Fire Accident: ಮೊಂಬತ್ತಿ ಬೆಳಕಿನಲ್ಲಿ ಬೈಕ್‌ಗೆ ಪೆಟ್ರೋಲ್‌ ಹಾಕುವಾಗ, ಕೈ ಜಾರಿದ ಮೊಂಬತ್ತಿ, ಹತ್ತಿದ ಕಿಡಿ, ಯುವತಿ ಸಾವು!!

Tumkur fire accident news young woman killed after fire breaks out while putting petrol on bike in light of candle

Fire Accident: ಮೊಂಬತ್ತಿ ಬೆಳಕಿನಲ್ಲಿ ಬೈಕ್‌ಗೆ ಪೆಟ್ರೋಲ್‌ ಹಾಕಲೆಂದು ಹೋದ ಬಾಲಕಿಯ ಜೀವ ಹೋದ ಘಟನೆಯೊಂದು ಕುಣಿಗಲ್‌ ಬಳಿಯ ಯಡೆಯೂರು ಹೋಬಳಿಯ ಕಟ್ಟಿಗೇಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಬೈಕ್‌ಗೆ ಪೆಟ್ರೋಲ್‌ ಹಾಕುವ ಸಂದರ್ಭ ಅಚಾನಕ್‌ ಆಗಿ ಪೆಟ್ರೋಲ್‌ ಬಾಟಲ್‌ ಕೈ ತಪ್ಪಿ ಸ್ಫೋಟಗೊಂಡ ಪರಿಣಾಮ ತೀವ್ರ ಗಾಯಗೊಂಡಿದ್ದ ಸೌಂದರ್ಯ (16) ಭಾನುವಾರ ಮೃತರಾಗಿದ್ದಾರೆ.

ಶುಕ್ರವಾರ ರಾತ್ರಿ ಮನೆಯ ಅಂಗಡಿಯಲ್ಲಿ ವಿದ್ಯುತ್‌ ಇರಲಿಲ್ಲ. ಹಾಗಾಗಿ ಮೊಂಬತ್ತಿ ಹಚ್ಚಲಾಗಿತ್ತು. ಎದುರಿನಲ್ಲಿದ್ದ ಬೈಕ್‌ಗೆ ಪೆಟ್ರೋಲ್‌ ಹಾಕುವಾಗ ತಕ್ಷಣ ವಿದ್ಯುತ್‌ ಬಂದಿದೆ. ಇದರಿಂದ ಗಾಬರಿಗೊಂಡ ಸೌಂದರ್ಯ ಪೆಟ್ರೋಲ್‌ ಬಾಟಲಿ ಕೈ ಬಿಟ್ಟ ಕಾರಣ ಪೆಟ್ರೋಲ್‌ ಚೆಲ್ಲಿ ಮೇಣದಬತ್ತಿಯ ಕಿಡಿಯಿಂದ ಬೆಂಕಿ(Fire Accident) ಹತ್ತಿಕೊಂಡು ಅಂಗಡಿ ಸಾಮಾಗ್ರಿಗೆ ಬೆಂಕಿ ಹಚ್ಚಿಕೊಂಡಿತ್ತು. ಗಾಯಗೊಂಡಿದ್ದ ಸೌಂದರ್ಯ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಅಮೃತೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Bengaluru: ಜಫ್ತಿ ಮಾಡಿದ ವಾಹನಗಳನ್ನು ಕಡಿಮೆ ಮೊತ್ತಕ್ಕೆ ಕೊಡುತ್ತೇನೆಂದು ವಂಚನೆ -ಆರೋಪಿಯ ಬಂಧನ

Leave A Reply

Your email address will not be published.