Bantwala: ಉಂಡ ಮನೆಗೆ ಕನ್ನ ಹಾಕಿ ಲಕ್ಷಾಂತರ ದೋಚಿದ ಆರೋಪಿಗಳು ಅರೆಸ್ಟ್!!!

Dakshina Kannada crime news 2 thieves arrested at bantwala

Bantwala: ಲಕ್ಷಾಂತರ ರೂ. ನಗ-ನಗದು ದೋಚಿದ ಕೇರಳ ಮಂಜೇಶ್ವರ ಮೂಲದ ಆರೋಪಿಗಳಿಬ್ಬರನ್ನು ಬಂಟ್ವಾಳ ಗ್ರಾಮಾಂತರ ಎಸ್‌.ಐ. ಹರೀಶ್‌ ನೇತೃತ್ವದ ತಂಡ ಬಂಧಿಸಿದೆ. ಉಂಡ ಮನೆಗೆ ಕನ್ನ ಹಾಕಿದ ಆರೋಪಿಗಳಿಂದ ಕಳವುಗೈದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಜೇಶ್ವರ ಮೂಲದ ಪ್ರಸ್ತುತ ಫರಂಗಿಪೇಟೆ ಜುಮಾದಿಗುಡ್ಡ ನಿವಾಸಿ ಅಶ್ರಫ್‌ ಆಲಿ ಮತ್ತು ಬೆಂಗ್ರೆಯ ಕಬೀರ್‌ ಎಂಬುವವರೇ ಬಂಧಿತ ಆರೋಪಿಗಳು.

ಅಕ್ಟೋಬರ್‌ ತಿಂಗಳಿನಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಪುದು ಗ್ರಾಮದ ಕೋಡಿಮಜಲು ಎಂಬಲ್ಲಿ ಮೊಹಮ್ಮದ್‌ ಜಾಪರುಲ್ಲಾ ಇಮಾದ್‌ ಬಿಲ್ಡರ್‌ ಅವರ ಮನೆಯಲ್ಲಿ ಅವರ ಜೊತೆಯಲ್ಲಿ ಸರಿ ಸುಮಾರು ಏಳೆಂಟು ತಿಂಗಳಿನಿಂದ ಕಟ್ಟ ಕಾಮಗಾರಿಯ ಸಹಾಯಕನಾಗಿದ್ದ ಅಶ್ರಫ್‌ ಆಲಿ ಎಂಬಾತ ಈ ಕೆಲಸದ ಜೊತೆಗೆ ಅವರ ಮನೆಗೆಲಸ ಕೂಡಾ ಮಾಡಿಕೊಂಡಿದ್ದ. ಈ ಮೂಲಕ ಮನೆಮಂದಿಯ ಜೊತೆ ವಿಶ್ವಾಸದಿಂದ ಇದ್ದ.

ಆದರೆ ಅ.18 ರಂದು ಮನೆಯವರು ಸಂಬಂಧಿಕರ ಮನೆಗೆ ಹೋದ ಸಂದರ್ಭದಲ್ಲಿ ಬೀಗ ಹಾಕಿ ಹೋಗಿದ್ದರು. ಮನೆ ಮಾಲೀಕ ಜಾಪರುಲ್ಲಾ ಅವರು ಬೆಂಗಳೂರಿಗೆ ಕೆಲಸದ ನಿಮಿತ್ತ ಹೋಗಿದ್ದರು. ಮನೆಯ ಬೀಗವನ್ನು ಅಶ್ರಫ್‌ ಗೆ ನೀಡಿದ್ದರು.

ತಮ್ಮ ಕೆಲಸ ಮುಗಿಸಿ ಅ.23 ತಮ್ಮ ಮನೆಗೆ ಬಂದಾಗ ಮನೆಗೆ ಬಂದಾಗ ಎದುರುಗಡೆ ಲಾಕ್‌ ಆಗಿದ್ದು, ಮನೆಯ ಬೀಗದ ಕೀ ಗಾಗಿ ಅಶ್ರೋ ಗೆ ಕರೆ ಮಾಡಿದಾಗ ಆತನ ಮೊಬೈಲ್‌ ಸ್ವಿಚ್ಡ್‌ ಆಫ್‌ ಬಂದಿತ್ತು. ಇದರಿಂದ ಸಂಶಯಗೊಂಡು ಇವರು ಮನೆಯ ಕಿಟಕಿ ಬಾಗಿಲಿನ ಮೂಲಕ ನೋಡಿದಾ ಬೆಡ್‌ರೂಮಿನ ಕಪಾಟಿನ ಬಾಗಿಲು ತೆರೆದಿದ್ದು ಕಂಡು ಬಂದಿದೆ. ಮನೆಯ ಒಳಗಡೆ ಹೋಗಿ ನೋಡಿದಾಗ ನಗದು, ಚಿನ್ನಾಭರಣ ಕಳವುಗೈದಿರುವುದು ಪತ್ತೆಯಾಗಿದೆ. ಈ ಕುರಿತು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೀಗ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದು ಅವರಿಂದು ಸುಮಾರು 4,50,000 ಮೌಲ್ಯದ ಚಿನ್ನ ಮತ್ತು ನಗದು 4,00,000 ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಒಟ್ಟು ಸೊತ್ತುಗಳ ಮೌಲ್ಯ ರೂ.8,50,000 ಆಗಿದೆ.

ಇದನ್ನೂ ಓದಿ: Old Pension Scheme: ಹಳೆಯ ಪಿಂಚಣಿ ಯೋಜನೆಯ ಭರವಸೆಯ ಕುರಿತು ರಾಜ್ಯಗಳಿಗೆ ಎಚ್ಚರಿಕೆ ನೀಡಿದ RBI!

Leave A Reply

Your email address will not be published.