Kerala Hadiya Case: ಕೇರಳ ಮತಾಂತರ ಪ್ರಕರಣದಲ್ಲಿ ಭಾರೀ ಸದ್ದು ಮಾಡಿದ ಹದಿಯಾ ನಾಪತ್ತೆ!!!

Hadiya case Father moves Kerala HC alleging illegal abduction of daughter latest news

Hadiya Case: ಪ್ರೀತಿಸಿದ ಹುಡುಗನಿಗಾಗಿ ಇಸ್ಲಾಂಗೆ ಮತಾಂತರಗೊಂಡ ಹದಿಯಾ ಪ್ರಕರಣಕ್ಕೆ (Hadiya Case)ಇದೀಗ ಹೊಸ ತಿರುವೊಂದು ಸಿಕ್ಕಿದೆ. ಕೇರಳದಲ್ಲಿ ಭಾರೀ ಸುದ್ದಿಯಾಗಿದ್ದ ಈ ಘಟನೆಯ ಕುರಿತು ಬಿಗ್‌ ಅಪ್ಡೇಟ್‌ ದೊರಕಿದೆ. ತಮ್ಮ ಪುತ್ರಿ ನಾಪತ್ತೆಯಾಗಿದ್ದಾಳೆ ಎಂದು ಆರೋಪಿಸಿ ಹದಿಯಾಳ ಅಪ್ಪ ಅಶೋಕನ್‌ ಕೆ.ಎಂ. ಕೇರಳ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ಭಾಗವಾಗಿರುವ ಕೆಲವು ವ್ಯಕ್ತಿಗಳು ಹಾಗೂ ಆಕೆಯ ಪತಿಯೇ ಹದಿಯಾಳನ್ನು ಅಕ್ರಮವಾಗಿ ಕೂಡಿಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಮಂಗಳವಾರ ಈ ಪ್ರಕರಣದ ವಿಚಾರಣೆ ನಡೆಯುವ ಸಾಧ್ಯತೆಯಿದೆ.

ಒಂದು ತಿಂಗಳಿನಿಂದ ಹದಿಯಾ ಕಾಣುತ್ತಿಲ್ಲ. ಆಕೆಯ ಫೋನ್‌ ಸ್ವಿಚ್ಡ್‌ ಆಫ್‌ ಆಗಿದೆ ಎಂದು ದೂರಲಾಗಿದೆ. ಮಲಪ್ಪುರಂನಲ್ಲಿ ತಮ್ಮ ಪುತ್ರಿ ಹೋಮಿಯೋಪಥಿ ಕ್ಲಿನಿಕ್‌ ತೆರೆದಿದ್ದಳು. ಅದು ಕೂಡಾ ಮುಚ್ಚಳಾಗಿದೆ. ಪತಿಯೊಂದಿಗೆ ದೂರವಾಗಿ, ಬೇರೊಬ್ಬನನ್ನು ವಿವಾಹವಾಗಿದ್ದಾಗಿ ಆಕೆ ನಮ್ಮೊಂದಿಗೆ ಹೇಳಿದ್ದಳು ಎಂದು ಅಶೋಕನ್‌ ಹೇಳಿರುವ ಕುರಿತು ವರದಿಯಾಗಿದೆ.

ಇದನ್ನೊಂದು ಕಡೆ ಟಿವಿ ಚಾನೆಲ್‌ವೊಂದರಲ್ಲಿ ಮಾತನಾಡಿದ ಹದಿಯಾ, “ನಾನು ನನ್ನ ಹೆತ್ತವರೊಂದಿಗೆ ಸಂಪರ್ಕದಲ್ಲಿದ್ದೇನೆ. ನನಗೆ ಅವರು ತೊಂದರೆ ಕೊಡುತ್ತಿದ್ದಾರೆ. ಸಂಘ ಪರಿವಾರ ನನ್ನ ಅಪ್ಪನನ್ನು ಅಸ್ತ್ರವಾಗಿ ಬಳಸಿದೆ” ಎಂದು ಹೇಳಿದ್ದಳು.

ಇದನ್ನೂ ಓದಿ: Sabarimala Temple: ದರ್ಶನಕ್ಕೆಂದು ಸರದಿ ಸಾಲಿನಲ್ಲಿ ನಿಂತಿದ್ದ 11 ವರ್ಷದ ಬಾಲಕಿ ಕುಸಿದು ಬಿದ್ದು ಸಾವು!

Leave A Reply

Your email address will not be published.