Kidney swap: ಇಬ್ಬರ ಜೀವ ಉಳಿಸಿದ ಕಿಡ್ನಿ ಸ್ವ್ಯಾಪಿಂಗ್! ಪುತ್ರರ ತ್ಯಾಗಕ್ಕೆ ದೇವ್ರು ಕೊಟ್ಟೇ ಬಿಟ್ಟ ವರ! ನಡೆದೇ ಬಿಡ್ತು ಅಪರೂಪದ ಘಟನೆ!

National news Kidney swap saves lives of two mothers from India and Tanzania

Kidney swap : ಕಿಡ್ನಿ ವೈಫಲ್ಯಕ್ಕೊಳಗಾಗಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಇಬ್ಬರು ತಾಯಂದಿರು. ಒಬ್ಬರು ಭಾರತದವರಾದರೆ, ಮತ್ತೊಬ್ಬರು ದೂರದ ತಾಂಜೇನಿಯಾದವರು. ‘ನನ್ನ ಕಿಡ್ನಿ ಕೊಟ್ಟಾದರೂ ಸರಿ, ಅಮ್ಮನನ್ನು ಉಳಿಸಿಕೊಳ್ಳುತ್ತೇನೆ’ ಎಂದು ನಿರ್ಧರಿಸಿರುವ ಅವರ ಪುತ್ರರು. ಆದರೆ ತಮ್ಮ ತಮ್ಮ ತಾಯಿಗೆ ಕಿಡ್ನಿ ಕೊಡಲು ಇಬ್ಬರು ಯುವಕರಿಗೂ ಬ್ಲಡ್ ಗ್ರೂಪ್ ಹೊಂದಿಕೆಯಾಗುತ್ತಿಲ್ಲ!

ಇಂಥ ಗೊಂದಲದಲ್ಲಿ ನಡೆದಿದ್ದೇ ‘ಅಪರೂಪದಲ್ಲಿ ಅಪರೂಪದ ಕಿಡ್ನಿ ಸ್ವಾಪಿಂಗ್'(Kidney swap ). ಹೌದು ಮುಂಬಯಿಯ ಆಸ್ಪತ್ರೆಯೊಂದರಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಕ್ರಾಸ್‌ಬಾರ್ಡರ್ ಕಿಡ್ನಿ ಸ್ವಾಪಿಂಗ್ ನಡೆದಿದೆ. ಪೂರ್ವ ಆಫ್ರಿಕಾದ ದೇಶ ತಾಂಜೇನಿಯಾದ ಮಹಿಳೆಯ ಪುತ್ರನು ಭಾರತದ ಮಹಿಳೆಗೆ ತನ್ನ ಕಿಡ್ನಿ ಯನ್ನು ದಾನ ಮಾಡಿದರೆ, ಭಾರತದ ಮಹಿಳೆಯ ಪುತ್ರನು ತಾಂಜೇನಿಯಾದ ಮಹಿಳೆಗೆ ಕಿಡ್ನಿ ದಾನ ಮಾಡಿದ್ದಾರೆ.

ಮೂತ್ರಕೋಶ ಸಮಸ್ಯೆಯಿಂದ ಬಳಲು ತ್ತಿದ್ದ ತಾಂಜೇನಿಯಾದ 58 ವರ್ಷದ ಫ್ರಾನ್ಸಿಸ್ಕಾ ಝಕಾರಿಯಾ ಅವರು ಮುಂಬಯಿಯ ಆಸ್ಪತ್ರೆಗೆ ದಾಖಲಾಗಿದ್ದರು. ಕಿಡ್ನಿ ಜೋಡಣೆ ಶಸ್ತ್ರಚಿಕಿತ್ಸೆ ಮಾಡಲೇಬೇಕು ಎಂದು ವೈದ್ಯರು ಸೂಚಿಸಿದ್ದರು. ಅವರಿಗೆ ಕಿಡ್ನಿ ನೀಡಲು 32 ವರ್ಷದ ಪುತ್ರ ಮುಂದೆ ಬಂದನಾದರೂ, ತಾಯಿ-ಮಗನ ಬ್ಲಡ್ ಗ್ರೂಪ್ ಮ್ಯಾಚ್ ಆಗದ ಕಾರಣ, ಶಸ್ತ್ರಚಿಕಿತ್ಸೆ ಅಸಾಧ್ಯ ಎಂದು ವೈದ್ಯರು ಹೇಳಿದರು.

ಇದೇ ಸಂದರ್ಭದಲ್ಲಿ ಮುಂಬಯಿಯವರೇ ಆದ 57 ವರ್ಷದ ಶೀಲಾ ಚೈನಾನಿ ಅವರೂ ಇದೇ ಸ್ಥಿತಿ ಎದುರಿಸುತ್ತಿದ್ದ ರು. ಅವರ ಮಗನ ರಕ್ತದ ಗ್ರೂಪ್ ಹೊಂದಿಕೆಯಾಗದ ಕಾರಣ, ಶೀಲಾ ಅವರ ಶಸ್ತ್ರಚಿಕಿತ್ಸೆಯೂ ನನೆಗುದಿಗೆ ಬಿದ್ದಿತ್ತು. ಆದರೆ ಪವಾಡವೆಂಬಂತೆ, ಫ್ರಾನ್ಸಿಸ್ಕಾ ಅವರ ಪುತ್ರನ ರಕ್ತದ ಮಾದರಿಯೂ ಶೀಲಾರ ರಕ್ತದ ಗುಂಪಿಗೆ ಮ್ಯಾಚ್ ಆಗುತ್ತಿತ್ತು. ಅದೇ ರೀತಿ, ಶೀಲಾರ ಪುತ್ರನ ಬ್ಲಡ್ ಗ್ರೂಪ್ ಮತ್ತು ಫ್ರಾನ್ಸಿಸ್ಕಾರ ಬ್ಲಡ್ ಗ್ರೂಪ್ ಒಂದೇ ಆಗಿತ್ತು. ಹೀಗಾಗಿ ಪರಸ್ಪರ ಕಿಡ್ನಿ ಸ್ವಾಪಿಂಗ್‌ಗೆ ನಿರ್ಧರಿಸಿ, ಡಿ.4ರಂದು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿತು. ಹೀಗಾಗಿ ಪರಿಚಯವೇ ಇಲ್ಲದ ಈ ನಾಲ್ವರ ನಡುವೆ ಬಿಡಿಸಲಾಗದ ನಂಟೊಂದು ಏರ್ಪಟ್ಟಿತು. ಹೀಗೆ ತಾಂಜೀನಿಯಾ ಮತ್ತು ಭಾರತದ ಕುಟುಂಬದ ನಡುವೆ ಹೊಸಬಂಧವೊಂದು ಸೃಷ್ಟಿಯಾಗಿತ್ತು.

ಇದನ್ನೂ ಓದಿ: ಇಲಿಗಳಿಗೂ ಬಂತು ನೋಡಿ ಸ್ಪೆಷಲ್ ಕನ್ನಡಕ! ಇನ್ನು ಅವುಗಳು ಸ್ಟೈಲ್ ಮಾಡ್ಕೊಂಡು ಓಡಾಡಿದ್ರು ಅಚ್ಚರಿ ಪಡಬೇಕಾಗಿಲ್ಲ!

Leave A Reply

Your email address will not be published.