Accident Case: ಕಿಟಕಿ ಒರೆಸುತ್ತಿರುವಾಗ 5 ನೇ ಮಹಡಿಯಿಂದ ಬಿದ್ದು ಮಹಿಳೆ ಸಾವು! ಕಾರಣವೇನು?

Bengaluru accident case woman dies after falling from 5th floor while whiping

Bengaluru Accident Case: ಮನೆಯೊಳಗಿದ್ದ ಕಿಟಕಿಯನ್ನು ಕ್ಲೀನ್‌ ಮಾಡುವ ಸಂದರ್ಭದಲ್ಲಿ ಕಾಲು ಜಾರಿ ಮಹಿಳೆಯೊಬ್ಬರು ಐದನೇ ಮಹಡಿಯಿಂದ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆಯೊಂದು ನಡೆದಿದೆ(Bengaluru Accident Case). ಖುಷ್ಬು ಆಶೀಷ್‌ ತ್ರಿವೇದಿ(31) ಎಂಬಾಕೆಯೇ ಮೃತಪಟ್ಟವರು. ಕಾಡುಗೋಡಿ ಸಮೀಪದ ದೊಡ್ಡಬನಹಳ್ಳಿಯ ಬಿಡಿಎ ವಿಂಧ್ಯಗಿರಿ ಅಪಾರ್ಟ್‌ಮೆಂಟ್‌ನಲ್ಲಿ ಈ ದುರ್ಘಟನೆ ನಡೆದಿದೆ. ಈ ಘಟನೆ ನಿನ್ನೆ (ಶನಿವಾರ) ನಡೆದಿದೆ.

ಖುಷ್ಬು ಅವರು ಮನೆಯೊಳಗಿದ್ದ ಟೇಬಲ್‌ ಮೇಲೆ ನಿಂತು ಕಿಟಕಿಯಲ್ಲಿದ್ದ ಧೂಳನ್ನು ಸ್ವಚ್ಛಮಾಡುತ್ತಿದ್ದರು ಅಷ್ಟೇ. ಒಮ್ಮೆ ಕಾಲು ಜಾರಿದೆ, ಅಷ್ಟಕ್ಕೇ ಕಿಟಕಿಯಿಂದ ಕೆಳಗೆ ಬಿದ್ದಿದಾರೆ. ಬಿದ್ದ ರಭಸಕ್ಕೆ ಸ್ಥಳದಲ್ಲೇ ಮೃತ ಹೊಂದಿದ್ದಾರೆ. ಈ ಅವಘಡಕ್ಕೆ ಕಿಟಕಿಗೆ ಗ್ರಿಲ್‌ ಅಳವಡಿಸದೇ ಇರುವುದೇ ಕಾರಣ ಎನ್ನಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Mangaluru: ಸಮುದ್ರಪಾಲಾಗಿದ್ದ ವಿದ್ಯಾರ್ಥಿಗಳ ಶವ ಪತ್ತೆ! ಕಾಲೇಜಿಗೆ ರಜೆ, ಸಮುದ್ರ ನೀರಾಟಕ್ಕಿಳಿದ ಯುವಕರ ದಾರುಣ ಸಾವು!

Leave A Reply

Your email address will not be published.