ಎಟಿಎಂ ಕಳ್ಳತನಕ್ಕೆ ಯತ್ನಿಸಿದ ಖದೀಮರು! ನೋಟಿಗೆ ಬೆಂಕಿ ಹಚ್ಚಿ ಎಸ್ಕೇಪ್!

Bangalore latest news There was an attempt to theft an ATM

ಎಟಿಎಂ ಕಳ್ಳತನ ಮಾಡಲು ಪ್ರಯತ್ನ ಪಟ್ಟ ಘಟನೆಯೊಂದು ನಡೆದಿದ್ದು, ಮಾಹಿತಿ ತಿಳಿದ ಕಟ್ಟಡದ ಮಾಲೀಕ ಸ್ಥಳಕ್ಕೆ ಆಗಮಿಸಿದಾಗ ಕಳ್ಳರು ಎಸ್ಕೇಪ್ ಆಗಿದ್ದಾರೆ. ಕಳ್ಳತನದ ಪ್ರಯತ್ನದಲ್ಲಿ ಎಟಿಎಂಗೆ ಬೆಂಕಿ ತಗುಲಿದ್ದು, ಖದೀಮರು ಅವಾಂತರವನ್ನೇ ಮಾಡಿ ಹೋಗಿದ್ದರು.

ಬೆಂಗಳೂರು ಗ್ರಾಮಾಂತರದ ನೆಲಮಂಗಲ ಟೌನ್ ಬಳಿ ತಡರಾತ್ರಿಯ ವೇಳೆ ಎಟಿಎಂನಲ್ಲಿದ್ದ ಹಣವನ್ನು ಕದಿಯಲು ಕಳ್ಳರು ಪ್ರಯತ್ನಪಟ್ಟಿದ್ದರು. ಕಟರ್ ಮೂಲಕ ಎಟಿಎಂ ಅನ್ನು ಕಟ್ಟು ಮಾಡುತ್ತಿದ್ದ ಸಂದರ್ಭದಲ್ಲಿ ಬೆಂಕಿ ತಗುಲಿದ್ದು, ವಿಷಯ ತಿಳಿದು ಕಟ್ಟಡ ಮಾಲೀಕ ಸ್ಥಳಕ್ಕೆ ಧಾವಿಸುತ್ತಿದ್ದಂತೆ ಕಳ್ಳರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.‌

ಈ ಘಟನೆಯು ರಾತ್ರಿ ಸುಮಾರು 1:50ರ ಆಸುಪಾಸಿನಲ್ಲಿ ನಡೆದಿದ್ದು, ಎಟಿಎಂ ಗೆ ನುಗ್ಗಿದ ಕಳ್ಳರು ಎಟಿಎಂ ಯಂತ್ರವನ್ನು ತುಂಡರಿಸಲು ಪ್ರಯತ್ನಿಸಿದ್ದಾರೆ. ಈ ವಿಚಾರ ತಿಳಿದು ಮುಂಬೈ ಆಕ್ಸಿಸ್ ಬ್ಯಾಂಕ್ ಅಧಿಕಾರಿಗಳು ಕೂಡಲೇ ಕಟ್ಟಡದ ಮಾಲೀಕನಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಕಟ್ಟಡ ಮಾಲೀಕ ದೌಡಾಯಿಸುತ್ತಿದ್ದಂತೆ ಕಳ್ಳರು ತಮ್ಮ ಕೃತ್ಯಕ್ಕೆ ಬಳಸುತ್ತಿದ್ದ ಎಲ್ಲಾ ವಸ್ತುಗಳನ್ನು ಅಲ್ಲೇ ಬಿಟ್ಟು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಇದನ್ನು ಓದಿ: Putturu: ಕಾಲೇಜು ವಿದ್ಯಾರ್ಥಿನಿಯ ಅಪಹರಿಸಿ ಅತ್ಯಾಚಾರ ಪ್ರಕರಣ; 2 ತಿಂಗಳ ಬಳಿಕ ಆರೋಪಿಗೆ ಜಾಮೀನು!

ಆದರೆ, ಗ್ಯಾಸ್ ಕಟರ್ ಉಪಯೋಗಿಸಿ ಎಟಿಎಂ ಯಂತ್ರವನ್ನು ಕಟ್ ಮಾಡುವ ಸಂದರ್ಭದಲ್ಲಿ ಹಣಕ್ಕೆ ಬೆಂಕಿ ತಗುಲಿ ಸಾವಿರಾರು ರೂಪಾಯಿ ಸುಟ್ಟು ಹೋಗಿದೆ. ಘಟನೆಯ ನಂತರ ಸ್ಥಳಕ್ಕೆ ಬ್ಯಾಂಕ್ ಸಿಬ್ಬಂದಿ ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಳ್ಳರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.

Leave A Reply

Your email address will not be published.