ರೈಲಿನಲ್ಲಿ ಪ್ರಯಾಣಿಸುವವರ ಗಮನಕ್ಕೆ; ಬೆಂಗಳೂರು-ಮಂಗಳೂರು ರೈಲು ಒಂದು ವಾರ ರದ್ದು!!!

ರೈಲಿನಲ್ಲಿ ಒಂದು ಊರಿನಿಂದ ಇನ್ನೊಂದು ಊರಿಗೆ ಪ್ರಯಾಣ ಬೆಳೆಸುವ ಯೋಚನೆಯಲ್ಲಿದ್ದರೆ ನಿಮಗಿದೋ ಒಂದು ಸೂಚನೆ. ಈ ಕೆಳಗೆ ನೀಡಲಾದ ರೈಲುಗಳನ್ನು ಕಾರಣಾಂತರಗಳಿಂದ ರದ್ದುಗೊಳಿಸಲಾಗಿದೆ. ವಿವರ ಇಲ್ಲಿದೆ.

ಡಿ.14ರಿಂದ ಡಿ.22ರವರೆಗೆ 20 ರೈಲು ಸೇವೆಯನ್ನು ಹಾಸನದಲ್ಲಿ ಯಾರ್ಡ್ ಪುನರ್ ನಿರ್ಮಾಣ ಕಾರ್ಯ ಹಿನ್ನೆಲೆಯಲ್ಲಿ ರದ್ದುಗೊಳಿಸಿರುವುದಾಗಿ ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ ಎಂದು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಪ್ರಕಟ ಮಾಡಿದೆ.

ಡಿ.14ರಿಂದ ಡಿ.22ರವರೆಗೆ ಮೈಸೂರು – ಅರಸಿಕೆರೆ (06214), ಅರಸಿಕೆರೆ -ಮೈಸೂರು (06213), ಯಶವಂತಪುರ- ಮೈಸೂರು (16207), ಮೈಸೂರು – ಯಶವಂತಪುರ (16208), ಮೈಸೂರು-ತಾಳಗುಪ್ಪ (16222), ಮೈಸೂರು -ಅರಸಿಕೆರೆ (06268), ಅರಸಿಕೆರೆ -ಮೈಸೂರು (06267), ಮೈಸೂರು -ಸರ್.ಎಂ.ವಿ.ಬೆಂಗಳೂರು (06269) ರೈಲನ್ನು ರದ್ದುಗೊಳಿಸಲಾಗಿದೆ.

ಡಿ.15ರಿಂದ ಡಿ.23ರವರೆಗೆ ತಾಳಗುಪ್ಪ – ಮೈಸೂರು (16221), ಡಿ.16ರಿಂದ ಡಿ.20ರವರೆಗೆ ಕೆಎಸ್‌ಆರ್ ಬೆಂಗಳೂರು-ಕಣ್ಣೂರು (16511), ಡಿ.17ರಿಂದ ಡಿ.21ರವರೆಗೆಗೆ ಕಣ್ಣೂರು – ಕೆಎಸ್‌ಆರ್ ಬೆಂಗಳೂರು (16512), ಡಿ.16 ರಿಂದ ಡಿ.20ರವರೆಗೆ ಕೆಎಸ್‌ಆರ್ ಬೆಂಗಳೂರು – ಕಾರವಾರ (16595), ಡಿ.17ರಿಂದ ಡಿ.21ರವರೆಗೆ ಕಾರವಾರ – ಬೆಂಗಳೂರು (16596), ಡಿ.13ರಿಂದ ಡಿ.21ರವೆಗೆ ಎಸ್‌ಎಂವಿಟಿ ಬೆಂಗಳೂರು -ಮೈಸೂರು (16270) ರದ್ದುಗೊಳಿಸಲಾಗಿದೆ.

ಇದನ್ನು ಓದಿ: Bank Nominee: ಬ್ಯಾಂಕಿಗೆ ಹಣ ಹಾಕುವ ಮುನ್ನ ಈ ಕೆಲಸ ಖಂಡಿತ ಮಾಡಿ! ಕಷ್ಟಪಟ್ಟು ದುಡಿದ ಹಣ ಸಿಗದೇ ಹೋಗಬಹದು!!!

ಡಿ.16ರಂದು ಯಶವಂತಪುರ – ಮಂಗಳೂರು ಜಂಕ್ಷನ್ (16539), ಡಿ.17ರಂದು ಮಂಗಳೂರು ಜಂಕ್ಷನ್ – ಯಶವಂತಪುರ (16540) ರೈಲು ಸಂಚಾರ ಇರುವುದಿಲ್ಲ. ಡಿ.14,17, 19 ಮತ್ತು 21ರಂದು ಯಶವಂತಪುರ – ಮಂಗಳೂರು ಜಂಕ್ಷನ್ (16575) ಹಾಗೂ ಡಿ.15, 18, 20 ಮತ್ತು 22ರಂದು ಮಂಗಳೂರು ಜಂಕ್ಷನ್ – ಯಶವಂತಪುರ (16576) ರೈಲು ರದ್ದುಗೊಳಿಸಲಾಗಿದೆ. ಯಶವಂತಪುರ – ಕಾರವಾರ ನಡುವೆ ಸಂಚರಿಸುವ (16515) ರೈಲನ್ನು ಡಿ.13, 15, 18, 20 ಮತ್ತು 22ರಂದು ರದ್ದುಗೊಳಿಸಲಾಗಿದೆ. ಕಾರವಾರ – ಯಶವಂತಪುರ ನಡುವೆ ಸಂಚರಿಸುವ (16516) ರೈಲನ್ನು ಡಿ.14, 16, 19, 21 ಹಾಗೂ 23 ರಂದು ಸಂಚಾರ ರದ್ದುಗೊಳಿಸಲಾಗಿದೆ ಎಂದು ಪ್ರಕಟಿಸಿದ್ದಾರೆ.

Leave A Reply

Your email address will not be published.