ರಾಜ್ಯ ಪ್ರವಾಸಕ್ಕೆಂದು ತೆರಳಿದ್ದ ನರ್ಸಿಂಗ್ ವಿದ್ಯಾರ್ಥಿ! ಗೆಳೆಯರ ಕಣ್ಣೆದುರೇ ಸಮುದ್ರ ಪಾಲು!

death news nursing student dies after going to play in the sea

ಗೋಕರ್ಣ ಸಮುದ್ರ ತೀರಕ್ಕೆ ಪ್ರವಾಸಕ್ಕೆಂದು ತೆರಳಿದ್ದ ನರ್ಸಿಂಗ್ ವಿದ್ಯಾರ್ಥಿ ನೀರು ಪಾಲಾಗಿದ್ದು, ಆತನ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಮೃತ ದುರ್ದೈವಿ ಆಕಾಶ ಬಿರಾದಾರ (25) ಎಂಬವನಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ತನ್ನ ಗೆಳೆಯನ ಮದುವೆ ಇದೆ ಎಂಬ ಕಾರಣಕ್ಕಾಗಿ ಮದುವೆಗೂ ಮುನ್ನ ರಾಜ್ಯ ಪ್ರವಾಸ ಮಾಡೋಣ ಎಂದು ಐದು ಜನ ಗೆಳೆಯರು ಒಡಗೂಡಿ ಬಾಡಿಗೆ ಕಾರಿನಲ್ಲಿ ಪ್ರವಾಸಿ ತಾಣಗಳನ್ನು ಸುತ್ತುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಕಲಬುರ್ಗಿಯ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಆಕಾಶ್ ಬಿರಾದಾರ ಹಾಗೂ ಆತನ ನಾಲ್ಕು ಜನ ಜನ ಗೆಳೆಯರು ಸಮುದ್ರ ವೀಕ್ಷಣೆಯ ಸಲುವಾಗಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಸಮುದ್ರಕ್ಕೆ ಡಿ.3 ರಂದು ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಐವರಲ್ಲಿ ಇಬ್ಬರು ಮೊದಲು ಸಮುದ್ರಕ್ಕೆ ಇಳಿದು, ಇನ್ನೊಬ್ಬನನ್ನು ತನ್ನ ಬಳಿಗೆ ಕರೆಯುವ ವೇಳೆಗೆ ಆಕಾಶ್ ಹಾಗೂ ಅಭಿಷೇಕ್ ಎಂಬ ಯುವಕರನ್ನು ಸಮುದ್ರದ ಅಲೆ ತನ್ನೆಡೆಗೆ ಸೆಳೆದುಕೊಂಡಿದೆ. ಇನ್ನೊಬ್ಬ ಯುವಕ ನೀರು ಪಾಲಾಗುವುದರಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದ.‌

ಇದನ್ನು ಓದಿ: ಒಂದು ಪ್ಲೇಟ್​ ದೋಸೆಯ ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರ! ನೋಡಿ, ಇಲ್ಲಿದೆ ವೈರಲ್​ ವಿಷ್ಯ

ನೀರು ಪಾಲಾದ ಆಕಾಶ್‌ನನ್ನು ಅಲ್ಲೇ ಇದ್ದ ಮೀನುಗಾರರು ಹಾಗೂ ಕಡಲ ರಕ್ಷಣಾ ತಂಡದವರು ಉಳಿಸುವ ಪ್ರಯತ್ನ ಮಾಡಿದ್ದು, ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗುತ್ತಿರುವ ವೇಳೆಗೆ ಮಾರ್ಗ ಮಧ್ಯದಲ್ಲಿ ಆಕಾಶ್ ಕೊನೆಯುಸಿರೆಳೆದಿದ್ದಾನೆ. ಈ ವಿಷಯವನ್ನು ಕೇಳಿ, ವೈದ್ಯನಾಗಬೇಕೆಂದು ಕನಸು ಕಟ್ಟಿಕೊಂಡಿದ್ದ, ಹಳೆ ಮನೆ ಕೆಡೆವಿ ಹೊಸ ಮನೆ ಕಟ್ಟಿಸುತ್ತೇನೆಂದು ಭರವಸೆ ನೀಡಿದ್ದ ಮಗನನ್ನು ಕಳೆದುಕೊಂಡ ತಾಯಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ.

ಬಿ ಎಸ್ ನರ್ಸಿಂಗ್ ಓದುತ್ತಿದ್ದ ಆಕಾಶ್ ಮನೆಯವರ ಬದುಕಿಗೆ ಭರವಸೆಯ ಬೆಳಕಾಗಿದ್ದ. ಅನಾರೋಗ್ಯದ ಕಾರಣದಿಂದ ನಿತ್ಯ ಮಾತ್ರೆ ನಂಗಿ ದಿನದೂಡುತ್ತಿದ್ದ ತಾಯಿ ಕಸ್ತೂರಿಬಾಯಿಗೆ ವೈದ್ಯನಾಗಿ ನಿನ್ನನ್ನು ಆರೋಗ್ಯದಿಂದ ಇರುವಂತೆ ನೋಡಿಕೊಳ್ಳುತ್ತೇನೆ ಎಂದು ಮಾತು ಕೊಟ್ಟಿದ್ದ. “ಇಂತಹ ಮಗನನ್ನು ಕಳೆದುಕೊಂಡೆ. ನನ್ನ ಮನೋಬಲವನ್ನು ಕುಗ್ಗಿಸಿ ದೇವರು ಖುಷಿಯಾಗಿದ್ದಾನೆ” ಎಂದು ಮೃತ ಯುವಕನ ತಾಯಿ ಕಣ್ಣೀರಿಟ್ಟಿದ್ದಾರೆ.

Leave A Reply

Your email address will not be published.