ಮಗುವನ್ನೇ ಗಿಫ್ಟ್ ಕೊಡ್ತೀನಿ ಎಂದಿದ್ದ ಗರ್ಭಿಣಿ, ಮುಂದಾಗಿದ್ದೇ ರೋಚಕ!

death news accident news pregnant woman died in an ambulance accident near Vijayapura Talikoti

ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಗರ್ಭಿಣಿಯನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ರವಾನಿಸುತ್ತಿರುವ ಸಂದರ್ಭದಲ್ಲಿ ಭೀಕರ ಅಪಘಾತ ಉಂಟಾಗಿದೆ. ಈ ವೇಳೆಯಲ್ಲಿ ತಾಯಿ ಹಾಗೂ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿದೆ. ಇಂತಹ ಹೃದಯವಿದ್ರಾವಕ ಘಟನೆಯು ವಿಜಯಪುರದಲ್ಲಿ ನಡೆದಿದ್ದು, ವೈದ್ಯರ ಎಡವಟ್ಟೇ ಈ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ.

ಮೃತ ಗರ್ಭಿಣಿಯನ್ನು ಭಾಗ್ಯಶ್ರೀ ರಾವುತಪ್ಪ ಪಾರಣ್ಣನವರ (20) ಎಂದು ಗುರುತಿಸಲಾಗಿದ್ದು, ಈಕೆಗೆ ಕಳೆದ ಒಂದು ವರ್ಷದ ಹಿಂದೆ ಡಿಸೆಂಬರ್ 2 ರಂದು ರಾವುತಪ್ಪ ಜೊತೆಗೆ ಮದುವೆಯಾಗಿತ್ತು. ಪತಿಯೊಂದಿಗೆ ಅನ್ಯೋನ್ಯವಾಗಿದ್ದು, ಸುಖ ಸಂಸಾರ ನಡೆಸುತ್ತಿದ್ದ ಆಕೆ ಮದುವೆ ವಾರ್ಷಿಕೋತ್ಸವಕ್ಕೆ ಮಗುವನ್ನೇ ಗಿಫ್ಟ್ ಆಗಿ ನೀಡುತ್ತೇನೆಂದು ತನ್ನ ಗಂಡನೊಂದಿಗೆ ಆಗಾಗ ಹೇಳುತ್ತಿದ್ದಳು. ಹೆರಿಗೆಗಾಗಿ ಆಸ್ಪತ್ರೆಗೆ ಬರುವ ಸಂದರ್ಭದಲ್ಲಿ ಕೂಡ ಇದೇ ಮಾತನ್ನು ಹೇಳಿ ಬಂದಿದ್ದಳು. ಆದರೆ ವಿಧಿಯಾಟವೆಂಬಂತೆ ಮಗುವನ್ನು ಹೆರುವ ಮೊದಲೇ ತಾಯಿ ಮಗು ಇಬ್ಬರೂ ಸ್ವರ್ಗಸ್ಥರಾಗಿದ್ದಾರೆ.

ಮದುವೆಯಾಗಿ ಗಂಡನ ಮನೆಗೆ ಹೋದ ವರ್ಷದ ನಂತರ ಮೊದಲ ಹೆರಿಗೆಗಾಗಿ ಭಾಗ್ಯಶ್ರೀ ತಾಳಿಕೋಟೆ ತಾಲೂಕಿನ ನಾವದಗಿ ಗ್ರಾಮದಲ್ಲಿದ್ದ ತನ್ನ ತವರು ಮನೆಗೆ ಬಂದಿದ್ದಳು. ಇಂದು ಹೆರಿಗೆ ನೋವು ಕಾಣಿಸಿಕೊಂಡ ಪರಿಣಾಮ ತವರು ಮನೆಯಿಂದ ತಾಳಿಕೋಟೆ ಸಮುದಾಯ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಆರೋಗ್ಯದಲ್ಲಿ ಏರುಪೇರು ಕಂಡ ಕಾರಣ ವೈದ್ಯರು ಜಿಲ್ಲಾಸ್ಪತ್ರೆಗೆ ರವಾನಿಸುವಂತೆ ಸಲಹೆ ನೀಡಿದ್ದರು.‌ ಈ ಹಿನ್ನೆಲೆ ಗರ್ಭಿಣಿಯನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸುವ ಸಲುವಾಗಿ ವೇಗದಲ್ಲಿ ಚಲಿಸುತ್ತಿದ್ದ ಆಂಬುಲೆನ್ಸ್ ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಉಂಟಾಗಿದೆ. ಈ ವೇಳೆ ಗರ್ಭಿಣಿಗೆ ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದು, ಜೊತೆಗೆ ಹೊಟ್ಟೆಯಲ್ಲಿದ್ದ ಮಗು ಕೂಡ ಮರಣ ಹೊಂದಿದೆ.

ಇದನ್ನು ಓದಿ: ʼಸುಹಾಗ್‌ರಾತ್‌(ಫಸ್ಟ್‌ನೈಟ್‌) ಸ್ಪೆಷಲ್‌ ಪಾನ್‌ʼ ತಿಂದಿದ್ದೀರಾ? ಹಾಗಾದರೆ ಒಮ್ಮೆ ತಿನ್ನಿ, ಆದರೆ ಜೇಬು ತುಂಬಾ ದುಡ್ಡು ಇರಲಿ!!!

ಇನ್ನು ಅಂಬ್ಯುಲೆನ್ಸ್ ನಲ್ಲಿದ್ದ ಇಬ್ಬರು ಸ್ಟಾಪ್ ನರ್ಸ್ ಹಾಗೂ ಒರ್ವ ಸಹಾಯಕನಿಗೆ ಗಾಯವಾಗಿದ್ದು, ಇವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆಯ ನಂತರ ಮೃತ ಭಾಗ್ಯಶ್ರೀ ಪೋಷಕರು ಸಮುದಾಯ ಆಸ್ಪತ್ರೆ ಬಳಿ ಪ್ರತಿಭಟನೆ ನಡೆಸಿದ್ದು, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಮೊದಲ ಹೆರಿಗೆ ನೋವಿನ ಸಂದರ್ಭದಲ್ಲೇ ಗರ್ಭಿಣಿಯ ಪರಿಸ್ಥಿತಿ ತಿಳಿಸಿದ್ದರೆ ನಿಧಾನವಾಗಿ ಆಸ್ಪತ್ರೆಗೆ ತಲುಪಿಸಬಹುದಿತ್ತು. ಆದರೆ ತೀವ್ರ ಹೆರಿಗೆ ನೋವಿನ ನಂತರ ಆರೋಗ್ಯದಲ್ಲಿ ಏರುಪೇರಾಗುವವರೆಗೂ ವೈದ್ಯರು ನಿರ್ಲಕ್ಷ ತೋರಿದ್ದೇ ಈ ಅಪಘಾತಕ್ಕೆ ಕಾರಣ ಎಂದು ಮೃತಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Leave A Reply

Your email address will not be published.