Dharmasthala: ನಕಲಿ NGO ಹೆಸರಿನಲ್ಲಿ ನಕಲಿ ಸ್ವಾಮಿಗಳಿಂದ ದೇಣಿಗೆ ಸಂಗ್ರಹ! ಆರೋಪಿಗಳ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು!!

Dharmasthala news fake swamy donation collection in the name of fake NGO

Dharmasthala: ಸಾವರ್ಜನಕರಿಂದ ದೇಣಿಗೆ ಸಂಗ್ರಹ ಮಾಡುತ್ತಿದ್ದ ಇಬ್ಬರು ಯುವಕರ ವಿರುದ್ಧ ಧರ್ಮಸ್ಥಳ(Dharmasthala)  ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುರುವಾರ ಈ ಘಟನೆಯ ಕುರಿತು ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. NGOವೊಂದರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಈ ಯುವಕರರು ದೇಣಿಗೆ ಸಂಗ್ರಹ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.

ಡಿ.7ರಂದು ಇಬ್ಬರು ಯುವಕರು ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಪರಾಂಡ ಎಂಬಲ್ಲಿಗೆ ಬಂದಿದ್ದು, ಧನುಷ್‌ ಎಂಬುವವರ ಮನೆಗೆ ಭೇಟಿ ನೀಡುತ್ತಾರೆ. ಇವರಿಬ್ಬರು ಸ್ವಾಮಿ ವಿವೇಕಾನಂದ ಸೋಷಿಯಲ್‌ ಸರ್ವಿಸ್‌ ಟ್ರಸ್ಟ್‌ (ರಿ) ಬೆಂಗಳೂರಿ ಇಲ್ಲಿಂದ ದೇಣಿಗೆ ಸಂಗ್ರಹಕ್ಕೆ ಬಂದಿರುವುದಾಗಿ ಹೇಳಿದ್ದು, ಸಹಾಯ ಮಾಡಲು ಕೇಳಿದ್ದಾರೆ. ಆದರೆ ಇದರಿಂದ ಸಂಶಯಗೊಂಡ ಧನುಷ್‌ ಅವರು ಯುವಕರ ಬಳಿ ಇದ್ದ ಕರಪತ್ರದಲ್ಲಿ ಸಂಸ್ಥೆಯ ನಂಬರ್‌ಗೆ ಕರೆ ಮಾಡಿ ವಿಚಾರಿಸಿದ್ದಾರೆ.

ಆಗ ಅತ್ತ ಕಡೆಯಿಂದ ನಾವು ಯಾರನ್ನೂ ಕಳುಹಿಸಿಲ್ಲ ಎಂದು ಹೇಳಿರುತ್ತಾರೆ. ಇದರಿಂದ ಈ ಯುವಕರು ಮೋಸ ಮಾಡಿರುವುದಾಗಿ ತಿಳಿದು ಬರುತ್ತದೆ. ಧನುಷ್‌ ಅವರು ನೀಡಿದ ದೂರಿನ ಅನ್ವಯ ಆರೋಪಿಗಳ ವಿರುದ್ಧ ಐಪಿಸಿ ಕಲಂ 420 ಜೊತೆಗೆ 34ರಂತೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: WhatsApp ನಿಂದ ಬಿಗ್‌ ಅಪ್ಡೇಟ್‌; ಬಳಕೆದಾರರಿಗೆ ಸಿಗಲಿದೆ ಇನ್ನು ಮುಂದೆ ಈ ಸೂಪರ್‌ ಸೌಲಭ್ಯ!

Leave A Reply

Your email address will not be published.