Deadly Accident: ಬಸ್‌-ಕಾರು ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರ ಸಹಿತ ಐವರ ಸಾವು!!!

Uttara kannada deadly accident four of same family killed in car and bus accident near sirsi

Sirsi Deadly Accident: ಕುಮಟಾ ಕಡೆಯಿಂದ ಶಿರಸಿ ಕಡೆಗೆ ಬರುತ್ತಿದ್ದ ಮಾರುತಿ ಸ್ವಿಫ್ಟ್‌ ಕಾರು ಮತ್ತು ಶಿರಸಿಯಿಂದ ಕುಮಟಾ ಕಡೆಗೆ ಹೋಗುತ್ತಿದ್ದ ಸರಕಾರಿ ಬಸ್‌ ನಡುವೆ ಭೀಕರ ಅಪಘಾತ (Sirsi Deadly Accident) ಸಂಭವಿಸಿದ್ದು, ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರ ಸಹಿತ ಐವರು ಮೃತ ಹೊಂದಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಶುಕ್ರವಾರ (ಇಂದು) 11.30 ರ ಸುಮಾರಿಗೆ ಶಿರಸಿ ತಾಲೂಕಿನ ಬಂಡಲ ಎಂಬಲ್ಲಿ ನಡೆದಿದೆ.

ಬಸ್ಸಿನಲ್ಲಿ ಒಟ್ಟು 60 ಕ್ಕೂ ಅಧಿಕ ಪ್ರಯಾಣಿಕರಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ವರದಿಯಾಗಿದೆ.

ಅಪಘಾತದ ತೀವ್ರತೆ ಎಷ್ಟಿದೆಯೆಂದರೆ ಕಾರು ಸಂಪೂರ್ಣ ಜಖಂ ಗೊಂಡಿದೆ. ಕೆಲವರು ಆ ಕಾರಿನಲ್ಲಿದ್ದವರು ತಮಿಳುನಾಡಿವರು ಎಂದು ಹೇಳಲಾಗಿದೆ. ಇನ್ನೊಂದು ಮೂಲಗಳ ಪ್ರಕಾರ ಮೃತ ನಾಲ್ವರು ಮಂಗಳೂರು ಮೂಲದವರಾಗಿದ್ದು, ಒಂದೇ ಕುಟುಂಬದವರು ಎಂದು ಹೇಳಲಾಗಿದೆ. ಮೃತ ಇನ್ನೋರ್ವ ತಮಿಳುನಾಡು ಮೂಲದವರೆಂದು ಹಿಂದೂಸ್ತಾನ್‌ ಟೈಮ್ಸ್ ವರದಿ ಮಾಡಿದೆ.

ದಕ್ಷಿಣ ಕನ್ನಡದ ಮಂಗಳೂರು ತಾಲೂಕಿನ ಕಿನ್ನಿಕಂಬಳದ ರಿಕ್ಷಾ ಚಾಲಕ ರಾಮಕೃಷ್ಣರಾವ್ ಬಾಬುರಾವ್ (71), ವಿದ್ಯಾಲಕ್ಷ್ಮಿ ಕೊಂ ರಾಮಕೃಷ್ಣರಾವ್ (67) ಪುಷ್ಪಾ ಮೋಹನ್ ರಾವ್ (62), ಇನ್ಪೋಸಿಸ್ ಇಂಜನೀಯರ್ ಸುಹಾಸ್ ಗಣೇಶ್ ರಾವ್ (30) ಚೆನ್ನೈನ ಅರವಿಂದ್ (45) ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಕೂಡ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಬಸ್ಸಿನ ಚಾಲಕನ ಭಾಗ ಕೂಡಾ ನಜ್ಜುಗುಜ್ಜಾಗಿದ್ದು, ಚಾಲಕನಿಗೆ ಏನೂ ಸಂಭವಿಸಿಲ್ಲ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Animal Death: ಅರ್ಜುನ ಸಾವಿನ ಬೆನ್ನಲ್ಲೇ ಒಂದು ಆನೆ ಮರಿ, ಎರಡು ಹುಲಿಗಳ ಸಾವು! ನಿಗೂಢ ಸಾವಿಗೆ ಕಾರಣ ಇದೇನಾ?

Leave A Reply

Your email address will not be published.