Putturu: ಕಾಲೇಜು ವಿದ್ಯಾರ್ಥಿನಿಯ ಅಪಹರಿಸಿ ಅತ್ಯಾಚಾರ ಪ್ರಕರಣ; 2 ತಿಂಗಳ ಬಳಿಕ ಆರೋಪಿಗೆ ಜಾಮೀನು!

crime news Attempt to rape kidnapping and rape of a college student

Putturu: ಎರಡು ತಿಂಗಳ ಹಿಂದೆ ಪುತ್ತೂರಿನಲ್ಲಿ ಕಲಿಯುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಪ್ರಕರಣದ ಆರೋಪಿಗೆ ಪುತ್ತೂರು ಜಿಲ್ಲಾ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಕಡಬದ ಯಜ್ಞೇಶ್‌ ಎಂಬಾತನೇ ಜಾಮೀನು ಮಂಜೂರು ಪಡೆದ ಆರೋಪಿ.

ಸಂತ್ರಸ್ತ ಯುವತಿಯನ್ನು ಆರೋಪಿ ಪುತ್ತೂರಿನ ಬೊಳ್ವಾರ್‌ನಿಂದ ಅಪಹರಿಸಿ ಮಡಿಕೇರಿಯ ಅತ್ತೆ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಲಾಗಿತ್ತು. ಅನಂತರ ಸಂತ್ರಸ್ತೆಯ ಹೇಳಿಕೆಯ ಅನ್ವಯ ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 376 ಮತ್ತು ಪೋಕ್ಸೋ ಕಾಯಿದೆಯ ಕಲಂ 4ರ ಅನ್ವಯ ಪ್ರಕರಣ ದಾಖಲು ಮಾಡಿ ಬಂಧಿಸಲಾಗಿತ್ತು.

ಪ್ರಕರಣದ ಹಿನ್ನಲೆ: ಅ.10 ರಂದು ಸಂತ್ರಸ್ತೆ ಮನೆಯಿಂದ ಹೊರಡುವಾಗ ಬೊಳುವಾರಿನ ತನ್ನ ಗೆಳತಿಯ ಮನೆಗೆ ಹೋಗಿ ವಾಪಾಸು ಬರುವುದಾಗಿ ತಿಳಿಸಿ ಕಾಲೇಜಿಗೆ ಹೋಗಿದ್ದಾಳೆ. ಆದರೆ ಬಾಲಕಿ ಅನಂತರ ಮನೆಗೆ ಫೋನ್‌ ಮಾಡದೆ ಇರುವುದನ್ನು ಕಂಡು ಆಕೆಯ ಮನೆಯವರು ಆಕೆಯ ಸ್ನೇಹಿತೆಯಲ್ಲಿ ವಿಚಾರಿಸಿದಾಗ ಆಕೆ ಸ್ನೇಹಿತೆಯ ಮನೆಗೆ ಹೋಗದೆ ಇರುವುದು ಗೊತ್ತಾಗಿದೆ.

ಅನಂತರ ಕಾಲೇಜಿನಲ್ಲಿ ವಿಚಾರಿಸಿದಾಗ ಆಕೆ ಮಧ್ಯಾಹ್ನದವರೆಗೆ ಕಾಲೇಜಿಗೆ ಬಂದಿದ್ದು, ಅನಂತರ ಬಂದಿಲ್ಲ ಎಂದು ಗೊತ್ತಾಗುತ್ತದೆ. ಈ ಕುರಿತು ಅಪ್ರಾಪ್ತ ಬಾಲಕಿಯ ತಂದೆ ಪುತ್ತೂರು ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಇದನ್ನು ಓದಿ: Death news: ಭೀಕರ ಅಪಘಾತದಲ್ಲಿ ಹೊತ್ತಿ ಉರಿದ ಟಿಪ್ಪರ್-ಕಾರು! ಬಾಲಕಿ ಸೇರಿ ಇಬ್ಬರು ಸಜೀವ ದಹನ!

ಇದಾದ ನಂತರ ಮೂರು ದಿನದ ಬಳಿಕ ಸಂತ್ರಸ್ತೆ ತಂದೆಯೊಂದಿಗೆ ಪೊಲೀಸ್‌ ಠಾಣೆಗೆ ಬಂದು, ಆರೋಪಿಯನ್ನು ಕಳೆದ ಮೂರು ತಿಂಗಳಿನಿಂದ ಪ್ರೀತಿ ಮಾಡುತ್ತಿದ್ದು, ಅ.10 ರಂದು ಮಡಿಕೇರಿಗೆ ಹೋಗಿ ಅಲ್ಲಿ ಆರೋಪಿಯ ಅತ್ತೆ ಮನೆಗೆ ಕರೆದುಕೊಂಡು ಹೋಗಿ ದೈಹಿಕ ಸಂಪರ್ಕ ನಡೆಸಿದರುವುದಾಗಿ ತಿಳಿಸಿದ್ದು, ಈ ಕುರಿತು ಪ್ರಕರಣ ದಾಖಲಾಗಿತ್ತು.

Leave A Reply

Your email address will not be published.