Belagavi: ತಾಯಿಯನ್ನು ಅರೆಬೆತ್ತಲೆಗೊಳಿಸಿ, ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ ಯುವಕರು! ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು!

Belagavi crime news shocking news youths attack on mother latest news

Belagavi: ತಾಲೂಕಿನ ವಂಚಮೂರಿ ಗ್ರಾಮದ ಯುವಕ-ಯುವತಿ ಪ್ರೀತಿಸಿ ಓಡಿ ಹೋಗಿದ್ದ ಕಾರಣ ರೊಚ್ಚಿಗೆದ್ದ ಯುವತಿಯೋರ್ವಳನಿಂದಾಗಿ, ಆಕೆಯ ಮನೆಯವರು ಯುವಕನ ತಾಯಿಯನ್ನು ಅರೆಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆಯೊಂದು ಸೋಮವಾರ ಡಿ.11ರ ಬೆಳಗ್ಗೆ ನಡೆದಿದೆ.

ಈ ಘಟನೆಯಿಂದಾಗಿ ಅಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ನಿಯೋಜಿಸಲಾಗಿದೆ.

ಯುವತಿಯ ನಿಶ್ಚಿತಾರ್ಥವು ಸೋಮವಾರ ಡಿ.11 ರಂದು ನಿಗದಿ ಮಾಡಲಾಗಿತ್ತು. ಈಕೆಯನ್ನು ಇದೇ ಗ್ರಾಮದ ಯುವಕ ಪ್ರೀತಿ ಮಾಡುತಿದ್ದ. ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು, ಸೋಮವಾರ ಬೆಳಗಿನ ಜಾವ ಯುವಕ ಪ್ರೇಯಸಿಯನ್ನು ಓಡಿಸಿಕೊಂಡು ಹೋಗಿದ್ದಾನೆ. ಇದರಿಂದ ಸಿಟ್ಟುಗೊಂಡ ಯುವತಿ ಕುಟುಂಬದವರು ಯುವಕನ ತಾಯಿ ಮೇಲೆ ಅಮಾನುಷ ಹಲ್ಲೆ ನಡೆಸಿ, ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆ. ಮನೆಯನ್ನು ಕೂಡಾ ಧ್ವಂಸ ಮಾಡಲಾಗಿದ್ದು, ಮನೆಯ ವಸ್ತುಗಳನ್ನು ಹಾನಿ ಮಾಡಿದ್ದಾರೆ. ಮನೆ ಬಾಗಿಲು, ಕಿಟಕಿ ಮುರಿದಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸರು ವಿಷಯ ತಿಳಿದು ಸ್ಥಳಕ್ಕೆ ಬಂದಿದ್ದು, ಹಲ್ಲೆ ನಡೆಸಿದ ಏಳು ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ : Kerala Hadiya Case: ಕೇರಳ ಮತಾಂತರ ಪ್ರಕರಣದಲ್ಲಿ ಭಾರೀ ಸದ್ದು ಮಾಡಿದ ಹದಿಯಾ ನಾಪತ್ತೆ!!!

Leave A Reply

Your email address will not be published.