Actress Leelavathi: ನನಗೆ ಯಾರೂ ಇಲ್ಲ…ನೀವೇ ನನ್ನ ಬಂಧುಬಳಗ…ತಾಯಿ ನಿಧನದ ಬಳಿಕ ವಿನೋದ್‌ ರಾಜ್‌ ಕಂಬನಿ!!

Actress Leelavathi Passed Away: ಹಿರಿಯ ನಟಿ ಲೀಲಾವತಿ ಅವರ ಸಾವಿನ ಬೆನ್ನಲ್ಲೇ ನೆಲಮಂಗಲದ ಖಾಸಗಿ ಆಸ್ಪತ್ರೆಯ ಮುಂದೆ ಭಾರೀ ಪ್ರಮಾಣದಲ್ಲಿ ಜನ ಸೇರಿದ್ದಾರೆ. ವಿನೋದ್‌ ರಾಜ್‌ ಅವರು ಈ ಸಂದರ್ಭದಲ್ಲಿ, ʼಭಗವಂತ ನನ್ನನ್ನು ಒಂಟಿ ಮಾಡಿಬಿಟ್ಟ. ನನಗೆ ಯಾರೂ ಇಲ್ಲ. ನೀವೇ ಬಂಧ ಬಳಗ..” ಎಂದು ಹೇಳಿ ಕಣ್ಣೀರು ಸುರಿಸಿದ್ದಾರೆ. ಭಗವಂತ ನನ್ನ ಒಂಟಿ ಮಾಡಿಬಿಟ್ಟ ಎಂದು ವಿನೋದ್‌ ರಾಜ್‌(Vinod Raj) ಹೇಳಿದ್ದಾರೆ.

ನನಗೆ ಇವರುಗಳೇ ಅಣ್ಣ ತಮ್ಮ. ನನಗೆ ಮತ್ತೆ ಯಾರೂ ಇಲ್ಲ. ನೀವುಗಳೇ ಬಂಧುಬಳಗ. ಅಂತ್ಯಸಂಸ್ಕಾರ ಹೇಗೆ ಮಾಡುತ್ತೇವೆ ಎನ್ನುವ ವಿವರ ಇವರೇ ನೀಡುತ್ತಾರೆ. ಅಂಬೇಡ್ಕರ್‌ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡುತ್ತೇವೆ ಎಂದು ಹೇಳಿ ವಿನೋದ್‌ ರಾಜ್‌ (Vinod Raj) ಆಸ್ಪತ್ರೆಯಿಂದ ಹೊರ ಹೋಗಿದ್ದಾರೆ.

ನಾಳೆ ಬೆಳಿಗ್ಗೆ 11-12 ವರೆಗೆ ಅಂತಿಮ ದರ್ಶನಕ್ಕೆ ಅವಕಾ ಇದೆ. ರಾತ್ರಿಯಿಡೀ ಅಂತಿಮ ದರ್ಶನಕ್ಕೆ ಅವಕಾಶ ಇದೆ. ಇವೆಲ್ಲ ತಹಶೀಲ್ದಾರ್‌ ನೇತೃತ್ವದಲ್ಲಿ ಅಂತಿಮ ದರ್ಶನಕ್ಕೆ ಸಿದ್ಧತೆ ನಡೆಯುತ್ತಿದೆ. ನಾಳೆ ಬೆಳಗ್ಗೆ 11 ಗಂಟೆ ನಂತರ ಸೋಲದೇವನಹಳ್ಳಿ ತೋಟದ ಮನೆಗೆ ಪಾರ್ಥೀವ ಶರೀರ ರವಾನೆಯಾಗಲಿದೆ. ಅನಂತರ ತೋಟದ ಮನೆಯಲ್ಲಿ ಅಂತ್ಯಸಂಸ್ಕಾರ ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.