Patna News: ಜನನಿಬಿಡ ರಸ್ತೆಯಲ್ಲೇ ಕಾಲೇಜು ಹುಡುಗಿಯ ತಲೆಗೆ ಗುಂಡಿಕ್ಕಿ ಹತ್ಯೆ; ಭಯಾನಕ ದೃಶ್ಯ ಸೆರೆ, ವೀಡಿಯೋ ವೈರಲ್‌!

crime news college girl was shot in the head and killed video viral

Bihar News: ತನ್ನ ಪ್ರೀತಿ ನಿರಾಕರಿಸಿದಳೆಂದು, ಕೋಚಿಂಗ್‌ ಕ್ಲಾಸ್‌ಗೆಂದು ತೆರಳುತ್ತಿದ್ದ 12ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳನ್ನು ಯುವಕನೋರ್ವ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆಯೊಂದು ನಡೆದಿದೆ. ಈ ಘಟನೆ ಪಾಟ್ನಾದ ಮಸೌರ್ಹಿಯ ಮಣಿಚಕ್‌ ಬಳಿ ನಡೆದಿದೆ.

ಗುಂಡು ಹಾರಿಸಿ ಅಲ್ಲಿಂದ ಯುವಕ ಪರಾರಿಯಾಗಿದ್ದಾನೆ. ಈ ಘಟನೆಯ ಬಗ್ಗೆ ತಿಳಿದ ತಕ್ಷಣ ಸಹಾಯಕ ಪೊಲೀಸ್‌ ವರಿಷ್ಠಾಧಿಕಾರಿ ಸ್ಥಳಕ್ಕೆ ಬಂದಿದ್ದು, ಕೂಡಲೇ ಬಾಲಕಿಯನ್ನು ಉಪವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆದರೆ ವೈದ್ಯರು ಆಕೆ ಸಾವನ್ನಪ್ಪಿರುವದಾಗಿ ಘೋಷಣೆ ಮಾಡಿದ್ದಾರೆ.

ವಿದ್ಯಾರ್ಥಿನಿ ಎಂದಿನಂತೆ ಕೋಚಿಂಗ್‌ ಕ್ಲಾಸ್‌ಗೆ ಹೋಗಲೆಂದು ನಡೆದುಕೊಂಡು ಹೋಗುತ್ತಿದ್ದಳು. ಆಗಲೇ ಅಲ್ಲಿ ಹೊಂಚು ಹಾಕಿ ಕುಳಿತಿದ್ದ ಯುವಕ ಮಣಿಚಾಕ್‌ ಬಂದು ಆಕೆಯ ತಲೆಗೆ ಗುಂಡು ಹಾರಿಸಿದ್ದಾನೆ. ಇದನ್ನು ಕಂಡು ಅಲ್ಲಿ ನಡೆದು ಕೊಂಡು ಹೋಗುತ್ತಿರುವ ಜನರು ಭಯಭೀತರಾಗಿ, ಏನಾಗುತ್ತಿದೆ ಎಂದು ಅರ್ಥ ಮಾಡಿಕೊಳ್ಳುವ ಮೊದಲೇ ಆ ಯುವಕ ಅಲ್ಲಿಂದ ಪರಾರಿಯಾಗಿದ್ದಾನೆ.

ಇದನ್ನು ಓದಿ: ಸಿಬಿಎಸ್ಇ ಅಂತಿಮ ವೇಳಾಪಟ್ಟಿ ರಿಲೀಸ್! ಇಲ್ಲಿದೆ ನೋಡಿ ಎಸ್ಸೆಸ್ಸೆಲ್ಸಿ ಮತ್ತು ಸೆಕೆಂಡ್ ಪಿಯುಸಿ ಟೈಮ್ ಟೇಬಲ್

ಬಾಲಕಿಯನ್ನು ಚಾಪೌರ್ ಪಂಚಾಯತ್‌ನ ಕಾಜಿಚಕ್ ಗ್ರಾಮದ ಕಮಲೇಶ್ ಕುಮಾರ್ ಅವರ ಪುತ್ರಿ ಅನಾಮಿಕಾ ಎಂದು ಗುರುತಿಸಲಾಗಿದ್ದು, ಮಸೋಧಿಯ ತಾರೆಗ್ನಾದಲ್ಲಿರುವ ತನ್ನ ತಾಯಿಯ ಅಜ್ಜನ ಮನೆಯಲ್ಲಿ ಓದುತ್ತಿದ್ದಳು. ಘಟನೆಯ ನಂತರ ಮಸೋದಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಥಳಕ್ಕಾಗಮಿಸಿದ ಎಸ್‌ಐ ಮನೋಜ್‌ಕುಮಾರ್‌, ಮೃತರನ್ನು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ. ಹಂತಕರ ಪತ್ತೆಗಾಗಿ ದಾಳಿ ನಡೆಸಲಾಗುತ್ತಿದೆ.

Leave A Reply

Your email address will not be published.