Bantwala: ರಾಷ್ಟ್ರೀಯ ಹೆದ್ದಾರಿಯ 12 ಅಂಗಡಿಗಳಲ್ಲಿ ಕಳ್ಳತನಕ್ಕೆ ಯತ್ನಿಸಿದ ಕಳ್ಳ!

crime news thief tried to steal from 12 shops on the National Highway in Bantwala

Bantwala: ಬಂಟ್ವಾಳ ತಾಲೂಕಿನ ಬಿಸಿರೋಡ್‌ ಸುತ್ತಮುತ್ತಲಿನ ಪರಿಸರದಲ್ಲಿ ಕಳ್ಳನೋರ್ವ 12 ಅಂಗಡಿ ಬಳಿ ಜಾಲಾಡಿ 3 ಅಂಗಡಿಗಳಲ್ಲಿ ಕಳ್ಳತನ ನಡೆಸಿರುವ ಘಟನೆಯೊಂದು ನಡೆದಿದೆ. ಈ ಕುರಿತು ಮಾಧ್ಯಮವೊಂದು ಪ್ರಕಟ ಮಾಡಿದೆ.

ಈ ಕಳ್ಳತನ ಮಧ್ಯರಾತ್ರಿ ಸರಣಿ ಕಳ್ಳತನ ನಡೆದಿದೆ ಎನ್ನಲಾಗಿದೆ.

ಮೂರು ಅಂಗಡಿಗಳಿಂದ ಸುಮಾರು 61 ಸಾವಿರ ರೂಪಾಯಿ ಕಳ್ಳತನ ಮಾಡಿರುವ ಕುರಿತು ವರದಿಯಾಗಿದೆ. ಬೈಕಿನಲ್ಲಿ ರಾತ್ರಿ ಬಂದು ಆ ಬಳಿಕ ಹೆಲ್ಮೆಟ್‌ ಧರಿಸಿ ಒಟ್ಟು 12 ಅಂಗಡಿಗಳಲ್ಲಿ ಕಳ್ಳತನ ಮಾಡಲು ಯತ್ನಿಸಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವ ಕುರಿತು ವರದಿಯಾಗಿದೆ. ಹೋಟೆಲ್, ಮೆಲ್ಕಾರಿನ ಸಹಕಾರಿ ಸಂಘಗಳ ಕಚೇರಿ ಸಹಿತ ಹಲವು ಅಂಗಡಿಗಳ ಬೀಗ ಮುರಿದು ಹಣಕ್ಕಾಗಿ ಹುಡುಕಾಡಿದ್ದಾನೆ.

ಶನಿವಾರ ರಾತ್ರಿ ಮಳೆ ಇದ್ದ ಕಾರಣ, ಈ ಸಮಯದಲ್ಲಿ ಕಳ್ಳ ಮಾಡಿರಲು ಬಂದಿರಬೇಕು ಎಂದು ಅಂದಾಜಿಸಲಾಗಿದೆ. ಬಂಟ್ವಾಳ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿದಿದೆ.

ಇದನ್ನು ಓದಿ: ಮೆಟ್ರೋವಿನಲ್ಲಿ ಸಂಚಾರ ಮಾಡುವವರಿಗೆ ಗುಡ್​ ನ್ಯೂಸ್​! ಇಲ್ಲಿದೆ ನೋಡಿ ನ್ಯೂ ಅಪ್ಡೇಟ್​

Leave A Reply

Your email address will not be published.