Article 370: ಆರ್ಟಿಕಲ್ 370 ರದ್ಧತಿ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಪಾಕಿಸ್ತಾನದಿಂದ ಅಧಿಕಪ್ರಸಂಗದ ಹೇಳಿಕೆ!!

world news pakistan reacted to supreme court verdict on article 370 aborgation latest news

Article 370: 2019 ರಲ್ಲಿ ಆಗಸ್ಟ್‌ನಲ್ಲಿ ಕೇಂದ್ರ ಸರಕಾರ ಕೈಗೊಂಡ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ ಸೋಮವಾರ ಎತ್ತಿ ಹಿಡಿದಿದೆ. ಈ ಕುರಿತು ಪಾಕಿಸ್ತಾನ ಇದೀಗ ದೊಡ್ಡ ಹೇಳಿಕೆಯೊಂದನ್ನು ನೀಡಿದೆ.

370ನೇ ವಿಧಿ ಕುರಿತ ಸುಪ್ರೀಂ ಕೋರ್ಟ್‌ನ ತೀರ್ಪಿನಿಂದ ಪಾಕಿಸ್ತಾನಕ್ಕೆ ಭಾರೀ ಹೊಡೆತ ಬಿದ್ದಿರುವ ಕುರಿತು ವರದಿಯಾಗಿದೆ. ಈ ಕಾರಣದಿಂದಲೇ ಈಗಿನ ಹಂಗಾಮಿ ಸರ್ಕಾರ ಮಾತ್ರವಲ್ಲದೆ ಮಾಧ್ಯಮಗಳೂ ತಲ್ಲಣಗೊಂಡಿವೆ. ಸೋಮವಾರ ಬೆಳಗ್ಗೆ ನವದೆಹಲಿಯಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪು ಬಂದ ತಕ್ಷಣ, ಹಂಗಾಮಿ ವಿದೇಶಾಂಗ ಸಚಿವ ಜಲೀಲ್ ಅಬ್ಬಾಸ್ ಜಿಲಾನಿ ಅವರು ಪತ್ರಿಕಾಗೋಷ್ಠಿಯಲ್ಲಿ ಸುದೀರ್ಘ ಹೇಳಿಕೆಯನ್ನು ನೀಡಿದರು ಮತ್ತು ಇದಕ್ಕೆ ಯಾವುದೇ ‘ಕಾನೂನು ಮಹತ್ವ’ ಇಲ್ಲ ಎಂದು ಹೇಳಿದ್ದಾರೆ.

ಭಾರತವು ಜಮ್ಮು ಮತ್ತು ಕಾಶ್ಮೀರದ ಸ್ಥಾನಮಾನದ ಏಕಪಕ್ಷೀಯ ನಿರ್ಧಾರಗಳಿಗೆ “ಯಾವುದೇ ಕಾನೂನು ಮೌಲ್ಯವಿಲ್ಲ” ಎಂದು ಜಿಲಾನಿ ಒತ್ತಿಹೇಳಿದ್ದಾರೆ. ಕಾಶ್ಮೀರಿ ಜನರು ಮತ್ತು ಪಾಕಿಸ್ತಾನದ ಇಚ್ಛೆಗೆ ವಿರುದ್ಧವಾಗಿ “ಈ ವಿವಾದಿತ ಪ್ರದೇಶದ ಸ್ಥಾನಮಾನದ ಬಗ್ಗೆ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕು ಭಾರತಕ್ಕೆ ಇಲ್ಲ”, ಎಂದು ಅವರು ಉಲ್ಲೇಖಿಸಿದ್ದಾರೆ.

ಈ ನಿರ್ಧಾರವು ಎರಡು ದೇಶಗಳ ನಡುವಿನ ಗಡಿ ನಿಯಂತ್ರಣ ರೇಖೆಯಲ್ಲಿ (LOC) ನಡೆಯುತ್ತಿರುವ ಶಾಂತಿಯ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ಪಾಕಿಸ್ತಾನಿ ಪತ್ರಕರ್ತರು ಜಿಲಾನಿ ಅವರನ್ನು ಕೇಳಿದಾಗ, ಇದಕ್ಕೆ ಉತ್ತರಿಸಿದ ಜಿಲಾನಿ, “ಕಳೆದ ಎರಡು-ಮೂರು ವರ್ಷಗಳಿಂದ ಎಲ್‌ಒಸಿಯಲ್ಲಿ ಚಾಲ್ತಿಯಲ್ಲಿರುವ ಶಾಂತಿಯ ವಾತಾವರಣವು ಭವಿಷ್ಯದಲ್ಲಿಯೂ ಮುಂದುವರಿಯಲು ನಮ್ಮ ಪ್ರಯತ್ನವಾಗಿದೆ.”

ಇದನ್ನೂ ಓದಿ: BESCOM Recruitment 2023: ಬೆಸ್ಕಾಂ ವಿದ್ಯುತ್‌ ಇಲಾಖೆಯಲ್ಲಿ 400 ಹುದ್ದೆಗಳು; ಯಾವುದೇ ಪರೀಕ್ಷೆ ಇಲ್ಲ, ಕೂಡಲೇ ಅರ್ಜಿ ಸಲ್ಲಿಸಿ!

Leave A Reply

Your email address will not be published.