MasterChef India: ‘ಮಾಸ್ಟರ್ ಶೆಫ್ ಇಂಡಿಯಾ’ ರಿಯಾಲಿಟಿ ಶೋ ಗೆದ್ದ ಮಂಗಳೂರಿನ ಯುವಕ! ಸಣ್ಣ ಜ್ಯೂಸ್‌ ಅಂಗಡಿ ಇಟ್ಟಿದ್ದ ಯುವಕ ರಿಯಾಲಿಟಿ ಶೋ ವಿನ್ನರ್‌!!!

Mangalore Mohammed Aashiq wins MasterChef India season 8 reality show latest news

MasterChef India: ಮಾಸ್ಟರ್‌ ಶೆಫ್‌ ಇಂಡಿಯಾ(MasterChef India)  ಸ್ಪರ್ಧೆಯಲ್ಲಿ ಮಂಗಳೂರಿನ ಪ್ರತಿಭಾವಂತ ಯುವಕ ವಿಜೇತರಾಗಿದ್ದಾರೆ. ಸೋನಿ ಲೈವ್‌ ಒಟಿಟಿ ಫ್ಲಾಟ್‌ಫಾರ್ಮ್‌ ಮುಂಬೈನಲ್ಲಿ ನಡೆಯುತ್ತಿದ್ದ ಈ ಸ್ಪರ್ಧೆಯಲ್ಲಿ ಮಂಗಳೂರಿನ ಮುಹಮ್ಮದ್‌ ಆಶಿಕ್‌ (24) ರಿಯಾಲಿಟಿ ಶೋ ವಿನ್ನರ್‌ ಎಂದು ಘೋಷಿಸಲಾಗಿದೆ.

ದೇಶದಾದ್ಯಂತಹ ಎಕ್ಸ್‌ಪರ್ಟ್‌ ಶೆಫ್‌ಗಳನ್ನು ತೀರ್ಪುಗಾರರಾಗಿರುವ ಈ ಶೋನಲ್ಲಿ ದಕ್ಷಿಣ ಭಾರತದಿಂದ ಸ್ಪರ್ಧೆಯ ಮೊದಲ ವಿಜೇತರಾಗಿ ಆಶಿಕ್‌ ಹೊರಹೊಮ್ಮಿದ್ದಾರೆ.

ದ.ಕ.ಜಿಲ್ಲೆಯ ಯುವಕನೊಬ್ಬ ಪ್ರತಿಷ್ಠಿತ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜಯಿಯಾಗಿದ್ದಾರೆ. ಹೋಟೆಲ್‌ ಮ್ಯಾನೇಜ್‌ಮೆಂಟ್‌ನಲ್ಲಿ ವೃತ್ತಿಜೀವನವನ್ನು ಆರಂಬಿಸುವ ಕನಸು ಕಂಡಿದ್ದ ಆಶಿಕ್‌ ಅವರು ಮನೆಯ ಆರ್ಥಿಕ ಸಮಸ್ಯೆಗಳಿಂದಾಗಿ ಸಾಧ್ಯವಾಗಿರಲಿಲ್ಲ. ಮಂಗಳೂರಿನಲ್ಲಿ ʼಕುಲ್ಕಿ ಹಬ್‌ʼ ಹೆಸರಿನ ಜ್ಯೂಸ್‌ ಅಂಗಡಿಯನ್ನು ತೆರೆದಿದ್ದು, ಪಾಕ ವಿಧಾನಗಳಲ್ಲಿ ಎತ್ತಿದ ಕೈ.

ಎಲಿಮಿನೇಷನ್‌ ಎದುರಿಸುವುದರಿಂದ ಟ್ರೋಫಿ ಹಿಡಿಯುವುವರೆಗೆ ಹಲವು ಪಾಠ ಕಲಿತಿದ್ದೇನೆ. ನನ್ನ ಜೀವನ ಮತ್ತೆ ರೂಪುಗೊಂಡಿದೆ. ಮಾಸ್ಟರ್‌ಚೆಫ್‌ ಇಂಡಿಯಾದ ಗೆಲುವಿಗೆ ನಾನು ಕೃತಜ್ಞ. ವಿಕಾಸ್‌, ರಣವೀರ್ ಮತ್ತು ಪೂಜಾ ತೀರ್ಪುಗಾರರಿಗೆ ಧನ್ಯವಾದ ತಿಳಿಸಿದ್ದಾರೆ. ಸಹ ಸ್ಪರ್ಧಿಗಳು, ಪ್ರೇಕ್ಷಕರು ಮತ್ತು ಅಡುಗೆಮನೆಯಲ್ಲಿ ಪ್ರತಿ ದಿನ ಉತ್ತಮವಾಗಿ ಕಾರ್ಯನಿರ್ವಹಿಸಲು ನನ್ನನ್ನು ಪ್ರೇರೇಪಿಸಿದ್ದಕ್ಕೆ ಧನ್ಯವಾದ ಎಂದು ಹೇಳಿದ್ದಾರೆ.

ಜೆಪ್ಪು ಮಹಾಕಾಳಿಪಡ್ಪುವಿನ ಅಬ್ದುಲ್‌ ಖಾದರ್-ಸಾರಮ್ಮ ದಂಪತಿಯ ಏಕೈಕ ಪುತ್ರ ಮುಹಮ್ಮದ್‌ ಆಶಿಕ್‌. ನಗರದ ಬೇರೆ ಬೇರೆ ಕಾಲೇಜುಗಳಲ್ಲಿ ನಡೆಯುವ ನಾನಾ ಕಾರ್ಯಕ್ರಮಗಳ ಸಂದರ್ಭ ಸ್ಟಾಲ್‌ ಹಾಕಿ ವ್ಯಾಪಾರ ಮಾಡುತ್ತಿದ್ದ ಆಶಿಕ್‌ ಅವರು ಆಹಾರದಲ್ಲಿ ಮಾತ್ರವಲ್ಲದೇ ಕುಲ್ಕಿ ಶರ್ಬತ್‌ ಸಹಿದ ನಾನಾ ಬಗೆಯ ಪಾನೀಯ ಮಾರುತ್ತಿದ್ದರು. ಹೈದರಾಬಾದ್‌, ಬೆಂಗಳೂರಿನಲ್ಲಿ ನಡೆದ ಶೆಫ್‌ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾಗಿದ್ದ ಇವರು ಇದೀಗ ಮಾಸ್ಟರ್‌ ಶೆಫ್‌ ಇಂಡಿಯಾ ವಿಜೇತ ಪಟ್ಟವನ್ನು ಗಳಿಸಿದ್ದಾರೆ.

ಇದನ್ನೂ ಓದಿ: ಪುತ್ತೂರು : ಅನೈತಿಕ ಸಂಬಂಧ ಬಾಗಲಕೋಟೆ ಮೂಲದ ಯುವಕನನ್ನು ಅಪಹರಿಸಿ ಕೊಲೆ -ಇಬ್ಬರ ಬಂಧನ

Leave A Reply

Your email address will not be published.