ಮನೆಯಿಂದ ಹೊರಗೆ ಬಂದ್ರಾ ಡ್ರೋನ್​ ಮತ್ತು ಸಂಗೀತ? ಮನೆಯೊಳಗೆ ಏನಾಗ್ತಿದೆ?

big boss 10 kannada Did Drone Prathap and Sangeetha come out of the house

ಬಿಗ್​ ಬಾಸ್​ನಲ್ಲಿ ಈ ವಾರದ ಆಟ ತುಂಬಾ ಭಯಾನಕವಾಗಿದೆ. ರಾಕ್ಷಸರು ಮತ್ತು ಗಂಧರ್ವ ಲೋಕ ಎಂಬ 2 ತಂಡಗಳಾಗಿದ್ದು, ಚಿತ್ರ ವಿಚಿತ್ರವಾಗಿ ಎಲ್ಲರೂ ಆಡ್ತಾ ಇದ್ದಾರೆ. ಇಂದು ಸಂಗೀತ ಮತ್ತು ಡ್ರೋನ್​ ಪ್ರತಾಪ್​ ಇಬ್ಬರೂ ಕಾಣ್ತಾ ಇಲ್ಲ ಮನೆಯಲ್ಲಿ. ಯಾಕೆ? ಏನು? ಇಲ್ಲಿದೆ ನೋಡಿ ಫುಲ್​ ಡೀಟೇಲ್ಸ್​.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಪೋಸ್ಟ್‌‌ಗಳಲ್ಲಿ ಈ ರಕ್ಕಸ ಹಾಗೂ ಗಂಧರ್ವರು ಟಾಸ್ಕ್‌ ಮೀತಿ ಮೀರಿದ್ದು, ಟಾಸ್ಕ್‌ ಆಡುವಾಗ ತೊಂದರೆಯಾಗಿ ಬಿಗ್‌ಬಾಸ್‌‌ ಮನೆಯಿಂದ ಸಂಗೀತಾ ಹಾಗೂ ಡ್ರೋನ್‌ ಪ್ರತಾಪ್‌ ಆಸ್ಪತ್ರೆಗೆ ದಾಖಲಾಗಿದ್ದಾರಂತೆ. ಆದರೆ ಈ ಬಗ್ಗೆ ಎಲ್ಲಿಯೂ ಸರಿಯಾದ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಕಲರ್ಸ್‌ ಕನ್ನಡ ಎಲ್ಲಿಯೂ ಹೇಳಿಕೆ ನೀಡಿಲ್ಲ. ಫೇಸ್‌ಬುಕ್‌ನಲ್ಲಿ ಇಂದು ಬೆಳಗ್ಗೆಯಿಂದ ಈ ರೀತಿಯ ಪೋಸ್ಟ್‌ಗಳು ವೈರಲ್​ ಆಗ್ತಾ ಇದೆ.

ಹಾಗಾದ್ರೆ ನಿಜವಾಗ್ಲೂ ದೊಡ್ಮನೆಯಲ್ಲಿ ಆಗಿದ್ದೇನು? ಆಟ ನಿಂತು ಹೋಯ್ತಾ? ಈ ಎಲ್ಲಾ ಪ್ರಶ್ನೆಗಳಿಗೆ ಇಂದಿನ ಬಿಗ್​ ಬಾಸ್​ ಎಪಿಸೋಡ್​ ನೋಡಬೇಕಾಗಿದೆ ಅಷ್ಟೇ.

Leave A Reply

Your email address will not be published.