Virtual reality goggles for mice: ಇಲಿಗಳಿಗೂ ಬಂತು ನೋಡಿ ಸ್ಪೆಷಲ್ ಕನ್ನಡಕ! ಇನ್ನು ಅವುಗಳು ಸ್ಟೈಲ್ ಮಾಡ್ಕೊಂಡು ಓಡಾಡಿದ್ರು ಅಚ್ಚರಿ ಪಡಬೇಕಾಗಿಲ್ಲ!

World news scientist invented Virtual reality goggles for mice in Washington

Virtual reality goggles for mice: ಇದೀಗ ಇಲಿಗಳಿಗೂ ಕೂಡ ಕನ್ನಡಕ ರೆಡಿಯಾಗಿದೆ. ಇಲಿಗಳೂ ಕನ್ನಡಕ ಧರಿಸಿ ಅತ್ತಿಂದಿತ್ತ ಓಡಾಡುವ ಸಮಯ ಬಂದಿದೆ. ಅರೆ, ಸಾಮಾನ್ಯವಾಗಿ ಓಡಾಡುವ ಇಲಿಗಳ ಕಾಟವನ್ನೇ ಸಹಿಸಿಕೊಳ್ಳೋಕ್ಕಾಗ್ತಿಲ್ಲ. ಇನ್ನು ಅವುಗಳಿಗೆ ಕನ್ನಡಕ ಬಂದರೆ ಏನು ಗತಿ ಅಂತ ಯೋಚಿಸ್ತಿದ್ದೀರಾ!? ಹಾಗೇನಿಲ್ಲ ಬಿಡಿ. ಆದರೆ ಇದೊಂದು ವಿಶೇಷ ಕನ್ನಡಕವಾಗಿದ್ದು ಇದರ ವಿಶೇಷತೆ ಏನೆಂದು ನೋಡೋಣ ಬನ್ನಿ.

ಇಲಿಗಳ ಮೆದುಳಿನ ಚಟುವಟಿಕೆಗಳನ್ನು ಅರಿತುಕೊಳ್ಳುವುದಕ್ಕಾಗಿ ವಿಜ್ಞಾನಿಗಳು ಅವುಗಳಿಗೆಂದೇ ಪುಟ್ಟದಾದ ವರ್ಚುವಲ್ ರಿಯಾಲಿಟಿ ಕನ್ನಡಕವನ್ನು(Virtual reality goggles for mice)  ಅಭಿವೃದ್ಧಿಪಡಿಸಿದ್ದಾರೆ. ಈ ಕನ್ನಡಕ ಧರಿಸಿಕೊಂಡು ಇಲಿಗಳು ಓಡಾಡುತ್ತಿದ್ದರೆ, ಕಣ್ಣಿಗೆ ಕಾಣುವ ವರ್ಚುವಲ್ ಜಗತ್ತು, ವೈವಿಧ್ಯಮಯ ಸನ್ನಿವೇಶಗಳನ್ನು ಅವುಗಳ ಮೆದುಳು ಹೇಗೆ ಗ್ರಹಿಸುತ್ತದೆ ಎನ್ನುವುದನ್ನು ಅಧ್ಯಯನ ಮಾಡುವುದೇ ಇದರ ಉದ್ದೇಶ. ಇದು ಮೆದುಳಿನ ಕಾರ್ಯನಿರ್ವಹಣೆಯ ಅಧ್ಯಯನದಲ್ಲಿ ದೊಡ್ಡ ಮೈಲುಗಲ್ಲನ್ನು ಸಾಧಿಸಲು ನೆರವಾಗಲಿದೆ ಎನ್ನುವುದು ವಿಜ್ಞಾನಿಗಳ ಅಭಿಮತ.

ಅಮೆರಿಕದ ವಾಷಿಂಗ್ಟನ್ ನಾರ್ತ್‌ವೆಸ್ಟರ್ನ್ ವಿ.ವಿ.ಯ ಸಂಶೋಧಕರಾದ ಡೇನಿಯಲ್ ಡೋಮ್‌ ಬೆಕ್ ನೇತೃತ್ವದ ತಂಡವು 20 ವರ್ಷಗಳಿಂದ ರುಡಿಮೆಂಟರಿ ವರ್ಚುವಲ್ ರಿಯಾಲಿಟಿಯನ್ನು ಬಳಸಿಕೊಂಡು ಇಲಿಗಳ ಮೆದುಳಿನ ಕಾರ್ಯನಿರ್ವಹಣೆ ಬಗ್ಗೆ ಅಧ್ಯಯನ ನಡೆಸುತ್ತಿದೆ. ಆದರೆ ಇಲಿಗಳ ಮೆದುಳಿನ ರಚನೆಯನ್ನು ಅವಲೋಕಿಸಲು ಬಳಸುವ ಯಂತ್ರಗಳು ದೊಡ್ಡ ಗಾತ್ರದಾದ ಕಾರಣ ಅವುಗಳನ್ನು ಇಲಿಗಳಿಗೆ ಅಳವಡಿಸಲು ಸಾಧ್ಯವಾಗುತ್ತಿರಲಿಲ್ಲ. ಈಗ ಅಭಿವೃದ್ಧಿಪಡಿಸಿರುವ ಕನ್ನಡಕಗಳು ಈ ಸಮಸ್ಯೆಗೆ ಮುಕ್ತಿ ಹಾಡಿವೆ.

ಇದನ್ನು ಇಲಿಗಳಿಗೆ ಅಳವಡಿಸಿದಾಗ ಅವುಗಳ ಕಣ್ಣಮುಂದೆ ವರ್ಚುವಲ್ ಜಗತ್ತು ತೆರೆದುಕೊಳ್ಳುತ್ತದೆ. ತನ್ನೆದುರು ಕಾಣುತ್ತಿರುವುದು ಭ್ರಮಾಲೋಕ ಎಂಬ ಅರಿವಿಲ್ಲದೆ ಇಲಿಗಳು ಸಹಜವಾಗಿ ವರ್ತಿಸುತ್ತವೆ. ಆಗ ಅವುಗಳ ಮೆದುಳಿನ ಚಟುವಟಿಕೆಯನ್ನು ಸೂಕ್ಷ್ಮವಾಗಿ ಮತ್ತು ಆಳವಾಗಿ ಅರಿಯಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಸಂಶೋಧಕರು.

ಇದನ್ನೂ ಓದಿ: ಸತತ 21 ವರ್ಷ ಹೋರಾಟ ನಡೆಸಿ ರಾಜಿ ಮಾಡಿಕೊಂಡ 81ರ ವೃದ್ಧ!

Leave A Reply

Your email address will not be published.