Wife Swap Case: ಬೆಂಗಳೂರಲ್ಲಿ ಮತ್ತೆ ಸದ್ದು ಮಾಡಿದ ವೈಫ್‌ ಸ್ವಾಪ್‌ ಕೇಸ್‌; ಪತಿ ವಿರುದ್ಧ ಪತ್ನಿ ಕೇಸು ದಾಖಲು!

Wife Swap Case: ಬಸವನಗುಡಿ ಮಹಿಳಾ ಠಾಣೆಗೆ ( wife Swapping) ವೈಫ್‌ ಸ್ವಾಪ್‌ ಕುರಿತು ದೂರೊಂದನ್ನು ಮಹಿಳೆಯೊಬ್ಬರು ನೀಡಿರುವ ಕುರಿತು ವರದಿಯಾಗಿದೆ. ಶ್ರೀಮಂತರ ಹೈ ಫೈ ಸೊಸೈಟಿಯಲ್ಲಿ ಈ ವೈಫ್‌ ಸ್ವಾಪ್‌ ನಡೆಯುತ್ತಿದ್ದು, ಇವೆಲ್ಲ ಬೆಳಕಿಗೆ ಬರುತ್ತಿರಲಿಲ್ಲ. ಇವೆಲ್ಲಾ ಕೇವಲ ಲೈಂಗಿಕ ಸುಖಕ್ಕಾಗಿ ಮಾತ್ರ ನಡೆಯುತ್ತಿರುವುದು ಎಂದು ದಾಖಲಾಗಿದೆ. ಬೆಂಗಳೂರಿನಲ್ಲಿ ಇಂತಹ ಪ್ರಕರಣ ಈ ಹಿಂದೆ ಕೂಡಾ ದಾಖಲಾಗಿರುವ ಕುರಿತು ವರದಿಯಾಗಿತ್ತು.

ತನ್ನ ಹೆಂಡತಿಯನ್ನು ಒಂದು ರಾತ್ರಿಯ ಮಟ್ಟಿಗೆ ಸ್ನೇಹಿತನ ಜೊತೆ ಕಾಲ ಕಳೆಯುವಂತೆ ಮಾಡುವುದು, ಹಾಗೆನೇ ಸ್ನೇಹಿತನ ಹೆಂಡತಿಯ ಜೊತೆ ತಾನು ಇರುವುದು. ಇದನ್ನು ವೈಫ್‌ ಸ್ವಾಪಿಂಗ್‌ ಎಂದು ಹೇಳುತ್ತಾರೆ. ಇವೆಲ್ಲ ಅಮೆರಿಕದಲ್ಲಿ ಇದ್ದ ಪದ್ಧತಿ, ಇದೀಗ ಇಲ್ಲಿಗೆ ಕೂಡಾ ಬಂದಿದೆ.

ಇದನ್ನು ಓದಿ: Udupi: ಖ್ಯಾತ ಸಮಾಜ ಸೇವಕ ಕಾಪು ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆಗೆ ಶರಣು!

ಬೆಂಗಳೂರಿನಲ್ಲಿ ಇದೀಗ ಈ ಪ್ರಕರಣ ದಾಖಲಾಗಿದ್ದು, ಪೂರ್ಣಚಂದ್ರ ಎಂಬಾತ ತನ್ನ ಹೆಂಡತಿಯನ್ನು ವೈಫ್‌ ಸ್ವಾಪ್‌ಗೆ ಒತ್ತಾಯ ಮಾಡಿರುವುದಾಗಿ ವರದಿಯಾಗಿದೆ. ಹಾಗೂ ಹೆಂಡತಿ ಇದಕ್ಕೆ ಒಪ್ಪದಿರುವುದಕ್ಕೆ ಹಲ್ಲೆ ಮಾಡಲಾಗಿದೆ. ಈ ಕುರಿತು ಸ್ವತಃ ಪತ್ನಿಯೇ ದೂರು ನೀಡಿರುವ ಕುರಿತು ವರದಿಯಾಗಿದೆ. ಗಂಡ ಪೂರ್ಣಚಂದ್ರ ಹಾಗೂ ಆತನ ಕುಟುಂಬದವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

 

 

Leave A Reply

Your email address will not be published.