Tumakuru: ಖರೀದಿಯ ನೆಪದಲ್ಲಿ ಚಿನ್ನದ ಸರಕದ್ದು ತಾಯಿಮಗಳು ಎಸ್ಕೇಪ್! ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಕೈಚಳಕ!

Tumakuru crime news mother and daughter stolen a gold chain from a jewelery shop escaped

Tumakuru: ಚಿನ್ನ ಖರೀದಿಸುವ ನೆಪದಲ್ಲಿ ಬಂದು ತಾಯಿ ಹಾಗೂ ಮಗಳು ಗೋಲ್ಡ್ ಚೈನ್ ಕದ್ದು ಪರಾರಿಯಾಗಿರುವ ಘಟನೆ ತುಮಕೂರು( Tumakuru)ನಗರದ ಜ್ಯುವೆಲ್ಲರಿ ಶಾಪ್’ವೊಂದರಲ್ಲಿ ನಡೆದಿದೆ. ಈ ಘಟನೆಯು ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದ್ದು, ಕಳ್ಳರ ಕೈಚಳಕ ಕಂಡು ಅಂಗಡಿ ಮಾಲೀಕ ಹಾಗೂ ಪೊಲೀಸರು ಬೆರಗಾಗಿದ್ದಾರೆ.

ತುಮಕೂರು ನಗರದ ಗುಂಚಿ ಸರ್ಕಲ್ ಬಳಿ ಇರುವ‌ ಎಸ್ ಎನ್ ಡಿ ಜುವೆಲ್ಲರಿ ಶಾಪ್ ಗೆ ಎಂಟ್ರಿ ಕೊಟ್ಟ ತಾಯಿ-ಮಗಳು ಚಿನ್ನದ ಸರ ಖರೀದಿಯ ನೆಪದಲ್ಲಿ ಅಂಗಡಿ ಮಾಲೀಕನ ಬಳಿ ಗೋಲ್ಡ್ ಚೈನ್ ಕೇಳುತ್ತಾರೆ. ಇವರಿಗೆ ತೋರಿಸಲೆಂದು 32 ಗ್ರಾಂ ಚಿನ್ನದ ಸರವನ್ನು ಅಂಗಡಿ ಮಾಲೀಕನು ಮಹಿಳೆಯ ಕೈಗೆ ಕೊಡುತ್ತಾನೆ. ಮಾತನಾಡುತ್ತಲೇ ಶಾಪ್ ಮಾಲೀಕನ ಗಮನವನ್ನು ಬೇರೆಡೆ ಸೆಳೆದು, ತನ್ನ ಕೈಚಳಕದ ಮೂಲಕ ಆ ಸರವನ್ನು ಬಚ್ಚಿಡುತ್ತಾರೆ. ನಂತರ ದುಡ್ಡು ತರಲೆಂದು ಎಟಿಎಂ ಗೆ ಹೋಗಿ ಬರುವುದಾಗಿ ಹೇಳಿ ಎಸ್ಕೇಪ್ ಆಗಿದ್ದಾರೆ.

ಆದರೆ ಈ ಕಳ್ಳತನ ಜ್ಯುವೆಲ್ಲರಿ ಶಾಪ್ ನವರ ಗಮನಕ್ಕೆ ಬಂದೇ ಇರಲಿಲ್ಲ. ಆದರೆ ಕೆಲ ಸಮಯದ ನಂತರ ಚಿನ್ನದ ಸರ ಕಾಣದಿದ್ದಾಗ, ಹುಡುಕಾಡಿದ ಅವರು ಸಿಸಿಟಿವಿ ಚೆಕ್ ಮಾಡಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಕಳ್ಳರ ಚಾಣಾಕ್ಷತನವನ್ನು ಕಂಡು ಅಂಗಡಿ ಮಾಲೀಕ ನಿಬ್ಬೆರಗಾಗಿದ್ದಾನೆ. ನಂತರ ಗೋಲ್ಡ್ ಚೈನ್ ಕದ್ದು ಎಸ್ಕೇಪ್ ಆಗಿದ್ದ ಮಹಿಳೆಯರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಈ ಘಟನೆಯ ಸಂಬಂಧ ತುಮಕೂರು ನಗರದ ತಾನೇ ಪೊಲೀಸರು ದೂರು ದಾಖಲಿಸಿಕೊಂಡು, ಆರೋಪಿಗಳನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.

ಇದನ್ನೂ ಓದಿ: ಆ್ಯಂಡ್ರಾಯ್ಡ್ ಫೋನ್ ಬೇಡ, ಐಫೋನ್ ಬೇಕು! ಈ ಕಳ್ಳರು ಕೊಟ್ಟ ಚಮಕ್ ಏನು ಗೊತ್ತಾ?

Leave A Reply

Your email address will not be published.