ಮದುವೆಗೆ ಮುನ್ನವೇ ವರದಕ್ಷಿಣೆ ಕಿರುಕುಳ; ಮನನೊಂದ ಯುವ ವೈದ್ಯೆ ಆತ್ಮಹತ್ಯೆ!!!

crime news death news Doctor commits suicide due to Dowry harassment before marriage

ತಿರುವನಂತಪುರಂ ಮೆಡಿಕಲ್‌ ಕಾಲೇಜಿನ ಸರ್ಜರಿ ವಿಭಾಗದ ಪಿಜಿ ವಿದ್ಯಾರ್ಥಿನಿ ಶಹಾನಾ ಎಂಬಾಕೆ ತಮ್ಮ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ನಡೆದಿದೆ.

ವರದಕ್ಷಿಣೆ ಕಿರುಕುಳವೇ ಈ ಆತ್ಮಹತ್ಯೆಗೆ ಕಾರಣ ಎಂದು ಶಹಾನಾ ಪೋಷಕರು ದೂರು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವೈದ್ಯನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆ ಹಿನ್ನೆಲೆ: ಶಹಾನಾಗೆ ಮದುವೆ ನಿಗದಿಯಾಗಿದ್ದು, ಯುವ ವೈದ್ಯ ರುವೈಸ್‌ ಎಂಬುವವರ ಜೊತೆ ಮದುವೆ ನಿಗದಿಯಾಗಿತ್ತು. ಹುಡುಗನ ಕಡೆಯವರು ವರದಕ್ಷಿಣೆಯಾಗಿ 150 ಪವನ್‌ ಚಿನ್ನ, 15 ಎಕರೆ ಜಾಗ, ಬಿಎಂಡಬ್ಲ್ಯೂ ಕಾರು ನೀಡುವಂತೆ ಕೇಳಿದ್ದಾರೆ.

ಆದರೆ ಶಹಾನಾ ಮನೆಯವರ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ಆದರೂ ಐದು ಎಕರೆ ಕಾರು ನೀಡಲು ಶಹಾನಾ ಕುಟುಂಬ ಮುಂದಾಗಿತ್ತು. ಆದರೆ ಹುಡುಗನ ಕಡೆಯವರು ತಾವು ಹೇಳಿದ್ದಷ್ಟನ್ನು ನೀಡಲೇ ಬೇಕೆಂದು ಹೇಳಿದ್ದರು. ವರದಕ್ಷಿಣೆ ಕೊಡಲು ಆಗುವುದಿಲ್ಲ ಎಂಬ ಕಾರಣದಿಂದ ರುವೈಸ್‌ ಕುಟುಂಬ ಮದುವೆ ವಿಚಾರದಿಂದ ದೂರ ಉಳಿಯಲು ಪ್ರಾರಂಭ ಮಾಡಿದ್ದಾರೆ. ಇದರಿಂದ ನೊಂದ ಶಹಾನಾ ತಾನು ಇದ್ದ ರೂಮಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ರುವೈಸ್‌ ಅವರನ್ನು ಪಿಜಿ ವೈದ್ಯರ ಸಂಘದ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿದ್ದು, ತನಿಖೆ ಮುಗಿಯುವವರೆಗೆ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗುವುದು ಎಂದು ಕೆಎಂಪಿಜಿಎ ಸಂಸ್ಥೆ ಹೇಳಿದೆ.

Leave A Reply

Your email address will not be published.