Putturu: ಅನೈತಿಕ ಸಂಬಂಧ ಬಾಗಲಕೋಟೆ ಮೂಲದ ಯುವಕನನ್ನು ಅಪಹರಿಸಿ ಕೊಲೆ -ಇಬ್ಬರ ಬಂಧನ

Puttur news A youth from Bagalkot was kidnapped and murdered two arrested

Putturu: ಪುತ್ತೂರಿನ ಕುಂಬ್ರದಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹವು ಆಗುಂಬೆ ಘಾಟ್‌ನಲ್ಲಿ (Agumbe Ghat) ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಕುರಿತು ವರದಿಯಾಗಿದೆ(Putturu news).

ಕೊಲೆ ಮಾಡಿ ಆಗುಂಬೆ ಘಾಟ್‌ನಲ್ಲಿ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇಬ್ಬರನ್ನು ವಶಕ್ಕೆ ಪೊಲೀಸರು ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಮಿ ತಾಲೂಕಿನ ಡಾಣಕಶಿರೂರು ನಿವಾಸಿ ಹನುಮಂತ (22) ಮೃತರು. ಇವರು ಟಿಪ್ಪರ್‌ ಚಾಲಕರಾಗಿ ದುಡಿಯುತ್ತಿದ್ದ ಇವರು ನಾಪತ್ತೆಯಾದ ಐದು ದಿನದ ಹಿಂದಷ್ಟೇ ಕೆಲಸಕ್ಕೆ ಸೇರಿದ್ದರು.

ನ.17 ರಂದು ಮ್ಯಾಕ್ಸಿ ವಾಹನದಲ್ಲಿ ಬಂದ ತಂಡವೊಂದು ಕುಂಬ್ರ ಮಸೀದಿ ಬಳಿಯ ರೂಂ ನಿಂದ ಹನುಮಂತನನ್ನು ಅಪಹರಿಸಿರುವುದಾಗಿ ತಾಯಿ ಸಂಪ್ಯ ಪೊಲೀಸ್‌ ಠಾಣೆಗೆ ನ.19 ರಂದು ದೂರು ನೀಡಿದ್ದರು.

ಮೇಲ್ನೋಟಕ್ಕೆ ಇದು ಅಕ್ರಮ ಸಂಬಂಧದ ಕೊಲೆಯೇ ಎಂದು ಸಂಶಯ ವ್ಯಕ್ತವಾಗಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ಬಾದಾಮಿ ತಾಲೂಕಿನ ಶಿವಪ್ಪ (45) ಎಂಬಾತನ ಪತ್ನಿಯ ಜೊತೆ ಅಕ್ರಮ ಸಂಬಂಧ ವಿಷಯವೇ ಕೊಲೆಗೆ ಕಾರಣವಾಯಿಯೇ ಎನ್ನಲಾಗುತ್ತಿದೆ.

ಮೃತ ಹನುಮಂತನ ಮಾವ ಮಂಜುನಾಥ ಎಂಬುವರ ಬಳಿ ಆರೋಪಿ ಶಿವಪ್ಪ ಕೆಲದಿನಗಳ ಹಿಂದೆ ಬಂದಿದ್ದು, ತನ್ನ ಪತ್ನಿಯ ಜೊತೆ ಹನುಮಂತನ ಅಕ್ರಮ ಸಂಬಂಧ ಹೊಂದಿದ್ದು, ಆತನನ್ನು ಎಲ್ಲಿಯಾದರೂ ದೂರ ಕಳುಹಿಸು ಎಂದು ಹೇಳಿದ್ದು, ಹೀಗಾಗಿ. ನ.10 ರಂದು ಹನುಮಂತನನ್ನು ಮಂಜುನಾಥವರು ಪುತ್ತೂರಿನ ಕುಂಬ್ರಕ್ಕೆ ಟಿಪ್ಪರ್‌ ಚಾಲಕನಾಗಿ ಕಳುಹಿಸಿಕೊಟ್ಟಿದ್ದರು.

