Spain: ಯುವತಿಗೆ ಪ್ರಾಣಕ್ಕೆ ಕಂಟಕವಾದ ಟೂತ್ ಬ್ರಷ್! ಈಕೆಯ ಎಡವಟ್ಟು ನೋಡಿ ಬೆಚ್ಚಿಬಿದ್ರು ಡಾಕ್ಟರ್ಸ್!

World news there was mistake while brushing teeth the brush got stuck in woman throat at Spain

Spain: ಎಲ್ಲರೂ ಬೆಳಗ್ಗೆ ಎದ್ದ ಕೂಡಲೇ ಮಾಡುವ ಕಾರ್ಯವೆಂದರೆ ಅದು ಹಲ್ಲುಜ್ಜುವುದು. ಹಲ್ಲುಜ್ಜುವುದರಿಂದ ನಮ್ಮ ದಿನನಿತ್ಯದ ಕಾರ್ಯ ಚಟುವಟಿಕೆಗಳು ಆರಂಭವಾಗುತ್ತದೆ. ಆದರೆ ಇಲ್ಲಿ ಯುವತಿಯೊರ್ವಳು ಟೂತ್ ಬ್ರಷ್ ನಿಂದಾಗಿ ದೊಡ್ಡ ಅಪಾಯದಲ್ಲಿ ಸಿಲುಕುವಂತಾಗಿದೆ. ತನ್ನ ಸಹಾಯಕ್ಕಾಗಿ ಬಳಸಿದ ಟೂತ್ ಬ್ರಷ್ ಆಕೆಯ ಪ್ರಾಣಕ್ಕೆ ಸಂಚಕಾರ ತಂದೊಡ್ಡಿದೆ.

ಸ್ಪೇನ್(Spain)  ನ ಗಾಲ್ಡಕಾವೋದ 21 ರ ಹರೆಯದ ಹುಡುಗಿಯೊಬ್ಬಳು ರಾತ್ರಿ ಊಟದ ವೇಳೆ ಮಾಂಸಹಾರವನ್ನು ತಿನ್ನುತ್ತಿದ್ದಳು. ಈ ವೇಳೆಯಲ್ಲಿ ಮಾಂಸದ ಮೂಳೆಯೊಂದು ಆಕೆಯ ಗಂಟಲಲ್ಲಿ ಸಿಕ್ಕಿಹಾಕಿಕೊಂಡಿತು. ಇದರಿಂದ ಕೊಂಚ ಉಸಿರಾಟದ ತೊಂದರೆ ಹಾಗೂ ಗಂಟಲು ನೋವು ಮುಂತಾದ ಸಮಸ್ಯೆಗಳು ಉಂಟಾದ ಕಾರಣ ಆಕೆ ಬೆಳಗ್ಗೆ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಮೂಳೆಯನ್ನು ಹೊರ ತೆಗೆಯಲು ತನ್ನ ಟೂತ್ ಬ್ರಷ್ಅನ್ನು ಉಪಯೋಗಿಸುತ್ತಾಳೆ. ಆದರೆ ದುರಾದೃಷ್ಟವಶಾತ್ ಟೂತ್ ಬ್ರಷ್ ಕೂಡ ಗಂಟಲಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ.

ಹಾಗಾಗಿ ಉಸಿರಾಡುವುದೇ ಕಷ್ಟವಾಗಿ ಪ್ರಾಣಪಾಯ ಎದುರಾಗಿತ್ತು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಂಟು ಇಂಚಿನ ಟೂತ್ ಬ್ರಷ್ ಗಂಟಲಲ್ಲಿ ಸಿಕ್ಕಿಹಾಕಿಕೊಂಡಿದ್ದನ್ನು ನೋಡಿ ವೈದ್ಯರೇ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ. ನಂತರ ಸತತ ಪ್ರಯತ್ನಗಳ ಮೂಲಕ ಆಪರೇಷನ್ ಮಾಡದೆಯೇ ಕೆಲವು ಸಾಧನಗಳನ್ನು ಬಳಸಿಕೊಂಡು ಟೂತ್ ಬ್ರಷ್ ಅನ್ನು ಹೊರತೆಗೆದು ಯುವತಿಯ ಪ್ರಾಣ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಖರೀದಿಯ ನೆಪದಲ್ಲಿ ಚಿನ್ನದ ಸರಕದ್ದು ತಾಯಿಮಗಳು ಎಸ್ಕೇಪ್! ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಕೈಚಳಕ!

Leave A Reply

Your email address will not be published.