Dakshina Kannada: ಪತ್ನಿಯ ಎರಡನೇ ಗಂಡನನ್ನು ಪತ್ತೆಹಚ್ಚಿದ ಪತಿರಾಯ! ಇದ್ರಿಂದಾಗಿ ಆತನ ದುಡ್ಡೇ ಉಳೀತು ನೋಡಿ!

Dakshina Kannada news punjalkatte news husband found his wife's second husband at

Dakshina Kannada: ಪುಂಜಾಲಕಟ್ಟೆ,: ವಿವಾಹದ ವಿಚ್ಛೇದನ ಪ್ರಕ್ರಿಯೆ ನ್ಯಾಯಾಲಯದಲ್ಲಿ ವಿಚಾರಣ ಹಂತದಲ್ಲಿರುವಾಗಲೇ ಪತಿಗೆ ತಿಳಿಯದಂತೆ ಪತ್ನಿ ಎರಡನೇ ವಿವಾಹವಾದ ಹಿನ್ನೆಲೆಯಲ್ಲಿ ಮಂಗಳೂರಿನ ಕೌಟುಂಬಿಕ ನ್ಯಾಯಾಲಯವು ಆಕೆಯ ನಿರ್ವಹಣೆಗಾಗಿ ನೀಡಲಾಗುತ್ತಿದ್ದ ಜೀವನಾಂಶವನ್ನು ರದ್ದುಗೊಳಿಸಿ ಆದೇಶವನ್ನು ಹೊರಡಿಸಿದೆ(Dakshina Kannada).

ಪಣಕಜೆ, ಮಂಡಾಡಿ ನಿವಾಸಿ ಉದಯ ನಾಯಕ್ ಮಂಗಳೂರಿನ ಮೇರಿಹಿಲ್‌ನ ಅನಿತಾ ನಾಯಕ್‌ರನ್ನು 2018ರಲ್ಲಿ ಮದುವೆಯಾಗಿದ್ದು, ಬಳಿಕ ಇವರ ದಾಂಪತ್ಯದಲ್ಲಿ ವಿರಸ ಬಂದ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವ್ಯಾಜ್ಯವು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವಾಗಲೇ ಅನಿತಾ ನಾಯಕ್ ಗೌಪ್ಯವಾಗಿ ಎರಡನೇ ವಿವಾಹವಾಗುತ್ತಿದ್ದಾಳೆಂದು ಪತಿ ಬೆಳ್ತಂಗಡಿ ಸಿಜೆ ಮತ್ತು ಜೆಎಂಎಫ್‌ ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.

ಈ ಮಧ್ಯೆ ಉದಯ್ ನಾಯಕ್ ಅವರಿಂದ ಜೀವನಾಂಶ ವನ್ನು ಕೋರಿ ಪತ್ನಿ ಅನಿತಾ ನಾಯಕ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ಸಂದರ್ಭ ನ್ಯಾಯಾಲಯದ ಆದೇಶದಂತೆ ಉದಯ್ ಪತ್ನಿಗೆ ನಿರ್ವಹಣ ಪಾವತಿಯಾಗಿ 15 ಸಾ. ರೂ.ವಿನ ಡಿಮ್ಯಾಂಡ್ ಡ್ರಾಫ್ಟ್ ಅನ್ನು ನೀಡಿದ್ದರು.

ಪತ್ನಿಯ ಎರಡನೇ ವಿವಾಹ ಖಚಿತಪಡಿಸುವ ನಿಟ್ಟಿನಲ್ಲಿ ಪತಿ ಉದಯ ನಾಯಕ್ ಖುದ್ದು ಪತ್ತೆದಾರಿಕೆಗೆ ಮುಂದಾದರು. ಪತ್ನಿ ಅನಿತಾ 2023ರ ಮಾರ್ಚ್ 13ರಂದು ಮುಂಬಯಿಯ ಡೊಂಬಿವಲಿಯಲ್ಲಿ ಹರಿಕೃಷ್ಣ ಗಣಪತ್ ರಾವ್ ಕೀಲು ಅವರೊಂದಿಗೆ ಎರಡನೇ ವಿವಾಹವಾಗಿದ್ದು ಈ ಬಗ್ಗೆ ಮಹಾರಾಷ್ಟ್ರ ಶಾಸನ ರಾಜಪತ್ರದ ಮಾರ್ಚ್ 16-22, 2023ರ ಆವೃತ್ತಿಯಲ್ಲಿ ಪ್ರಕಟಗೊಂಡಿರುವ ದಾಖಲೆಯ ಮೂಲಕ ಉದಯ ನಾಯಕ್ ದೃಢಪಡಿಸಿಕೊಂಡರು.

ಉದಯ್ ನಾಯಕ್ ತನ್ನ ಪತ್ನಿ ಅನಿತಾ ಎರಡನೇ ವಿವಾಹವಾದ ಕುರಿತಂತೆ ಛಾಯಾಚಿತ್ರಗಳ ಸಹಿತ ಪ್ರಕಟವಾದ ಮಹಾರಾಷ್ಟ್ರದ ಗೆಜೆಟ್ ಅನ್ನು ಕೌಟುಂಬಿಕ ನ್ಯಾಯಾಲಯಕ್ಕೆ ಪುರಾವೆಯಾಗಿ ಸಲ್ಲಿಸಿದರು. ಇದರ ವಿಚಾರಣೆ ನಡೆಸಿದ ಪ್ರಧಾನ ನ್ಯಾಯಾಧೀಶರು ಈ ಪುರಾವೆಗಳನ್ನು ಅಂಗೀಕರಿಸಿದ್ದಲ್ಲದೆ ಅನಿತಾಳಿಗೆ ನಿರ್ವಹಣೆಗಾಗಿ ನೀಡಲಾಗುತ್ತಿದ್ದ ಜೀವನಾಂಶವನ್ನು ರದ್ದುಗೊಳಿಸಿ ಆದೇಶವನ್ನು ಹೊರಡಿಸಿದ್ದಾರೆ.

ಇದನ್ನೂ ಓದಿ: Fire Accident: ಮೊಂಬತ್ತಿ ಬೆಳಕಿನಲ್ಲಿ ಬೈಕ್‌ಗೆ ಪೆಟ್ರೋಲ್‌ ಹಾಕುವಾಗ, ಕೈ ಜಾರಿದ ಮೊಂಬತ್ತಿ, ಹತ್ತಿದ ಕಿಡಿ, ಯುವತಿ ಸಾವು!!

Leave A Reply

Your email address will not be published.