HDK in Kalladka: ಕಲ್ಲಡ್ಕ ಪ್ರಭಾಕರ್‌ ಭಟ್‌ ಶಾಲಾ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ; ಜೈ ಶ್ರೀರಾಮ್‌ ಎಂದು ಹೇಳಿದ ಮಾಜಿ ಸಿಎಂ!

Dakshina Kannada news former CM HDK participate in kalladka Sri Rama School sports festival

HDK in Kalladka: RSS ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಅವರ ಒಡೆತನದ ಶಾಲೆಯಲ್ಲಿ ಶನಿವಾರ ನಡೆದ ಸಮಾರಂಭವೊಂದರಲ್ಲಿ ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಪಾಲ್ಗೊಂಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಕುಮಾರಸ್ವಾಮಿ ಭಾಗವಹಿಸಿದ್ದರು.

ತಾನು ಇಲ್ಲಿಗೆ ಬಾರದಿದ್ದರೆ ತುಂಬಾ ನಷ್ಟವಾಗುತ್ತಿತ್ತು. ಬಾಲ್ಯದಲ್ಲಿ ತಾನು ಶ್ರೀರಾಮನ ಭಜನೆ ಮಾಡುತ್ತಿದ್ದೆ. ಭಾಂಧವ್ಯದ ಕೊರತೆ ಕಾಣುತ್ತಿರುವ ಈ ಸಂದರ್ಭದಲ್ಲಿ ಸೌಹಾರ್ಧದಿನಗಳನ್ನು ಕಾಣಲು ಸಂಸ್ಕೃತಿಯ ಬದುಕನ್ನು ಶಿಕ್ಷಣದ ಮೂಲಕ ನೀಡುತ್ತಿರುವ, ಈ ಮೂಲಕ ಸರಕಾರದ ಕಣ್ತೆರೆಸುವ ಶಿಕ್ಷಣ ಸಂಸ್ಥೆ ಡಾ.ಭಟ್‌ ಅವರದ್ದು, ಎಂದು ಹೇಳಿ ಜೈಶ್ರೀರಾಮ್ ಎಂದು ಎಚ್‌ಡಿಕೆ ಹೇಳಿದರು.

ಅಸೆಂಬ್ಲಿ ಚುನಾವಣೆಯ ಸೋಲಿನ ನಂತರ ಜೆಡಿಎಸ್‌ ಮುಖಂಡ, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಜಾತ್ಯತೀಯ ಸಿದ್ಧಾಂತ ಬಿಟ್ಟಿದ್ದಾರಾ? ಎಂಬ ಪ್ರಶ್ನೆಯೊಂದನ್ನು ಎದ್ದು ಕಾಣುತ್ತಿದೆ. ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಕ್ರೀಡೋತ್ಸವಕ್ಕೆ ವಿಶೇಷ ಅತಿಥಿಯಾಗಿ ಎಚ್‌.ಡಿ.ಕುಮಾರಸ್ವಾಮಿ ಭಾಗಿಯಾಗಿರುವುದು ನಿಜಕ್ಕೂ ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದೆ. ಈ ಮೊದಲು ಕಲ್ಲಡ್ಕ ಪ್ರಭಾಕರ್‌ ಭಟ್‌ ಅವರ ವಿರುದ್ಧ ಮಾತನಾಡಿದ್ದ ಕುಮಾರಸ್ವಾಮಿ ಅವರು ಇದೀಗ ಅವರ ಶಾಲೆಗೇ ಭೇಟಿ ನೀಡಿದ್ದು ಚರ್ಚೆಗೆ ಗ್ರಾಸವಾಗಿರುವ ವಿಷಯ.

ಇತ್ತೀಚೆಗೆ ಕುಮಾರಸ್ವಾಮಿ ಅವರು ದತ್ತಪೀಠದಲ್ಲಿ ದತ್ತಮಾಲೆ ಧಾರಣೆ ಮಾಡಿ ತೆರಳುವ ಕುರಿತ ಹೇಳಿಕೆ ಕೂಡಾ ನೀಡಿದ್ದರು.

ಇದನ್ನೂ ಓದಿ: ಮಾಲ್‌ನಲ್ಲಿ ಮಹಿಳೆಯೊಬ್ಬರಿಂದ ಕುಡಿತದ ನಶೆಯಲ್ಲಿ ಗಲಾಟೆ; ಸಿಬ್ಬಂದಿಗೆ ಹಿಗ್ಗಾಮುಗ್ಗ ಥಳಿತ, ವೀಡಿಯೋ ವೈರಲ್‌

Leave A Reply

Your email address will not be published.