆ ಮಟ್ಟನ್ನನವರ್ ಮಾತಾಡಿದ್ದಾರೆ.

ಜೊತೆಗೆ ಸೌಜನ್ಯ ಅತ್ಯಾ ಪ್ರಕರಣದಲ್ಲಿ ಎಲ್ಲರೂ ಸಾಕ್ಷಿ ಕೇಳುತ್ತಿದ್ದಾರೆ. ತನಿಕೆ ಶುರುವಾದರೆ ಸಾಕ್ಷಿ ಕೊಡುತ್ತೇವೆ. ಆದರೆ ನಾಗರಿಕ ಸೇವಾ ಟ್ರಸ್ಟ್ ಸರ್ಕಾರಿ ದಾಖಲೆಗಳ ಮೂಲಕ ಸಾಕ್ಷಿ ಸಮೇತ ದಾಖಲೆಗಳನ್ನು ಎದುರಿಗೆ ಇಟ್ಟಿದೆ. ಆದರೂ ಕಳ್ಳರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಗಿರೀಶ್ ಮಟ್ಟಣ್ಣನವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರ ಜೊತೆಗೆ ರಕ್ತ ರಕ್ತ ಹಸ್ತಾಕ್ಷರ ಚಳವಳಿ ಆರಂಭವಾಗಿದೆ. ಸ್ವತಹ ಸೌಜನ್ಯ ಹೋರಾಟಗಾರರು ತಮ್ಮದೇ ರಕ್ತ ಹಸ್ತಾಕ್ಷರ ಹಾಕುವ ಮೂಲಕ ಚಳವಳಿಗೆ ಚಾಲನೆ ನೀಡಲಾಯಿತು. ಸಾವಿರಾರು ಯುವಕರು ತಮ್ಮ ರಕ್ತದ ಹೆಬ್ಬೆಟ್ಟು ಒತ್ತಿ ಆ ಮನವಿ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಪ್ರಧಾನ ಮಂತ್ರಿ ಮೋದಿಯವರಿಗೆ ತಲುಪಿಸಲು ಚಳವಳಿ ಆರಂಭವಾಗಿದೆ. ಇಂತಹ ಲಕ್ಷಾಂತರ ಧರ್ಮಸ್ಥಳ ಗ್ರಾಮದ ಭೂಪತಿಗಳ ವಿರುದ್ಧ ಆಕ್ರೋಶ ಮೊಳಗುತ್ತಿದ್ದರೂ, ಪ್ರಜಾಪ್ರಭುತ್ವ ಆಯ್ಕೆಮಾಡಿದ ಜನ ಪ್ರತಿನಿಧಿಗಳು ಮಾತ್ರ ದುಷ್ಟರ ಪರ ನಿಂತಿರುವುದು ಮತದಾರರಲ್ಲಿ ಆತಂಕ ಉಂಟುಮಾಡಿದೆ.

Leave A Reply

Your email address will not be published.