Bigg Boss: ವಿನಯ್ ಮತ್ತು ನಮ್ರತಾಳಿಗೆ ಕ್ಯಾಪ್ಟನ್ಸಿ ಟಾಸ್ಕ್ ಆಡದಂತೆ ಮಾಡಿದ ಸ್ನೇಹಿತ್! ಫ್ರೆಂಡ್ಶಿಪ್ ಬ್ರೇಕಪ್ ಆಯ್ತಾ ಬಿಗ್ ಬಾಸ್ ಮನೆಯಲ್ಲಿ?

Entertainment news bigg boss season 10 Vinay namrutha gowda and snehith friendship breakup

Bigg Boss : ಬಿಗ್ ಬಾಸ್ ಮನೆಯಲ್ಲಿ( Bigg Boss  house) ಈ ವಾರ ಆಟದ ಕಾವು ಜೋರಾಗೆ ಇತ್ತು. ಗಂಧರ್ವರು ಮತ್ತು ರಾಕ್ಷಸರು ಎಂಬ ಎರಡು ಗುಂಪುಗಳಾಗಿ ಮಾರ್ಪಾಡಾಗಿದ್ದು, ಅತಿ ಕಠೋರವಾದ ಹಾಗೂ ಸ್ವಭಾವವನ್ನು ತೋರಿಸ್ತಾ ಇದ್ದರು ರಾಕ್ಷಸರು. ಇಂದು ಶುಕ್ರವಾರ ಕಳಪೆ ಮತ್ತು ಕ್ಯಾಪ್ಟನ್ಸಿ ನಡೆಯುತ್ತದೆ.

ಇದಕ್ಕೆ ಅಧಿಕಾರ ಹೊಂದಿದ್ದ ಸ್ನೇಹಿತ ಅವರೇ ಮುಖ್ಯ ತೀರ್ಮಾನಸ್ತರಾಗಿದ್ದಾರೆ. ಇವರ ಮನೆಯಲ್ಲಿ ಯಾರು ಕ್ಯಾಪ್ಟನ್ ಆಗೋದು ಬೇಡ ಎಂದು ಇಬ್ಬರು ಹೆಸರುಗಳನ್ನ ಸೂಚಿಸಿ ಎಂಬ ಅಧಿಕಾರವನ್ನು ಸ್ನೇಹಿತ್ ಗೆ ನೀಡಿದ್ದರು. ಆಗ ಸೂಚಿಸಿದ ಹೆಸರು ಯಾರದ್ದು ಗೊತ್ತಾ?

ಎಸ್, ಕ್ಯಾಪ್ಟನ್ ಆಟದಿಂದ ಸ್ನೇಹಿತ ಹೊರಗೆ ಇಟ್ಟ ಹೆಸರುಗಳು ನಮ್ರತಾ ಮತ್ತು ವಿನಯ್. ತನ್ನ ಸ್ನೇಹಿತರನ್ನು ಕ್ಯಾಪ್ಟನ್ ಆಟದಿಂದ ಹೊರಗೆ ಇಟ್ಟಿದ್ದಾರೆ ಸ್ನೇಹಿತ್. ಈ ವಿಷಯಕ್ಕೆ ನಮ್ರತಾ ತುಂಬಾ ಅಳುತ್ತಾರೆ ಮತ್ತು ನೀನು ಒಬ್ಬ ಫ್ರೆಂಡ್ ಅಂತ ಕೋಪ ಮಾಡಿಕೊಡುತ್ತಾರೆ.

ಹುಟ್ಟಿನಲ್ಲಿ ಹೋದ ವಾರ ಕೂಡ ನಮ್ರತಾಳಿಗೆ ಕ್ಯಾಪ್ಟನ್ ಆಗಲು ಆಗಿರಲಿಲ್ಲ ಮತ್ತು ಈ ವಾರ ಕೂಡ ಕ್ಯಾಪ್ಟನ್ ಆಗಲು ಆಗುವುದಿಲ್ಲ. ದಿನೇ ದಿನೇ ಕಾಂಪಿಟೇಶನ್ ಹೆಚ್ಚಾಗುತ್ತಿರುವ ಈ ಮನೆಯಲ್ಲಿ ಮುಂದೇನಾಗುತ್ತೆ ಅಂತ ಕಾದು ನೋಡಬೇಕಾಗಿದೆ ಅಷ್ಟೇ.

ಇದನ್ನೂ ಓದಿ: WhatsApp ನಿಂದ ಬಿಗ್‌ ಅಪ್ಡೇಟ್‌; ಬಳಕೆದಾರರಿಗೆ ಸಿಗಲಿದೆ ಇನ್ನು ಮುಂದೆ ಈ ಸೂಪರ್‌ ಸೌಲಭ್ಯ!

Leave A Reply

Your email address will not be published.