Sullia: ಮಂಡೆಕೋಲು ಗಡಿ ಪ್ರದೇಶದಲ್ಲಿ ಕಾಡಾನೆಗಳ ಹಿಂಡು ಪತ್ತೆ!!

Sullia: ತಾಲೂಕಿನ ಮಂಡೆಕೋಲು ಗಡಿ ಪ್ರದೇಶದಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದ್ದು,ಇದನ್ನು ಕಂಡು ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.  ಕಳೆದ ಕೆಲವು ದಿನಗಳಿಂದ ಇಲ್ಲಿ ಆನೆ ಬೀಡು ಬಿಟ್ಟಿರುವುದರಿಂದ ಸ್ಥಳೀಯರು ಭಯಗೊಂಡಿದ್ದಾರೆ ಎಂದು ವರದಿಯಾಗಿದೆ. ಒಟ್ಟು 9 ಕಾಡಾನೆಗಳು ಇರುವುದಾಗಿ ಹೇಳಲಾಗಿದೆ.

ಮಂಡೆಕೋಲು ಸಮೀಪದ ಪಂಜಿಕಲ್ಲು ಬಳಿಯಲ್ಲಿ ಪಯಸ್ವಿನಿ ನದಿಯಲ್ಲಿ 9 ಆನೆಗಳ ಹಿಂಡು ಕಂಡು ಬಂದಿದೆ. ಇಲ್ಲಿ ಹತ್ತಿರದಲ್ಲಿ ಮನೆಗಳು ಕೂಡಾ ಇರುವದರಿಂದ ಸ್ಥಳೀಯ ನಿವಾಸಿಗಳು ಭಯಗೊಂಡಿದ್ದಾರೆ. ಮರಿ ಆನೆ ಕೂಡಾ ಈ ಹಿಂಡಿನಲ್ಲಿದ್ದು, ಇದೇ ಪರಿಸರದಲ್ಲಿ ಬೀಡು ಬಿಟ್ಟಿದೆ ಎಂದು ವರದಿಯಾಗಿದೆ.

Leave A Reply

Your email address will not be published.