Trisha Vs Mansoor Ali Khan: ಮನ್ಸೂರ್‌ ಆಲಿ ಖಾನ್‌ಗೆ ಛೀಮಾರಿ ಹಾಕಿದ ಹೈಕೋರ್ಟ್‌; ಕೋರ್ಟ್‌ ಏನು ಹೇಳಿದೆ ಗೊತ್ತಾ?

Trisha Vs Mansoor Ali Khan case Mansoor Ali Khan was reprimanded by the High Court

Trisha Vs Mansoor Ali Khan: ಲಿಯೋ ಸಿನಿಮಾ ಕಳೆದ ಎರಡು ತಿಂಗಳ ಹಿಂದೆ ತೆರೆ ಕಂಡಿತ್ತು. ಇದರಲ್ಲಿ ಈ ಸಿನಿಮಾದಲ್ಲಿ ವಿಜಯ್‌, ತ್ರಿಶಾ ಜೊತೆ ಮನ್ಸೂರ್‌ ಆಲಿ ಖಾನ್‌ ಕೂಡಾ ನಟಿಸಿದ್ದರು. ಲಿಯೋ ಚಿತ್ರದ ಪ್ರಚಾರ ಸಂದರ್ಶನದಲ್ಲಿ ಮನ್ಸೂರ್‌ ಅವರು ಅತ್ಯಾಚಾರದ ದೃಶ್ಯ ಇಲ್ಲದಿರುವುದಕ್ಕೆ ನನಗೆ ತುಂಬಾ ಬೇಸರ ಇದೆ ಎಂಬ ಮಾತನ್ನು ಮಾಧ್ಯಮದ ಮುಂದೆ ಹೇಳಿದ್ದರು. ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದ್ದವು.

ಇದೀಗ ಮದ್ರಾಸ್‌ ಹೈಕೋರ್ಟ್‌ ಮನ್ಸೂರ್‌ ಆಲಿ ಖಾನ್‌ ನಡೆಯಲ್ಲಿ ತೀವ್ರವಾಗಿ ಖಂಡಿಸಿದೆ. ನಟಿ ತ್ರಿಶಾ ಮತ್ತು ಮನ್ಸೂರ್‌ ಆಲಿ ಖಾನ್‌ ನಡುವಿನ ಈ ವಿವಾದದ ಕುರಿತು ಮದ್ರಾಸ್‌ ಹೈಕೋರ್ಟ್‌ ಮಹತ್ವದ ಸೂಚನೆ ನೀಡಿದ್ದು, ತ್ರಿಶಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ಮನ್ಸೂರ್‌ ಆಲಿ ಖಾನ್‌ ವಿರುದ್ಧ ಕಾನೂನು ಕ್ರಮ ನಡೆಸಬೇಕು ಎಂಬ ಆದೇಶ ನೀಡಿತ್ತು.

ಅನಂತರ ರಾಷ್ಟ್ರೀಯ ಮಹಿಳಾ ಆಯೋಗದ ಶಿಫಾರಸಿನ ಮೇರೆಗೆ ಚೆನ್ನೈನ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಮನ್ಸೂರ್‌ ಆಲಿ ಖಾನ್‌ ವಿರುದ್ಧ ಪ್ರಕರಣ ದಾಖಲಾಯಿತು. ನಂತರ ನಟ, ತ್ರಿಶಾಗೆ ಕ್ಷಮೆಯಾಚಿಸಿದರು. ಇದಾದ ನಂತರ, ನಟ ತ್ರಿಶಾ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡಿದರು. ಡಿ.11 ಹೈಕೋರ್ಟ್‌ ಈ ಕುರಿತು ಮನ್ಸೂರ್‌ ಆಲಿ ಖಾನ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ನೀವು ನಟರು. ಯುವಕರು ನಿಮ್ಮನ್ನು ಮಾದರಿಯಾಗಿ ತೆಗೆದುಕೊಳ್ಳುವಂತೆ ನೀವು ಇರಬೇಕು. ನೀವು ಸಂಸ್ಕಾರಹೀನರಾಗಿ ವರ್ತಿಸುವುದು ಸರಿಯೇ? ಎಂದು ಪ್ರಶ್ನೆ ಮಾಡಿದ ಕೋರ್ಟ್‌, ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವರ್ತಿಸಬೇಕು ಎಂದು ನಟನಿಗೆ ಸಲಹೆ ನೀಡಿ ಎಂದು ಮನ್ಸೂರ್‌ ಪರ ವಕೀಲರಿಗೆ ತಿಳಿಸಿದೆ.

ಇದನ್ನು ಓದಿ: ತುಂಬಾ ಸ್ಟ್ರೆಸ್​ ಆದಾಗ ಈ ಜನರು ಫ್ರೀ ಆಗೋಕೆ ಈ ಟಿಪ್ಸ್​ ಫಾಲೋ ಮಾಡ್ತಾರಂತೆ!

ಡಿ.11 ರಂದು ಮನ್ಸೂರ್‌ ತ್ರಿಶಾ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ಮದ್ರಾಸ್‌ ಹೈಕೋರ್ಟ್‌ ವಜಾಗೊಳಿಸಿದೆ. ಕೇಸು ಹಾಕಬೇಕಿದ್ದು, ನೀವಲ್ಲ, ನಿಮ್ಮ ವಿರುದ್ಧ ತ್ರಿಶಾ ಮೊಕದ್ದಮೆ ಹೂಡಬೇಕಿತ್ತು ಎಂದು ಮನ್ಸೂರ್‌ ಆಲಿ ಖಾನ್‌ ಗೆ ಕೋರ್ಟ್‌ ಛೀಮಾರಿ ಹಾಕಿದೆ

Leave A Reply

Your email address will not be published.