ಪುತ್ತೂರು : ಗಾಳಿಮುಖದಲ್ಲಿ ಖಾಸಗಿ ಬಸ್ಸಿನ ಅಡಿಗೆ ಬಿದ್ದು ವ್ಯಕ್ತಿ ಮೃತ್ಯು

puttur death news man died after falling under a private bus

ಪುತ್ತೂರು:ಈಶ್ವರಮಂಗಲದ ಗಾಳಿಮುಖ ಎಂಬಲ್ಲಿ ಖಾಸಗಿ ಬಸ್ಸಿನ ಅಡಿಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಡಿ.8ರಂದು ನಡೆದಿದೆ.

ಮೃತಪಟ್ಟವರನ್ನು ಮುಳ್ಳೇರಿಯಾದ ಕೋಳಿಕಾಲ ನಿವಾಸಿ, ಕೃಷಿಕ ಕುಂಞರಾಮ ಮಣಿಯಾಣಿ ಎಂದು ಗುರುತಿಸಲಾಗಿದೆ.

ಕೃಷಿಕರಾಗಿದ್ದ ಕುಂರಾಮ ಮಣಿಯಾಣಿ ಅವರು ಮುಳ್ಳೇರಿಯಾದ ಕೋಳಿಕಾಲ ನಿವಾಸಿ. ಗಾಳಿಮುಖಕ್ಕೆ ಬಂದಿದ್ದ ಅವರು, ಬಸ್ಸಿನಿಂದ ಇಳಿದು ರಸ್ತೆ ದಾಟಬೇಕು ಎನ್ನುವಷ್ಟರಲ್ಲಿ ದುರ್ಘಟನೆ ನಡೆದಿದೆ.

ಮೃತರು ಪತ್ನಿ ನಾರಾಯಣಿ, ಪುತ್ರರಾದ ಮಣಿ, ಸಂತೋಷ್‌, ಪುತ್ರಿಯರಾದ ಶ್ಯಾಮಲಾ, ಸಾವಿತ್ರಿ ಅವರನ್ನು ಅಗಲಿದ್ದಾರೆ. ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.ಸಂಪ್ಯ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ

Leave A Reply

Your email address will not be published.