Kerala crime: ಒಂದೂವರೆ ತಿಂಗಳ ಮಗುವನ್ನೇ ಕೊಂದ ಲಿವ್‌-ಇನ್‌-ರಿಲೇಷನ್‌ಶಿಪ್‌ ಜೋಡಿ! ಕಾರಣವೇನು ಗೊತ್ತೇ?

Kerala live in couple held for alleged murder of one-and-a-half-month baby at Kochi lodge

Kerala crime: ಒಂದೂವರೆ ತಿಂಗಳ ಮಗುವೊಂದನ್ನು ಕೊಂದ ಘಟನೆಯೊಂದು ಕೇರಳದ ಕೊಚ್ಚಿಯ ಲಾಡ್ಜ್‌ನಲ್ಲಿ ನಡೆದಿದೆ(Kerala crime). ಈ ಘಟನೆ ಸಂಬಂಧ ಲಿವ್‌-ಇನ್‌-ರಿಲೇಷನ್‌ಶಿಪ್‌ನಲ್ಲಿದ್ದ ಮಹಿಳೆ, ಪುರುಷನನ್ನು ಸೋಮವಾರ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಎಲಮಕ್ಕರ ಪೊಲೀಸರು ಈ ಜೋಡಿಯನ್ನು ವಶಕ್ಕೆ ಪಡೆದಿದೆ.

ಮಹಿಳೆ ಅಶ್ವತಿ ಅಲಪ್ಪುಳದವರು, ಆಕೆಯ ಸಂಗಾರಿ ಶನಿಫ್‌ ಕಣ್ಣೂರಿನವರು. ಇವರು ಭಾನುವಾರ ಬೆಳಗ್ಗೆ 8.30ರ ಸುಮಾರಿಗೆ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಮಗು ಯಾವುದೇ ಸ್ಪಂದನೆ ನೀಡುತ್ತಿಲ್ಲ ಎನ್ನಲಾಗಿದೆ. ಮಗುವಿನ ಮೈಮೇಲೆ ಆದ ಗಾಯ ಕಂಡು ಆಸ್ಪತ್ರೆ ಸಿಬ್ಬಂದಿ ಅನುಮಾನಗೊಂಡಿದ್ದಾರೆ. ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ತಲೆಬುರುಡೆಯಲ್ಲಿ ಗಾಯ ಕಂಡು ಬಂದಿದ್ದು, ಕೂಡಲೇ ಎಲಮಕ್ಕರ ಪೊಲೀಸರು ಜೋಡಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇವರಿಬ್ಬರು ಇನ್‌ಸ್ಟಾಗ್ರಾಂ ಮೂಲಕ ಪರಿಚಯಗೊಂಡಿದ್ದು, ನಂತರ ಲಿವ್‌ಇನ್‌ ರಿಲೇಷನ್‌ನಲ್ಲಿ ಇದ್ದರು ಎನ್ನಲಾಗಿದೆ.

ಮಹಿಳೆ ಈ ಮೊದಲು ಬೇರೊಬ್ಬ ವ್ಯಕ್ತಿ ಜೊತೆ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಮಗುವಿನ ಪಿತೃತ್ವದ ವಿಚಾರದಲ್ಲಿ ಜಗಳ ನಡೆದಿದು, ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪ್ರಾಥಮಿಕ ಮೂಲಗಳು ತಿಳಿಸಿದೆ ಎಂದು ವರದಿಯಾಗಿದೆ. ಈ ಹತ್ಯೆಯಲ್ಲಿ ತಾಯಿಯ ಪಾತ್ರವೇನು ಎಂದು ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.

ಇವರಿಬ್ಬರು ಕಾನೂನು ಬದ್ಧವಾಗಿ ಮದುವೆಯಾಗಿಲ್ಲ. ಹಾಗೂ ಆಕೆ ಮಗುವಿನ ಹತ್ಯೆಯಲ್ಲಿ ನನ್ನ ಪಾತ್ರವಿಲ್ಲ. ನಾನು ನಿದ್ದೆ ಮಾಡುತ್ತಿದ್ದೆ. ಮಗುವಿಗೆ ಏನಾಯಿತು ಎಂದು ತಿಳಿದಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಇವರಿಬ್ಬರು ಕಳೆದ ಕೆಲ ದಿನಗಳಿಂದ ಕರುಕಪ್ಪಲ್ಲಿಯ ಲಾಡ್ಜ್‌ನಲ್ಲಿ ಇದ್ದರು ಎನ್ನಲಾಗಿದೆ. ವರದಿಯ ಪ್ರಕಾರ ಆರೋಪಿಗಳು ಮಗು ಜನಿಸಿದ ದಿನವೇ ಕೊಲ್ಲಲು ಯೋಜನೆ ಮಾಡಿದ್ದರು ಎನ್ನಲಾಗಿದೆ. ಇವರು ಅವಕಾಶಕ್ಕಾಗಿ ಕಾಯುತ್ತಿದ್ದು, ಮಗುವನ್ನು ಕೊಲ್ಲಲು ಲಾಡ್ಜ್‌ನಲ್ಲಿ ರೂಮ್‌ ಮಾಡಿದ್ದರು ಎನ್ನಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಸ್ಥಳೀಯ ಸಂಸ್ಥೆಗಳ ಉಪಚುನಾವಣೆಗೆ ದಿನಾಂಕ ನಿಗದಿ; ಪುತ್ತೂರು ನಗರ ಸಭೆಯಲ್ಲೂ 2 ಸ್ಥಾನಗಳಿಗೆ ನಡೆಯಲಿದೆ ಎಲೆಕ್ಷನ್‌!!

Leave A Reply

Your email address will not be published.