Deadly Accident: ಟ್ರಕ್‌ಗೆ ಡಿಕ್ಕಿ ಹೊಡೆದ ಕಾರು; ಧಗಧಗನೆ ಉರಿದ ಕಾರು, ಬೆಂಕಿಯ ಕೆನ್ನಾಲಿಗೆಗೆ ಮಗು ಸೇರಿ 8 ಮಂದಿಯ ಸಜೀವ ದಹನ!

Uttar Pradesh deadly accident 8 of family death in car truck collision on nainital highway

Uttar Pradesh Deadly Accident: ಶನಿವಾರ ತಡರಾತ್ರಿ ಹೆದ್ದಾರಿಯಲ್ಲಿ ಟ್ರಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹತ್ತಿ ಮಗು ಸೇರಿ ಎಂಟು ಮಂದಿ ಪ್ರಯಾಣಿಕರು ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ. ಈ ಘಟನೆ ಉತ್ತರಪ್ರದೇಶದಲ್ಲಿ (Uttar Pradesh Deadly Accident) ನಡೆದಿದೆ. ಕಾರು ಸೆಂಟರ್‌ ಲಾಕ್‌ ಆಗಿದ್ದ ಕಾರಣ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಏಳು ಮಂದಿ ವಯಸ್ಕರು, ಮತ್ತು ಮಗು ಈ ಬೆಂಕಿಯಲ್ಲಿ ಸಿಕ್ಕಾಕಿಕೊಂಡು ಸಾವು ಕಂಡಿದ್ದಾರೆ ಎಂದು ಪೊಲೀಸರು ವರದಿ ಮಾಡಿದ್ದಾರೆ.

ಕಾರು ಎದುರಿನ ಲೇನ್‌ಗೆ ತಿರುಗಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನೈನಿತಾಲ್‌ ಹೆದ್ದಾರಿಯಲ್ಲಿ ಟ್ರಕ್‌ ಪಕ್ಕದಲ್ಲಿ ಅಪಘಾತದ ದೃಶ್ಯ ಕಂಡು ಬಂದಿದೆ. ಕಾರಿನ ಬಾಗಿಲು ಜಾಮ್‌ ಆಗಿ ತೆಗೆಯಲು ಆಗದೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಕಾರಿನಲ್ಲಿದ್ದವರು ಮದುವೆಗೆ ತೆರಳುತ್ತಿದ್ದರು ಎಂದು ವರದಿಯಾಗಿದೆ.

ಇದನ್ನೂ ಓದಿ: HDK in Kalladka: ಕಲ್ಲಡ್ಕ ಪ್ರಭಾಕರ್‌ ಭಟ್‌ ಶಾಲಾ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ; ಜೈ ಶ್ರೀರಾಮ್‌ ಎಂದು ಹೇಳಿದ ಮಾಜಿ ಸಿಎಂ!

Leave A Reply

Your email address will not be published.