Cobra V/s Python: ಬೃಹತ್ ಹೆಬ್ಬಾವನ್ನು ಬೇಟೆಯಾಡಿದ ಕಾಳಿಂಗ ಸರ್ಪ, ವಿಡಿಯೋ ವೈರಲ್!

Cobra V/s Python viral video of Cobra snake hunting the python

ಭಾರೀ ಗಾತ್ರದ ಹೆಬ್ಬಾವನ್ನು ಕಾಳಿಂಗ ಸರ್ಪವೊಂದು ಬೇಟೆಯಾಡಿರುವ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ. ಮನೆಯ ಅಂಗಳದಲ್ಲೇ ಈ ಘಟನೆಯು ನಡೆದಿದ್ದು, ಇದರ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದೆ‌.
ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಕಲ್ಲಾಜೆ ಪ್ರಾಥಮಿಕ ಶಾಲೆಯ ಬಳಿಯ ನಿವಾಸಿ ಕೆ.ಬಾಲಕೃಷ್ಣ ಗೌಡ ಎಂಬವರ ಮನೆಯಂಗಳದಲ್ಲಿ ಈ ದೃಶ್ಯ ಕಂಡು ಬಂದಿದ್ದು, ಸುಮಾರು 16 ಅಡಿ ಉದ್ದದ ಕಾಳಿಂಗ ಸರ್ಪ 8 ಅಡಿ ಉದ್ದದ ಹೆಬ್ಬಾವನ್ನು ಬೇಟೆಯಾಡಿದೆ. ಈ ಮಾಹಿತಿ ಪಡೆದ ತಕ್ಷಣ ಬೆಳ್ತಂಗಡಿ ಲಾಯಿಲದ ಸ್ನೇಕ್ ಅಶೋಕ್ ಸ್ಥಳಕ್ಕೆ ಧಾವಿಸಿದ್ದು, ಹಾವಿನ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ.

ಕಾಳಿಂಗ ಸರ್ಪದ ಹಿಡಿತದಲ್ಲಿದ್ದ ಹೆಬ್ಬಾವನ್ನು ಸ್ನೇಕ್ ಅಶೋಕ್ ರಕ್ಷಣೆ ಮಾಡಿದ್ದು, ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಕಾಳಿಂಗ ಸರ್ಪ ಮತ್ತು ಹೆಬ್ಬಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದು, ಸದ್ಯಕ್ಕೆ ಈ ವಿಡಿಯೋ ವೈರಲ್ ಆಗುತ್ತಿದೆ.

ಇದನ್ನು ಓದಿ: Crime News: ಹೆಣ್ಣು ಹೆತ್ತು ಕೊಳವೆ ಬಾವಿಗೆ ಎಸೆದು ಪರಾರಿ; ಮಗು ರಕ್ಷಣೆ, ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹ!

Leave A Reply

Your email address will not be published.