Old Pension Scheme: ಹಳೆಯ ಪಿಂಚಣಿ ಯೋಜನೆಯ ಭರವಸೆಯ ಕುರಿತು ರಾಜ್ಯಗಳಿಗೆ ಎಚ್ಚರಿಕೆ ನೀಡಿದ RBI!

Business news RBI warns state government about old pension scheme latest news

Old Pension Scheme: ಹಳೆಯ ಪಿಂಚಣಿ ಯೋಜನೆಯನ್ನು ಮತ್ತೆ ಮರು ಸ್ಥಾಪಿಸಬೇಡಿ ಎಂದು RBI (ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ) ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ. ಆರ್‌ಬಿಐ ತನ್ನ ಹೊಸ ಪಿಂಚಣಿ ಯೋಜನೆಗೆ ಬದಲಾಗಿ ಹಳೆಯ ಪಿಂಚಣಿ ಯೋಜನೆಯ ಭರವಸೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಸಾರ್ವಜನಿಕರ ಮನಗೆಲ್ಲಲು ನೀಡುವ ಭರವಸೆಗಳಿಂದ ಆರ್ಥಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀಳಬಹುದು ಎಂದು ರಾಜ್ಯ ಸರಕಾರಗಳಿಗೆ ಸಲಹೆ ನೀಡಲಾಗಿದೆ.

ಇತ್ತೀಚೆಗೆ ಕೆಲವು ರಾಜ್ಯಗಳು ಹಳೆಯ ಪಿಂಚಣಿ ಯೋಜನೆಯನ್ನು (Old Pension Scheme)ಮರುಸ್ಥಾಪಿಸಿವೆ. ಇವುಗಳಲ್ಲಿ ರಾಜಸ್ಥಾನ, ಛತ್ತೀಸ್‌ಗಢ ಮತ್ತು ಪಂಜಾಬ್ ಸೇರಿವೆ. ಜೊತೆಗೆ ಕರ್ನಾಟಕದಲ್ಲೂ ಒಪಿಎಸ್ ಕರೆತರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಹೊಸ ಪಿಂಚಣಿ ಯೋಜನೆಯನ್ನು (ಎನ್‌ಪಿಎಸ್)(NPS) ಮುಂದುವರಿಸುವಂತೆ ಆರ್‌ಬಿಐ ರಾಜ್ಯಗಳಿಗೆ ಸಲಹೆ ನೀಡಿದೆ.

ಆರ್‌ಬಿಐ ವರದಿಯ ಪ್ರಕಾರ, ಒಪಿಎಸ್ ಅನ್ನು ಮರುಸ್ಥಾಪಿಸಿದ ರಾಜ್ಯಗಳ ಮಾದರಿಯಲ್ಲಿ, ಇತರ ರಾಜ್ಯಗಳು ಸಹ ಅದನ್ನು ತರಲು ಪರಿಗಣಿಸಲು ಪ್ರಾರಂಭಿಸಿವೆ. ಹೀಗಾದರೆ ರಾಜ್ಯಗಳ ಮೇಲೆ ಆರ್ಥಿಕ ಹೊರೆ ಹೆಚ್ಚಲಿದ್ದು, ಅಭಿವೃದ್ಧಿ ಕಾಮಗಾರಿಗಳ ವೆಚ್ಚ ಕಡಿಮೆಯಾಗಲಿದೆ. ಒಪಿಎಸ್ ಒಂದು ಹಿನ್ನಡೆಯ ಹೆಜ್ಜೆ ಎಂದು ಆರ್‌ಬಿಐ ಹೇಳಿದೆ. ಇದು ಹಿಂದಿನ ಸುಧಾರಣೆಗಳ ಲಾಭವನ್ನು ಅಳಿಸಿಹಾಕುತ್ತದೆ. ಇದರಿಂದ ಮುಂದಿನ ಪೀಳಿಗೆಗೆ ತೊಂದರೆಯಾಗುವ ಆತಂಕವೂ ಇದೆ.

ಮುಂದಿನ ವರ್ಷ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಜನಪರ ಭರವಸೆಗಳ ಮೂಲಕ ಖರ್ಚು ಹೆಚ್ಚಿಸುವ ಬದಲು ಆದಾಯ ಹೆಚ್ಚಿಸಿಕೊಳ್ಳಲು ಆರ್ ಬಿಐ ಸಲಹೆ ನೀಡಿದೆ. ಎಲ್ಲಾ ರಾಜ್ಯಗಳು ತಮ್ಮ ಗಳಿಕೆಯನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಯೋಚಿಸಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.

Leave A Reply

Your email address will not be published.