Belthangady: ಬಸ್ಸು ಹತ್ತುವ ಸಂದರ್ಭ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರ ಕಳ್ಳತನ!

chain snatching Belthangady woman gold chain was stolen while boarding the bus

Belthangady: ಬಸ್ಸು ಹತ್ತುವ ಸಮಯದಲ್ಲಿ ಮಹಿಳೆಯೋರ್ವರ ಕೊರಳಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನದ ಸರವೊಂದನ್ನು ದೋಚಿರುವ ಘಟನೆಯೊಂದು ಬೆಳ್ತಂಗಡಿ ಬಸ್ಸು ನಿಲ್ದಾಣದಲ್ಲಿ ನಡೆದಿದೆ.

ಉಜಿರೆ ನಿವಾಸಿ ವಾರಿಜ ಟಿ (53) ಅವರು ಡಿ.12 ರಂದು ಸಂಜೆ ಬೆಳ್ತಂಗಡಿ ಬಸ್‌ ನಿಲ್ದಾಣದಲ್ಲಿ ಧರ್ಮಸ್ಥಳಕ್ಕೆ ಹೋಗುವ ಕೆಎಸ್‌ಆರ್‌ಟಿಸಿ ಬಸು ಹತ್ತವ ಸಂದರ್ಭ ಅಪರಿಚಿತ ವ್ಯಕ್ತಿ ದೂಡಿದ್ದಾನೆ. ಕೂಡಲೇ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರವನ್ನು ತೆಗೆದು ಎಳೆದಿದ್ದಾಣೆ. ಮಹಿಳೆ ಬೊಬ್ಬೆ ಹೊಡೆದರೂ ಸರ ಕದ್ದ ಆರೋಪಿಯ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ.

ಚಿನ್ನದ ಮಾಲೆಯ ಬೆಲೆ 1.44 ಲಕ್ಷ ರೂಪಾಯಿದ್ದಾಗಿದ್ದು, 36 ಗ್ರಾಂ ತೂಕದ್ದಾಗಿದ್ದು, ಈ ಕುರಿತು ವಾರಿಜ ಅವರು ಬೆಳ್ತಂಗಡಿ ಪೊಲೀಸ್‌ ಠಾಣೆಗೆ ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ.

ಇದನ್ನು ಓದಿ: Karnataka Labour Department: ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯ ಬಿಸಿ ತಟ್ಟಲಿದೆಯೇ ಜನಸಾಮಾನ್ಯರಿಗೆ? ಕಾರ್ಮಿಕ ಇಲಾಖೆಯಿಂದ ಹೊಸ ಪ್ರಸ್ತಾವನೆ!!!

Leave A Reply

Your email address will not be published.