Uttar Pradesh crime: ಪಾಸ್‌ಪೋರ್ಟ್‌ ಪರಿಶೀಲನೆಗೆಂದು ಬಂದ ಮಹಿಳೆಯ ತಲೆಗೆ ಗುಂಡು ಹಾರಿಸಿದ ಪೊಲೀಸ್‌ ಇನ್ಸ್‌ಪೆಕ್ಟರ್‌! ವೀಡಿಯೋ ವೈರಲ್‌!

Uttar Pradesh woman mistakenly shot in head by police inside police station video viral

Uttar Pradesh crime: ಪಾಸ್‌ಪೋರ್ಟ್‌ ಪರಿಶೀಲನೆಗೆಂದು ಬಂದಿದ್ದ ಮಹಿಳೆಯೊಬ್ಬರಿಗೆ ಪೊಲೀಸ್‌ ಠಾಣೆಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಸರ್ವಿಸ್‌ ರಿವಾಲ್ವರ್‌ನಿಂದ ಗುಂಡು ಹಾರಿಸಿರುವ ಘಟನೆಯೊಂದು ನಡೆದಿದೆ(Uttar Pradesh crime). ಈ ಘಟನೆ ಉತ್ತರ ಪ್ರದೇಶದ ಆಲಿಘರ್‌ನಲ್ಲಿ ನಡೆದಿದೆ.

ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಗಾಯಗೊಂಡ ಮಹಿಳೆಯನ್ನು ಇಶ್ರತ್‌ ಎಂದು ಗುರುತಿಸಲಾಗಿದೆ. ತನ್ನ ಮಗನೊಂದಿಗೆ ಅವರು ಠಾಣೆಗೆ ಬಂದಿದ್ದು, ಅಲ್ಲಿಗೆ ಬಂದಿದ್ದ ಪೊಲೀಸ್‌ ಅಧಿಕಾರಿ ಎಸ್‌ಐ ಮನೋಜ್‌ ಶರ್ಮ ಅವರಿಗೆ ಪಿಸ್ತೂಲ್‌ ನೀಡಿದ್ದಾರೆ. ಈ ಸಂದರ್ಭ ರಿವಾಲ್ವರ್‌ ಕ್ಲೀನ್‌ ಮಾಡುವಾಗ ಆಕಸ್ಮಿಕವಾಗಿ ಗುಂಡು ಸಿಡಿದಿದೆ. ಮಹಿಳೆಯ ತಲೆಗೆ ಗಂಭೀರ ಗಾಯವಾಗಿದ್ದು, ಮಹಿಳೆ ಅಲ್ಲೇ ಕುಸಿದು ಬಿದ್ದಿದ್ದಾಳೆ.

ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಗುಂಡು ತಲೆಯ ಹಿಂಭಾಗಕ್ಕೆ ತಗುಲಿದೆ. ಸ್ಥಿತಿ ಗಂಭೀರ ಎಂದು ವರದಿಯಾಗಿದೆ.

ಎಸ್‌ಐ ಅವರನ್ನು ತಕ್ಷಣ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಈ ಘಟನೆ ಕುರಿತು ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Deadly Accident: ಶಿರಸಿಯಲ್ಲಿ ಭೀಕರ ಅಪಘಾತ ಪ್ರಕರಣ; ಮಂಗಳೂರಿನ ಒಂದೇ ಕುಟುಂಬದ ಐವರ ಮೃತ್ಯು! ಶೋಕಸಾಗರದಲ್ಲಿ ಮುಳುಗಿದ ಕುಟುಂಬ!

Leave A Reply

Your email address will not be published.