Health Card: ಸರಕಾರದಿಂದ ಹೊಸ ಹೆಲ್ತ್‌ಕಾರ್ಡ್‌ ಬಿಡುಗಡೆ; ಸಿಗಲಿದೆ ದೇಶದ ಎಲ್ಲಾ ಕಡೆ ಈ ಸೌಲಭ್ಯ!

Karnataka govt released new health card ayushman Bharat arogya Karnataka treatment available in country

Ayushman Bharat-Arogya Karnataka: ಆರೋಗ್ಯ ಇಲಾಖೆ ಇದೀಗ ಆಯುಷ್ಮಾನ್‌ ಭಾರತ್‌(Ayushman Bharat) -ಆರೋಗ್ಯ ಕರ್ನಾಟಕ(Arogya Karnataka) ಹೆಲ್ತ್‌ ಕಾರ್ಡ್‌ಗಳಿಗೆ ಹೊಸ ರೂಪವೊಂದನ್ನು ನೀಡಿದ್ದು, ಇದರ ಹೆಸರಿನಲ್ಲೂ ಕೂಡಾ ಬದಲಾವಣೆ ಮಾಡಲಾಗಿದೆ. ಇದಕ್ಕೆ ಆಯುಷ್ಮಾನ್‌ ಭಾರತ್‌-ಪ್ರಧಾನ ಮಂತ್ರಿ ಜನಾರೋಗ್ಯ-ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಎಂದು ಹೆಸರಿಡಲಾಗಿದೆ. ಇದನ್ನು ಹೊಂದಿರುವವರು ದೇಶದ ಯಾವುದೇ ಕಡೆ (ನೋಂದಾಯಿತ) ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯಬಹುದು ಎಂದು ವರದಿಯಾಗಿದೆ.

ಡಿ.6 ರಂದು ಸಿಎಂ ಸಿದ್ದರಾಮಯ್ಯ (CM SIddaramaiah) ಅವರು ನವೀಕೃತ ಹೆಲ್ತ್‌ ಕಾರ್ಡ್‌ನ್ನು ಬಿಡುಗಡೆ ಮಾಡಿದ್ದು, ಇದು 5.9 ಕೋಟಿ ಜನರಿಗೆ ವಿತರಿಸುವ ಮಹತ್ವದ ಉದ್ದೇಶವನ್ನು ಹೊಂದಿದೆ. ರಾಜ್ಯದ ಬಿಪಿಎಲ್ (BPL) ಕಾರ್ಡ್‌ದಾರರು ದೇಶದ ಇತರೆ ರಾಜ್ಯಗಳಲ್ಲಿ ಇದರ ಅಡಿ ಚಿಕಿತ್ಸೆ ಪಡೆಯಲು ಅನುಕೂಲ ಮಾಡಿಕೊಡಲಾಗಿದೆ. ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ನ್ಯಾಷನಲ್ ಪೊರ್ಟಲ್‌ಗೆ ನೂತನ ಹೆಲ್ತ್ ಕಾರ್ಡ್‌ಗಳನ್ನು ಸಂಯೋಜನೆಗೊಳಿಸಲಾಗಿದೆ.

BPL ಪಡಿತ ಚೀಟಿ ಹೊಂದಿರುವವರು ವಾರ್ಷಿಕ 5 ಲಕ್ಷ ರೂ. ಮೌಲ್ಯದ ಚಿಕಿತ್ಸೆಯನ್ನು ಕುಟುಂಬದ ಒಬ್ಬ ಅಥವಾ ಹಲವರು Family Floater ಆಧಾರದ ಮೇಲೆ ಬಳಸಿಕೊಳ್ಳಬಹುದು.

APL ಕುಟುಂಬದವರಿಗೂ ಈ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಇದರಲ್ಲಿ 5 ಲಕ್ಷದ ರೂ. ಮೌಲ್ಯದ ಚಿಕಿತ್ಸೆಯಲ್ಲಿ ಗರಿಷ್ಠ 1.5 ಲಕ್ಷ ವೆಚ್ಚವನ್ನು ರಾಜ್ಯ ಸರಕಾರ ಪಾವತಿಸಲಿದೆ. ಎಪಿಎಲ್‌ ಕಾರ್ಡ್‌ದಾರರು ಶೇ.70 ರಷ್ಟು ಚಿಕಿತ್ಸಾ ವೆಚ್ಚ ಭರಿಸಿದರೆ, ಶೇ.30ರಷ್ಟು ರಾಜ್ಯ ಸರಕಾರ ಭರಿಸಲಿದೆ.

3450 ಕ್ಕೂ ಹೆಚ್ಚಿನ ಆರೋಗ್ಯ ಸಂಸ್ಥೆಗಳು ಆಯುಷ್ಮಾನ್‌ ಭಾರತ್- “ಪ್ರಧಾನ ಮಂತ್ರಿ ಜನಾರೋಗ್ಯ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಸೇವೆ ನೀಡಲು ಮುಂದಾಗಿದೆ. 1650 ಚಿಕಿತ್ಸಾ ಪ್ಯಾಕೇಜ್‌ಗಳು ರಾಜ್ಯದ ಎಲ್ಲ ಸಾರ್ವಜನಿಕ ಆಸ್ಪತ್ರೆ ಮತ್ತು 540 ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಸಿಗಲಿದೆ. 171 ಅತ್ಯಂತ ತುರ್ತು ಚಿಕಿತ್ಸೆಯ ಮತ್ತು ಜೀವ ಉಳಿಸುವ ಪ್ಯಾಕೇಜ್‌ಗಳನ್ನು ಒಳಗೊಂಡಿದೆ.

ರಾಜ್ಯ ಸರಕಾರವು ಶೇ.66 ರಷ್ಟು ಅನುದಾನ ನೀಡಿದರೆ, ಕೇಂದ್ರ ಸರಕಾರವು ಶೇ.34 ರಷ್ಟು ನೀಡುತ್ತಿದೆ.

ಇದನ್ನೂ ಓದಿ:Putturu: ಪುತ್ತೂರಿನಲ್ಲಿ ಸಾವಿರಾರು ಉದ್ಯೋಗಾವಕಾಶದ ಭರವಸೆ, KMF ಹಾಲು ಸಂಸ್ಕರಣ ಘಟಕಕ್ಕೆ ಜಮೀನು ಮಂಜೂರು!!

 

Leave A Reply

Your email address will not be published.