ನ. 17ರಂದು ಮಧ್ಯಾಹ್ನ ಶಿವಪ್ಪ ಮಂಜುನಾಥರಿಗೆ ಕರೆ ಮಾಡಿ ನಿನ್ನ ಅಕ್ಕನ ಮಗ ಸಿಕ್ಕಿದರೆ ಖಂಡಿತ ಬಿಡುವುದಿಲ್ಲ ಎಂದು ಹೇಳಿದ್ದಾನೆ ಎನ್ನಲಾಗಿದೆ. ಅನಂತರ ಸಂಜೆ 6.30 ಕ್ಕೆ ಗಂಟೆಗೆ ಶಿವಪ್ಪ ತನ್ನ ಸಹಚರರಾದ ಮಂಜುನಾಥಮ ದುರ್ಗಪ್ಪ ಮಾದರ ಜೊತೆಎ ಕುಂಬ್ರಕ್ಕೆ ಬಂದು ಮಸೀದಿ ಬಳಿಯ ರೂಂನಲ್ಲಿದ್ದ ಹನುಮಂತ ಮಾದರನನ್ನು ಪುತ್ತೂರು ಕಡೆಗೆ ಕರೆದುಕೊಂಡು ಹೋಗಿದ್ದಾರೆ. ಅನಂತರ ಹನುಮಂತನ ಮೊಬೈಲ್‌ ಫೋನ್‌ ಸ್ವಿಚ್‌ ಆಫ್‌ ಆಗಿದೆ.

ನ.19 ರಂದು ತಾಯಿ ರೇಣವ್ವ, ಮಾವ ಮಂಜುನಾಥ ಪುತ್ತೂರು ಗ್ರಾಮಾಂತರ ಠಾಣೆಗೆ ಬಂದು ದೂರು ನೀಡಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರು ಹನುಮಂತನನ್ನು ಕರೆದುಕೊಂಡು ಹೋಗಿದ್ದ ಇಬ್ಬರನ್ನು ವಶಕ್ಕೆ ಪಡೆದಾಗ ಈ ಕೊಲೆ ಮಾಹಿತಿ ಬಹಿರಂಗಗೊಂಡಿದೆ. ಆಗುಂಬೆಘಾಟ್‌ನ ಮೂರನೇ ತಿರುವಿನ ರಸ್ತೆ ಬಳಿ ಮೃತದೇಹ ಪತ್ತೆಯಾಗಿದೆ. ಮಂಜುನಾಥ, ಶಿವಪ್ಪರನ್ನು ಬಂಧಿಸಲಾಗಿದ್ದು, ದುರ್ಗಪ್ಪ ಪರಾರಿಯಾಗಿರುವ ಕುರಿತು ವರದಿಯಾಗಿದೆ.

ಕುಂಬ್ರಕ್ಕೆ ಬಂದಿದ್ದ ಮಂಜುನಾಥ, ಶಿವಪ್ಪ, ದುರ್ಗಪ್ಪ ಅವರು ಹನುಮಂತನನ್ನು ಊರಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಬಂದಿದ್ದ ಇವರು, ಟಿಪ್ಪರ್‌ ಮಾಲಕ ಮೋಹನ್‌ದಾಸ ರೈ ಅವರು ಅವರ ಫೋಟೋ ತೆಗೆದಿಟ್ಟುಕೊಳ್ಳಿ ಎಂದು ಹೇಳಿದ್ದು, ಹಾಗಾಗಿ ಕೆಲಸದವರು ಆ ಮೂವರ ಫೋಟೋ ತೆಗೆದಿದ್ದರು. ಈ ಫೋಟೋ ಪೊಲೀಸರಿಗೆ ಆರೋಪಿಗಳನ್ನು ಪತ್ತೆ ಹಚ್ಚಲು ಸಹಾಯ ಮಾಡಿದೆ.

ಇದನ್ನೂ ಓದಿ: Mangaluru News: Surathkal ಪ್ರಶಾಂತ್‌, ಆಯೆಷಾ (ಅಕ್ಷತಾ) ಪೊಲೀಸ್‌ ಠಾಣೆಗೆ ಹಾಜರು!!!

Leave A Reply

Your email address will not be published.