Tiruvanantapuram: ಶಬರಿಮಲೆಯಿಂದ ಬರ್ತಾ ಇದ್ದ ಭಕ್ತರ ವಾಹನ ಓರ್ವ ವ್ಯಕ್ತಿಗೆ ಡಿಕ್ಕಿ! ಮುಂದಾಗಿದ್ದೆ ಅನಾಹುತ

Tiruvanantapuram accident news ayyappa devotees van collides with man latest news

Tiruvanantapuram: ಆಂಧ್ರದಿಂದ ಬಂದಿದ್ದ ಅಯ್ಯಪ್ಪ ಭಕ್ತರನ್ನು ಹೊತ್ತೊಯ್ಯುತ್ತಿದ್ದ ಕಾರೊಂದು ತಿರುವನಂತಪುರಂನ(Tiruvanantapuram) ವೆಂಜರಮೂಡು ತಂಡ್ರಂಪೊಯಿಕಾದಲ್ಲಿ ಹೋಟೆಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಂಗಡಿಯವರೊಬ್ಬರು ಮೃತಪಟ್ಟಿದ್ದಾರೆ. ಇಂದು ಮುಂಜಾನೆ 4.20ಕ್ಕೆ ಅಪಘಾತ ಸಂಭವಿಸಿದೆ. ಅಂಗಡಿ ಮಾಲೀಕ ರಮೇಶ್ (49) ಮೃತರು. ಶಬರಿಮಲೆ ದರ್ಶನ ಮುಗಿಸಿ ಕನ್ಯಾಕುಮಾರಿಗೆ ತೆರಳುತ್ತಿದ್ದ ವಾಹನ ನಿಯಂತ್ರಣ ತಪ್ಪಿ ಎದುರಿನ ನೆಸ್ಟ್ ಬೇಕರಿಗೆ ನುಗ್ಗಿದೆ. ಬೆಳಗ್ಗೆ ಅಂಗಡಿ ತೆರೆದು ಲೈಟ್ ಹಾಕಿ ಅಂಗಡಿಯ ಬಾಗಿಲ ಬಳಿ ನಿಂತಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರು ಅತಿವೇಗದಲ್ಲಿ ಇವರ ಮೇಲೆ ಢಿಕ್ಕಿ ಹೊಡೆದಿದೆ.

ಬಳಿಕ ಸ್ಕೂಟರ್‌ನ್ನು ಜಖಂಗೊಳಿಸಿ ರಮೇಶ್‌ಗೆ ಡಿಕ್ಕಿ ಹೊಡೆದ ನಂತರ ಕಾರು ಪಕ್ಕದ ಮನೆಯ ಗೋಡೆಯನ್ನು ಒಡೆದು 100 ಮೀಟರ್‌ ದೂರಕ್ಕೆ ಪಲ್ಟಿಯಾಗಿದೆ. ಆಸ್ಪತ್ರೆ ತಲುಪುವಷ್ಟರಲ್ಲಿ ರಮೇಶ್ ಮೃತಪಟ್ಟಿದ್ದಾರೆ. ಸ್ಕೂಟರ್ ಸಂಪೂರ್ಣ ಹಾಳಾಗಿದೆ. ಅಂಗಡಿಯ ಒಂದು ಭಾಗಕ್ಕೂ ಹಾನಿಯಾಗಿದೆ. ಸ್ಥಳೀಯರು, ಪೊಲೀಸರು ಮತ್ತು ಅಗ್ನಿಶಾಮಕ ದಳದವರು ರಮೇಶನನ್ನು ಆಸ್ಪತ್ರೆಗೆ ಸ್ಥಳಾಂತರಿಸಿದರು.

ಚಾಲಕ ನಿದ್ರಿಸಿದ್ದು ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತೀರ್ಮಾನವಾಗಿದೆ. ಗಾಯಗೊಂಡ ಅಯ್ಯಪ್ಪ ಭಕ್ತರನ್ನು ವೆಂಜರಮೂಡ್‌ನ ಖಾಸಗಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ.

ಇದನ್ನೂ ಓದಿ: ಸ್ನೇಹಿತ್ ಏನೋ ಎಲಿಮಿನೇಟ್ ಆಗಿ ಆಯ್ತು, ಮುಂದಿನ ವಾರ ಈ ಸ್ಪರ್ಧಿ ಹೋಗ್ಲೇಬೇಕು ಅಂತಿದ್ದಾರೆ ಬಿಗ್ ಬಾಸ್ ಫ್ಯಾನ್ಸ್!

Leave A Reply

Your email address will not be published.