Udupi: ಜ.01 ರಿಂದ ಜ.10ರವರೆಗೆ ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ವತಿಯಿಂದ ಮದ್ಯವ್ಯಸನ ವಿಮುಕ್ತಿ ಶಿಬಿರ ಆಯೋಜನೆ

Udupi news From January 01 to 10 Dr. A.V. Baliga smaraka Hospital Organized Alcohol Free Camp

Udupi: ವೈದ್ಯಕೀಯ ಸೇವೆಯ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿಯೂ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಹೆಸರುವಾಸಿಯಾಗಿರುವ ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ವತಿಯಿಂದ ಪ್ರತೀ ವರ್ಷದಂತೆ ಈ ಬಾರಿಯೂ ಸಹ ಮದ್ಯವ್ಯಸನ ವಿಮುಕ್ತಿ ಶಿಬಿರವನ್ನು ಜನವರಿ 1 ರಿಂದ ಜನವರಿ 10 ರವರೆಗೆ, 10 ದಿನಗಳವರೆಗೆ ಆಯೋಜಿಸಲಾಗಿದೆ.

ಕಳೆದ 20 ವರ್ಷಗಳಿಂದ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯು ಮಾನಸಿಕ ಆರೋಗ್ಯ,ಮದ್ಯವ್ಯಸನ ವಿಮುಕ್ತಿ, ಮಕ್ಕಳ ಮಾರ್ಗದರ್ಶನ ಕ್ಷೇತ್ರದಲ್ಲಿ ಸಮುದಾಯದ ಹಿತವನ್ನೇ ಮುಖ್ಯವಾಗಿ ದೃಷ್ಟಿಯಲ್ಲಿಟ್ಟುಕೊಂಡು ಜನಸಾಮಾನ್ಯರ ಕೈಗೆಟುವ ದರದಲ್ಲಿ ಜನಸ್ನೇಹಿಯಾಗಿ ಸೇವೆ ಸಲ್ಲಿಸುತ್ತಾ ಬರುತ್ತಿದೆ.

ಡಾ. ಎ. ವಿ. ಬಾಳಿಗಾ ಚ್ಯಾರಿಟೀಸ್ ನ ಟ್ರಸ್ಟಿಗಳೆಲ್ಲರೂ ಸಹ ದಿ. ಡಾ. ಅಣ್ಣಪ್ಪ ವಿಠಲ ಬಾಳಿಗಾರ ಆಶಯವನ್ನು ಈ ಟ್ರಸ್ಟಿನ ಮೂಲಕ ಕಳೆದ 20 ವರ್ಷಗಳಿಂದಲೂ ಈಡೇರಿಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಚಾರವೇ ಸರಿ.

ಇದಕ್ಕೆ ಪೂರಕವಾಗಿ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಮನೋವೈದ್ಯರಾದಿಯಾಗಿ ಸಮಸ್ತ ಸಿಬ್ಬಂದಿವರ್ಗವೂ ಇದೇ ನಿಟ್ಟಿನಲ್ಲಿ ಸೇವಾ ಮನೋಭಾವದಿಂದ ಈ ಸಮಾಜಕ್ಕೆ ತಮ್ಮಿಂದಾಗುವ ಸೇವೆಯನ್ನು ಆಸ್ಪತ್ರೆಯ ಮೂಲಕ ನೀಡುತ್ತಾ ಬರುತ್ತಿದ್ದಾರೆ.

ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ 2023 ಕ್ಕೆ 20 ವರ್ಷಗಳನ್ನು ಪೂರೈಸುತ್ತಿದೆ.

ಮದ್ಯ-ಮಾದಕ ವ್ಯಸನ ವಿಮುಕ್ತಿ ಶಿಬಿರಕ್ಕೆ 3 ಲಕ್ಷಗಳಷ್ಟು ಖರ್ಚು ಬರುತ್ತದೆ. ಆಸಕ್ತ ದಾನಿಗಳು ನಮ್ಮ ಈ ಸದುದ್ದೇಶದಲ್ಲಿ ಕೈಜೋಡಿಸುವ ಅವಕಾಶವೂ ಇದ್ದು, ಒಂದು ದಿನದ ಸಂಪೂರ್ಣ ಖರ್ಚು, ಒಂದು ದಿನದ ಉಟೋಪಚಾರದ ಖರ್ಚು, ಒಂದು ದಿನದ ಔಷಧೋಪಚಾರದ ಖರ್ಚುಗಳನ್ನು ಭರಿಸುವುದ ಮೂಲಕ ಸಹೃದಯಿ ದಾನಿಗಳೂ ಸಹ ಈ ಸಮಾಜಮುಖಿ ಕಾರ್ಯದಲ್ಲಿ ತಮ್ಮ ಭಾಗೀದಾರಿಕೆಯನ್ನು ಹೊಂದಲು ಅವಕಾಶವಿದೆ.

ಇಷ್ಟು ಮಾತ್ರವಲ್ಲದೇ ಈ ಶಿಬಿರದ ಯಶಸ್ವಿ ಮತ್ತು ಅಚ್ಚುಕಟ್ಟಿನ ಆಯೋಜನೆಗೆ ಸ್ವಯಂಸೇವಕರಾಗಿ ಬರುವರಿಗೂ ಅವಕಾಶವಿದ್ದು, ದಾನಿಗಳು ಮತ್ತು ಸ್ವಯಂಸೇವಕರಾಗಿ ಭಾಗವಹಿಸಲು ಇಚ್ಛಿಸುವಂತವರು ಸಂಪರ್ಕಿಸಬಹುದಾದಂತಹ ಸಂಖ್ಯೆ: 92428 21215, 2535299, 2535399

ಈ ಸಮಾಜಮುಖಿ ಕಾರ್ಯವನ್ನು ಯಶಸ್ವಿಗೊಳಿಸುವಂತೆ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾಗಿರುವ ಡಾ. ಪಿ. ವೆಂಕಟರಾಯ ಭಂಡಾರಿ ಅವರು ಮಾಧ್ಯಮ ಪ್ರಕಟನೆಯ ಮೂಲಕ ವಿನಂತಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬುಡುಬುಡಿಕೆ ಭವಿಷ್ಯ ಹೇಳ್ತೇನೆ ಅಂತ ಮನೆಗೆ ಬಂದಿದ್ದ ವ್ಯಕ್ತಿ, ಮಹಿಳೆಯ ಪ್ರಜ್ಞೆ ತಪ್ಪಿಸಿ ಮಾಡಿದ್ದೇನು ಗೊತ್ತಾ!

Leave A Reply

Your email address will not be published.