ರಾಜಭವನದಲ್ಲಿ ಬಾಂಬ್ ಇದೆ! ಪೊಲೀಸ್ ಕಂಟ್ರೋಲ್ ರೂಮ್’ಗೂ ಬಂತು ಬೆದರಿಕೆ ಕರೆ!

police control room got a threat call that there is a bomb in Raj Bhavan

ಈಗೀಗ ಬೆಂಗಳೂರಿನಲ್ಲಿ ಬಾಂಬ್ ಬೆದರಿಕೆ ಕರೆಗಳು ಹೆಚ್ಚು ತಲೆ ಇದೆ. ಇಂತಹ ಕರೆಗಳು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದ್ದಲ್ಲದೆ, ಪೊಲೀಸರಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಾಗೆಯೇ ಬೆಂಗಳೂರಿನ ರಾಜಭವನದಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಕೆಯೊಂದು ಬಂದಿದ್ದು ಪೊಲೀಸರು ತಕ್ಷಣ ಅಲರ್ಟ್ ಆಗಿದ್ದಾರೆ.

ನಿನ್ನೆ ರಾತ್ರಿ ಸುಮಾರು 11.30ರ ಸುಮಾರಿಗೆ ಬೆಂಗಳೂರಿನ ರಾಜಭವನಕ್ಕೆ ಬಾಂಬ್ ಇಡಲಾಗಿದೆ ಎಂದು ಬೆದರಿಕೆ ಕರೆಯೊಂದು ಪೊಲೀಸ್ ಕಂಟ್ರೋಲ್ ರೂಂಗೆ ಬಂದಿದೆ. ಕೂಡಲೇ ಅಲರ್ಟ್ ಆದ ಪೊಲೀಸರು ರಾಜಭವನಕ್ಕೆ ಬಾಂಬ್ ನಿಷ್ಕ್ರಿಯ ದಳದೊಂದಿಗೆ ತೆರಳಿ 11.45ರ ಹೊತ್ತಿಗೆ ತಪಾಸಣೆ ನಡೆಸಿದ್ದಾರೆ. ದೀರ್ಘ ತಪಾಸಣೆಯ ನಂತರ ಇದೊಂದು ನಕಲಿ ಕರೆಯೊಂದು ಸಾಬೀತಾಗಿದೆ. ರಾಜ ಭವನಕ್ಕೆ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಾಹಿತಿ ಸಂಗ್ರಹಿಸಿ ಕರೆಮಾಡಿದವರನ್ನು ಪತ್ತೆ ಹಚ್ಚುವ ಕಾರ್ಯವನ್ನು ಮುಂದುವರೆಸಿದರು.

ಸದ್ಯಕ್ಕೆ ಕಾಲ್ ಬಂದಿರುವ ಮೊಬೈಲ್ ನಂಬರನ್ನು ಟ್ರೇಸ್ ಮಾಡಿದ ಕೇಂದ್ರ ವಿಭಾಗ ಮತ್ತು ಸೈಬರ್ ಪೋಲೀಸರು ಓರ್ವ ಶಂಕಿತನನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಶಂಕಿತ ಯಾರು? ಆತನ ಹಿನ್ನೆಲೆ ಏನೆಂಬುದು ತಿಳಿದು ಬಂದಿಲ್ಲ. ಆದರೆ ಪೊಲೀಸರ ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ರಾಜಭವನದಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ.

Leave A Reply

Your email address will not be published.