Shivamogga: ಪರೀಕ್ಷೆ ಬರೆಯಲೆಂದು ಹೋದ ವಿದ್ಯಾರ್ಥಿನಿ ಕಾಲೇಜು ಕಟ್ಟಡದಿಂದ ಜಿಗಿದು ಆತ್ಮಹತ್ಯೆ! ಕಾರಣ?

Shivamogga: ಪರೀಕ್ಷೆಗೆಂದು ಹೋದ ವಿದ್ಯಾರ್ಥಿನಿ ಕಾಲೇಜು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ನಡೆದಿದೆ. ಈ ಘಟನೆ ಶಿವಮೊಗ್ಗದ ಆದಿಚುಂಚನಗಿರಿ ಕಾಲೇಜಿನಲ್ಲಿ ನಡೆದಿದೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮೇಘಶ್ರೀ (18) ಆತ್ಮಹತ್ಯೆಗೆ ಶರಣಾದ ಯುವತಿ. ದಾವಣಗೆರೆಯ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಚೆನ್ನಾಪುರ ನಿವಾಸಿ. ಶಿವಮೊಗ್ಗದ ಆದಿಚುಂಚನಗಿರಿ ಕಾಲೇಜಿನಲ್ಲಿ ಮೇಘಶ್ರೀ ಹಾಸ್ಟೆಲ್‌ನಲ್ಲಿದ್ದಳು.

ಇಂದು ಬಯಾಲಜಿ ಪರೀಕ್ಷೆ ಬರೆಯಲು ಕಾಲೇಜಿಗೆಂದು ಹೋಗಿದ್ದ ಮೇಘಶ್ರೀ ವಾಶ್‌ ರೂಂ ಗೆ ಹೋಗುವುದಾಗಿ ಹೇಳಿ ಹೋದಾಕೆ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ದೊಡ್ಡಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನು ಓದಿ: ಈ ಸಿಂಪಲ್ ಟಿಪ್ಸ್ ಆಫ್ ಫಾಲೋ ಮಾಡಿದರೆ ಸಾಕು ನಿಮ್ಮ ಕೈಗೆ ಹಚ್ಚುವ ಮೆಹಂದಿ ಬೇಗ ರೆಡ್ ಆಗುತ್ತೆ!

Leave A Reply

Your email address will not be published.