Mangaluru: ನಾಪತ್ತೆಯಾಗಿದ್ದ ಭಿನ್ನಕೋಮಿನ ಜೋಡಿ ವಿವಾಹ ?

Mangaluru news Missing different caste couple married latest news

Mangaluru: ಸುರತ್ಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯ 7 ನೇ ಬ್ಲಾಕ್‌ ನಲ್ಲಿ ಯುವತಿ ಮತ್ತು ಯುವಕ ನಾಪತ್ತೆಯಾಗಿರುವ ಘಟನೆಯೊಂದು ನಡೆದಿದೆ. ಇದೀಗ ಇವರಿಬ್ಬರು ವಿವಾಹವಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕಾಟಿಪಳ್ಳದ ಯುವಕ ಪ್ರಶಾಂತ್‌ ಭಂಡಾರಿ (31) ಹಾಗೂ 3 ನೇ ಬ್ಲಾಕ್‌ ಆಶ್ರಯ ಕಾಲೋನಿ ನಿವಾಸಿ ಆಯೇಷಾ (19) ಇವರಿಬ್ಬರು ಡಿ.1 ರಂದು ನಾಪತ್ತೆಯಾಗಿದ್ದಾರೆ.

ಆಯೇಷಾ ತನ್ನ ಹೆಸರನ್ನು ಅಕ್ಷತಾ ಎಂದು ಬದಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆಯೇಷಾ ತಂದೆ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಇವರು ಮೂಲತಃ ಮುಂಡಗೋಡದವರು. ಇವರು ಸ್ಥಳೀಯ ಉದ್ಯೋಗದಲ್ಲಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಜೋಡಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ: ತಾಳಿಕಟ್ಟುವ ಶುಭಘಳಿಗೆಯಲ್ಲೇ ನಡೆಯಿತು ಅಚಾತುರ್ಯ; ತಾಳಿಗೆ ಕೈ ಅಡ್ಡ ಇಟ್ಟು ವಧುವಿನಿಂದ ಮದುವೆ ನಿರಾಕರಣೆ, ವರ ಶಾಕ್‌!!!

Leave A Reply

Your email address will not be published.