Death news: ಭೀಕರ ಅಪಘಾತದಲ್ಲಿ ಹೊತ್ತಿ ಉರಿದ ಟಿಪ್ಪರ್-ಕಾರು! ಬಾಲಕಿ ಸೇರಿ ಇಬ್ಬರು ಸಜೀವ ದಹನ!

After an accident in Belagavi a lorry caught fire and two people were injured and died

Deadly Accident: ಟಿಪ್ಪರ್ ಹಾಗೂ ಕಾರು ನಡುವೆ ಭೀಕರ ಅಪಘಾತ ಉಂಟಾಗಿದ್ದು, ಎರಡು ವಾಹನಗಳು ಹೊತ್ತಿ ಉರಿದಿರುವ ಘಟನೆಯೊಂದು ನಡೆದಿದ್ದು, ಈ ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಮತ್ತಿಬ್ಬರು ಜೀವಂತ ದಹನವಾಗಿದ್ದಾರೆ.

ಬೆಳಗಾವಿ ತಾಲೂಕಿನ ದೇವಗಿರಿ ಬಂಬರಗಾ ಕ್ರಾಸ್ ಬಳಿ ಕಾರು ಮತ್ತು ಟಿಪ್ಪರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬಾಲಕಿ ಸೇರಿ ಇಬ್ಬರು ಸಜೀವ ದಹನವಾಗಿದ್ದಾರೆ. ಬಂಬರಗಾ ಕ್ರಾಸ್ ಬಳಿ ಕಾರು ಅಡ್ಡ ಬಂದ ಟಿಪ್ಪರ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹತ್ತಿಕೊಂಡಿದ್ದು, ಕಾರಿನಲ್ಲಿದ್ದ ಮೋಹನ್ ಮಾರುತಿ ಹಾಗೂ ಬಾಲಕಿ ಸಮೀಕ್ಷಾ ಸಜೀವ ದಹನವಾಗಿದ್ದಾರೆ. ಮೃತರಾದ ಮೋಹನ್ ಮಾರುತಿ ಬೆಳಗಾಂಕರ್ (24) ಬಂಬರಗಾ ಗ್ರಾಮದವರಾಗಿದ್ದು, ಹಾಗೂ ಬಾಲಕಿ ಸಮೀಕ್ಷಾ ಡಿಯೇಕರ್(12) ಮಚ್ಚೆ ಗ್ರಾಮದ ನಿವಾಸಿಗಳೆಂದು ತಿಳಿದು ಬಂದಿದೆ.

ಇವರು ಮದುವೆ ಮುಗಿಸಿಕೊಂಡು ವಾಪಸ್ ಕಾರಿನಲ್ಲಿ ಬಂಬರಗಾ ಗ್ರಾಮಕ್ಕೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಟಿಪ್ಪರ್ ಅಡ್ಡ ಬಂದ ಕಾರಣ ಡಿಕ್ಕಿಯಾಗಿ, ಟಿಪ್ಪರ್ ಡೀಸೆಲ್ ಟ್ಯಾಂಕ್ ಒಡೆದು ಬೆಂಕಿ ಹತ್ತಿಕೊಂಡಿದ್ದು, ಎರಡು ವಾಹನಗಳು ಧಗಧಗನೆ ಹೊತ್ತಿ ಉರಿದಿವೆ. ಇದರಿಂದಾಗಿ ಇಬ್ಬರು ಜೀವಂತ ಸುಟ್ಟು ಹೋಗಿ ಸಾವನ್ನಪ್ಪಿದ್ದಾರೆ. ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಇವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಗಾಯಾಳುಗಳನ್ನು ಮಹೇಶ್ ಬೆಳ್ಗಾಂವಕರ್ ಮತ್ತು ಸ್ನೇಹ ಬೆಳ್ಗುಂದ್ಕರ್ ಎಂದು ಗುರುತಿಸಲಾಗಿದ್ದು, ಇವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು.

ಇದನ್ನು ಓದಿ: Japan Culture: ಜಪಾನ್‌ನಲ್ಲಿ ಹುಡುಗಿ, ಹುಡಗನ ಶರ್ಟ್‌ನ ಎರಡನೇ ಬಟನ್‌ ಕೇಳಿದರೆ ಏನರ್ಥ ಗೊತ್ತೇ? ಇಂಟೆರೆಸ್ಟಿಂಗ್‌ ವಿಷಯ ಇಲ್ಲಿದೆ!

ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳ , ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ಆರಿಸಿದ್ದಾರೆ. ಅಪಘಾತವಾಗುತ್ತಿದ್ದಂತೆ ಟಿಪ್ಪರ್ ಚಾಲಕ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದು, ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಸ್ಥಳಕ್ಕೆ ಆಗಮಿಸಿದ ಡಿಸಿಪಿ ಸ್ನೇಹಾ, ಎಸಿಪಿ ಹಾಗೂ ಕಾಕತಿ ಠಾಣಾ ಪೋಲೀಸರು ಪರಿಶೀಲನೆ ನಡೆಸಿದ್ದು, ಮೃತರ ಶವವನ್ನು ಭೀಮ್ಸ್ ಆಸ್ಪತ್ರೆಯ ಶವಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

Leave A Reply

Your email address will not be published.