Vitla: ವಿವಾಹಿತ ಮಹಿಳೆಯ ಮೃತದೇಹ ಬಾವಿಯಲ್ಲಿ ಪತ್ತೆ;

Vitla news death news crime news dead body of a married woman was found in a well

Vitla: ವಿವಾಹಿತ ಮಹಿಳೆಯೋರ್ವಳ ಮೃತದೇಹವೊಂದು ಪತ್ತೆಯಾದ ಘಟನೆಯೊಂದು ಪೆರ್ಲ ಅಡ್ಕಸ್ಥಳ ಸಮೀಪದ ಪಾಂಡಿಗಯದಲ್ಲಿ ನಡೆದಿದೆ.

ದಿವ್ಯಾ (28) ಮೃತ ಮಹಿಳೆ. ಇವರು ಪಾಂಡಿಗಯ ಯೋಗೇಶ್‌ ನಾಯಕ್‌ ಅವರ ಪತ್ನಿ. ಸೋಮವಾರ ಸಂಜೆ ಬಳಿಕ ನಾಪತ್ತೆಯಾಗಿದ್ದರು ದಿವ್ಯಾ. ಹಾಗಾಗಿ ಮನೆಮಂದಿ ಹುಡುಕಾಟ ಮಾಡಲು ಶುರು ಮಾಡಿದಾಗ ಅವರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ಈ ಬಾವಿಗೆ ಆವರಣ ಗೋಡೆ ಇಲ್ಲ ಎಂದು ವರದಿಯಾಗಿದೆ. ಅನಂತರ ಕಾಸರಗೋಡು ಅಗ್ನಿಶಾಮಕ ದಳ ಸಿಬ್ಬಂದಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.

ಇದನ್ನು ಓದಿ: Belthangady: ಬಸ್ಸು ಹತ್ತುವ ಸಂದರ್ಭ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರ ಕಳ್ಳತನ!

ಕಾಸರಗೋಡು ಸರಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬದಿಯಡ್ಕ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.

Leave A Reply

Your email address will not be published.